ಆಸ್ತಿ ವಿಚಾರವಾಗಿ ಭಾರತದಲ್ಲಿ ಸಾಕಷ್ಟು ಕಾನೂನುಗಳಿವೆ. ಆದರೂ ಕೂಡ ಎಲ್ಲಾ ರೀತಿಯ ಕಾನೂನುಗಳು ಎಲ್ಲರಿಗೂ ತಿಳಿದಿಲ್ಲ. ಹಿಂದೂ ಲಾ ಹೇಳುವ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಕುಟುಂಬದ ಎಲ್ಲರಿಗೂ ಅಂದರೆ ತಂದೆ ಮಕ್ಕಳು ಮೊಮ್ಮಕ್ಕಳಿಗೆ ಪಾಲು ಸಿಗುತ್ತದೆ.ಆದರೆ ಒಂದು ವೇಳೆ ಮದುವೆಯಾಗಿ ಅವರು ತಮ್ಮ ಮದುವೆಯನ್ನು ರದ್ದು ಮಾಡಿಕೊಂಡಿದ್ದರೆ, ಅಥವಾ ಮದುವೆ ಆಗದೇ ಅವರಿಗೆ ಮಕ್ಕಳಿದ್ದರೆ ಅಂಥವರಿಗೆ ಜನಿಸಿದ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿದೆ ಎಂಬ ವಿಷಯದ ಕುರಿತು ನಾವಿಲ್ಲಿ ತಿಳಿಸಿದ್ದೇವೆ.
ರದ್ದುಗೊಳಿಸಲಾದ ಅಥವಾ ರದ್ದುಗೊಳಿಸಬಹುದಾದ ಮದುವೆಯಿಂದ ಜನಿಸಿದ ಮಕ್ಕಳು, ಹಿಂದೂ ಉತ್ತರಾಧಿಕಾರ ಕಾಯ್ದೆ ಅನ್ವಯ ಪಾಲಕರ ಆಸ್ತಿಯಲ್ಲಿ ಹಕ್ಕು ಹೊಂದಿದ್ದಾರೆ ಎಂಬ ಮಹತ್ವದ ವಿಚಾರವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.ಈ ಬಗ್ಗೆ ಅನೇಕ ದಿನಗಳಿಂದ ಕೋರ್ಟ್ ನಲ್ಲಿ ಕೇಸು ನಡೆಯುತ್ತಿದ್ದು, ಇದೀಗ ತೀರ್ಪನ್ನು ಪ್ರಕಟಿಸಲಾಗಿದೆ.ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಈ ಕುರಿತು ತೀರ್ಪು ನೀಡಿದೆ.
ಮದುವೆಗೂ ಮುನ್ನ ಜೋಡಿಗೆ ಜನಿಸಿದ ಮಕ್ಕಳಿಗೆ ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಪಿತ್ರಾರ್ಜಿತ ಆಸ್ತಿ ಹಕ್ಕು ಇದೆಯೇ ಎಂಬುದಕ್ಕೆ ಸಂಬಂಧಿಸಿ 2011ರಲ್ಲಿ ದಾಖಲಾಗಿದ್ದ ಅರ್ಜಿಗೆ ಸಂಬಂಧಿಸಿ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ. ರದ್ದುಗೊಳಿಸಲಾದ ಅಥವಾ ರದ್ದುಗೊಳಿಸಬಹುದಾದ ಮದುವೆಯಿಂದ ಜನಿಸಿದ ಮಕ್ಕಳು, ತಮ್ಮ ಪಾಲಕರ ಸ್ವಯಾರ್ಜಿತ ಆಸ್ತಿಯಲ್ಲಿ ಮಾತ್ರ ಹಕ್ಕು ಹೊಂದಿದ್ದಾರೆಯೇ ಎಂಬ ಪ್ರಶ್ನೆಯನ್ನೂ ನ್ಯಾಯಪೀಠವು ಇತ್ಯರ್ಥಪಡಿಸಿದೆ. ಈ ಕುರಿತ ವಿವರವಾದ ಆದೇಶ ಲಭ್ಯವಾಗಬೇಕಿದೆ.
2011ರಲ್ಲಿ ಆರಂಭವಾದ ಈ ಕೇಸ್ 2020 ಮೂರರ ವರೆಗೂ ನಡೆದಿದ್ದು , ಇಷ್ಟು ವರ್ಷಗಳ ನಂತರ ಈ ಕೇಸಿನ ಮಹತ್ವದ ತೀರ್ಪು ಹೊರಬಿದ್ದಿದೆ.ಇನ್ಮುಂದೆ ರದ್ದು ಪಡಿಸಬಹುದಾದ ಅಥವಾ ರದ್ದಾದ ಮದುವೆಯಿಂದ ಜನಿಸಿದ ಮಕ್ಕಳು ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲುದಾರರಾಗುತ್ತಾರೆ ಎಂದು ಹೇಳಬಹುದಾಗಿದೆ.