Karnataka Times
Trending Stories, Viral News, Gossips & Everything in Kannada

USA Gold Price: ಅಮೆರಿಕಾದಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ?

ಪ್ರತಿಯೊಬ್ಬರೂ ಕೂಡ ತಮ್ಮ ಹಣವನ್ನು ಯಾವುದಾದರು ರೂಪದಲ್ಲಿ ತಮ್ಮ ಕೊನೆಯ ಕಾಲದವರೆಗೂ ಕೂಡ ತಮ್ಮವರಿಗಾಗಿ ಹಾಗೂ ತಮಗಾಗಿ ಉಳಿತಾಯ ಮಾಡಿಟ್ಟಿರಬೇಕು ಎನ್ನುವುದಾಗಿ ಭಾವಿಸಿರುತ್ತಾರೆ. ಕೆಲವರು ಆಸ್ತಿಯನ್ನು ಖರೀದಿಸಿದರೆ (Property Purchase) ಇನ್ನು ಕೆಲವರು ಚಿನ್ನವನ್ನು (Gold) ಖರೀದಿಸಿ ಅವುಗಳನ್ನು ತಮ್ಮ ಕಷ್ಟಕಾಲಕ್ಕಾಗಿ ಅಥವಾ ತಮ್ಮ ಕೊನೆಯ ಕಾಲಕ್ಕಾಗಿ ಇಲ್ಲವೇ ತಮ್ಮವರಿಗಾಗಿ ತಮ್ಮ ನಂತರ ನೀಡುವುದಕ್ಕಾಗಿ ಖರೀದಿಸುತ್ತಾರೆ.

Advertisement

ಅದರಲ್ಲೂ ವಿಶೇಷವಾಗಿ ಚಿನ್ನ ಖರೀದಿ ಮಾಡುವಾಗ ಕೂಡ ವಿದೇಶದಲ್ಲಿರುವವರು ಭಾರತಕ್ಕಿಂತ ಹೆಚ್ಚಾಗಿ ವಿದೇಶದಿಂದಲೇ ಬರುವಾಗ ಚಿನ್ನವನ್ನು ಖರೀದಿಸಿ ತರುವುದು ಸರ್ವೇಸಾಮಾನ್ಯವಾಗಿರುತ್ತದೆ ಯಾಕೆಂದರೆ ಭಾರತದ ಚಿನ್ನದ ಬೆಲೆಗಿಂತ ಅಲ್ಲಿನ ಚಿನ್ನದ ಬೆಲೆ (Gold Price) ಕಡಿಮೆಯಾಗಿರುತ್ತದೆ ಎನ್ನುವ ಕಾರಣಕ್ಕಾಗಿ. ಅದರಲ್ಲೂ ವಿಶೇಷವಾಗಿ ಇವತ್ತಿನ ಆರ್ಟಿಕಲ್ ನಲ್ಲಿ ನಾವು ಮಾತನಾಡಲು ಹೊರಟಿರೋದು ಅಮೆರಿಕಾದ ಚಿನ್ನದ ಬೆಲೆಯನ್ನು (USA Gold Price).

Advertisement

ಅಮೆರಿಕ ದೇಶ ವಿಶ್ವದ ದೊಡ್ಡಣ್ಣ ಎಂಬುದಾಗಿ ಕರೆಯಲಾಗುತ್ತದೆ ಹಾಗೂ ಚಿನ್ನದ ವಿಚಾರಕ್ಕೆ ಬಂದರೆ ಅತ್ಯಂತ ಹೆಚ್ಚು ಚಿನ್ನದ ರಿಸರ್ವ್ ಅನ್ನು ಹೊಂದಿರುವಂತಹ ದೇಶ (Largest Gold Reserve Country) ಎಂಬುದಾಗಿ ಕೂಡ ಅಮೆರಿಕವನ್ನು ಕರೆಯಲಾಗುತ್ತದೆ. ಸಾಕಷ್ಟು ವಿಚಾರಗಳಲ್ಲಿ ಶ್ರೀಮಂತವಾಗಿರುವಂತಹ ಅಮೆರಿಕಾ ದೇಶ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿಶ್ವದ ಅತ್ಯಂತ ದೊಡ್ಡ ಆರ್ಥಿಕ ಶಕ್ತಿಯಾಗಿ ಕೂಡ ಕಾಣಿಸಿಕೊಳ್ಳುತ್ತದೆ.

Advertisement

ಇನ್ನು ನಮ್ಮ ಭಾರತೀಯರ ವಿಚಾರಕ್ಕೆ ಬಂದ್ರೆ ಹೆಚ್ಚಿನ ಭಾರತೀಯರು ಅಮೆರಿಕಾಗೆ ಹೋಗಿ ನೆಲೆಸಿ ಅಲ್ಲಿ ವಿದ್ಯಾಭ್ಯಾಸ ಅಥವಾ ಕೆಲಸವನ್ನು ಮಾಡಿಕೊಂಡು ಅಲ್ಲೇ ಇರುವ ಆಸೆಯನ್ನು ಕೂಡ ಹೊಂದಿರುತ್ತಾರೆ. ಈಗಲೂ ಕೂಡ ಅಮೆರಿಕಾ ದೇಶದಲ್ಲಿ ಅಮೆರಿಕ ಜನರನ್ನು ಹೊರತುಪಡಿಸಿದರೆ ಅತ್ಯಂತ ಹೆಚ್ಚು ವಿದೇಶಿಗರು ಯಾರಾದರೂ ಇದ್ದಾರೆ ಎಂದರೆ ಅದು ಖಂಡಿತವಾಗಿ ಭಾರತೀಯರು ಎಂದರೆ ತಪ್ಪಾಗಲಾರದು. ಹಾಗಿದ್ರೆ ಬನ್ನಿ ಈ ಅಮೇರಿಕಾದಲ್ಲಿ ಚಿನ್ನದ ಬೆಲೆ (Gold Price in USA) ಎಷ್ಟು ಎನ್ನುವುದನ್ನು ತಿಳಿಯೋಣ.

Advertisement

ಅಮೆರಿಕಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (USA Gold Price) ಒಂದು ಗ್ರಾಂ ಗೆ 59.50 ಡಾಲರ್ ಅಂದ್ರೆ ಭಾರತದ ರೂಪಾಯಿಗೆ ಕನ್ವರ್ಟ್ ಮಾಡಿದರೆ ರೂ.4,920 ಆಗಿದ್ದು ಅದೇ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 595 ಡಾಲರ್ ಅಂದರೆ 49,204 ಆಗಿದೆ. 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 64.50 ಅಮೆರಿಕನ್ ಡಾಲರ್ ಆಗಿದೆ ಅಂದ್ರೆ ಭಾರತದ ರೂಪಾಯಿಯಲ್ಲಿ 5333 ರೂಪಾಯಿ ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 645 ಡಾಲರ್ ಅಂದರೆ 53339 ರೂಪಾಯಿ ಆಗಿದೆ. ಇದು ಸದ್ಯದ ಮಟ್ಟಿಗೆ ಅಮೆರಿಕದಲ್ಲಿರುವಂತಹ ಚಿನ್ನದ ಬೆಲೆ (USA Gold Price) ಯಾಗಿದೆ.

Know the USA gold price for per 10 grams

Leave A Reply

Your email address will not be published.