Karnataka Times
Trending Stories, Viral News, Gossips & Everything in Kannada

Praggnanandhaa: ಚೆಸ್ ಲೋಕದ ಬುದ್ದಿವಂತ ಹುಡುಗ ಪ್ರಜ್ಞಾನಂದ ಸಸ್ಯಾಹಾರಿಯಾ ಅಥವಾ ಮಾಂಸಹಾರಿಯಾ?

Advertisement

ಇತ್ತೀಚಿನ ವರ್ಷಗಳಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ನಮ್ಮ ಭಾರತ ದೇಶದಲ್ಲಿ ಕೇವಲ ಕ್ರಿಕೆಟ್ ಮಾತ್ರವಲ್ಲದೆ ಬೇರೆ ಕ್ಷೇತ್ರದ ಕ್ರೀಡಾಪಟುಗಳು ಕೂಡ ನಮ್ಮ ಭಾರತ ದೇಶದ ಹೆಸರನ್ನು ಪದಕಗಳ ಮೂಲಕ ಭೂಪಟದ ತುತ್ತ ತುದಿಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರು ಮೆಚ್ಚಿಕೊಳ್ಳಲೇ ಬೇಕಾಗಿರುವಂತಹ ವಿಚಾರವಾಗಿದ್ದು ಭಾರತೀಯರಾಗಿ ನಾವು ಕೂಡ ಅವರಿಗೆ ಪ್ರೋತ್ಸಾಹವನ್ನು ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅದರಲ್ಲೂ ಈಗ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಸದ್ದು ಮಾಡುತ್ತಿರುವ 18 ವರ್ಷದ ಪ್ರಗ್ನಾನಂದ (Praggnanandhaa) ರವರ ಬಗ್ಗೆ ನಾವು ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿದ್ದೇವೆ. ಬನ್ನಿ ಅವರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

2022 ರಲ್ಲಿ ಚೆಸ್ (Chess) ಕ್ರೀಡೆಯಲ್ಲಿ ವಿಶ್ವ ಚಾಂಪಿಯನ್ ಆಗಿ ಕಳೆದ ಸಾಕಷ್ಟು ವರ್ಷಗಳಿಂದ ಮೆರೆಯುತ್ತಿರುವಂತಹ ಮ್ಯಾಗ್ನಸ್ ಕಾರ್ಲ್ಸನ್ (Magnus Carlsen) ಅವರನ್ನು ಸೋಲಿಸುವ ಮೂಲಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಇವರು ಪಡೆದುಕೊಳ್ಳುತ್ತಾರೆ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಸಾಧನೆಯನ್ನು ವಿಶ್ವ ಮಟ್ಟದಲ್ಲಿ ಮಾಡಿರುವಂತಹ ಮತ್ತೊಬ್ಬ ಭಾರತೀಯ ಇಲ್ಲ ಎಂಬುದಾಗಿಯೇ ಪ್ರತಿಯೊಬ್ಬರೂ ಕೂಡ ಹೇಳುತ್ತಿದ್ದು ಭಾರತೀಯರಾದ ನಮಗೆ ಇದನ್ನು ಕೇಳಲು ಹೆಮ್ಮೆ ಆಗುತ್ತಿದೆ ಎಂದು ಹೇಳಬಹುದಾಗಿದೆ.

 

Image Source: BBC

 

ಇಷ್ಟೊಂದು ಯಶಸ್ವಿಯಾಗಿ ಕಾಣಿಸಿಕೊಳ್ಳುವಂತಹ ಪ್ರಗ್ನಾನಂದ ಇತ್ತೀಚಿಗಷ್ಟೇ ಕೂಡ ಚೆಸ್ ವಿಶ್ವಕಪ್ (Chess World Cup) ನಲ್ಲಿ 18ನೇ ವಯಸ್ಸಿನಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕವೂ ಕೂಡ ಭಾರತದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಹಾರುವಂತೆ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಸಾಧನೆಯನ್ನು ಮಾಡುತ್ತಿರುವ ಈ ಯುವ ಪ್ರತಿಭೆ ಯಾವ ರೀತಿಯ ಆಹಾರ ಕ್ರಮವನ್ನು ಅನುಸರಿಸುತ್ತಾರೆ.

ಜೀವನಕ್ರಮ ಹೇಗಿದೆ ಎನ್ನುವುದನ್ನು ತಿಳಿಯಲು ಪ್ರತಿಯೊಬ್ಬರೂ ಕೂಡ ಖಂಡಿತವಾಗಿ ಕಾತುರರಾಗಿರುತ್ತಾರೆ. ಹಾಗಿದ್ರೆ ಬನ್ನಿ ಇವತ್ತಿನ ಲೇಖನಿಯಲ್ಲಿ ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಅದಕ್ಕಿಂತ ಮುಂಚೆ ಪ್ರಗ್ನಾನಂದ ರವರ ಚೆಸ್ ಸಾಧನೆಗಳ ಬಗ್ಗೆ ನೋಡುವುದಾದರೆ ಕೇವಲ ಐದನೇ ವರ್ಷದಲ್ಲಿ ಚೆಸ್ ಅನ್ನು ಆಡಲು ಪ್ರಾರಂಭಿಸು ಅವರು 10ನೇ ವರ್ಷದಲ್ಲೇ ಇಂಟರ್ನ್ಯಾಷನಲ್ ಮಾಸ್ಟರ್ ಹಾಗೂ 12 ನೇ ವರ್ಷದಲ್ಲಿ ಗ್ರಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಾರೆ.

2022 ರಲ್ಲಿ ಮ್ಯಾಗ್ನೆಸ್ ಕಾರ್ಲ್ಸನ್ (Magnus Carlsen) ರವರಂತಹ ನಂಬರ್ ಒನ್ ಆಟಗಾರನನ್ನೇ ಸೋಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಎಲ್ಲರಿಗೂ ತೋರ್ಪಡಿಸುತ್ತಾರೆ. ಹಾಗಿದ್ರೆ ಬನ್ನಿ ಅವರ ಆಹಾರ ಕ್ರಮಗಳನ್ನು ಇವತ್ತಿನ ಈ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಪ್ರಗ್ನಾನಂದ (Praggnanandhaa) ಮಾಂಸವನ್ನು ಸೇವಿಸುವುದಿಲ್ವಾ ಅಂತ ಎಲ್ಲರೂ ಕೇಳಬಹುದು ಆದರೆ ಅದು ತಪ್ಪು ಅವರು ಮಾಂಸವನ್ನು ಸೇವಿಸುತ್ತಾರೆ ಆದರೆ ರೆಡ್ ಮೀಟ್ ಅವರು ತಿನ್ನೋದಿಲ್ಲ. ಕೋಳಿ ಹಾಗೂ ಮೀನುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎನ್ನುವುದನ್ನು ಅವರ ತಂದೆ ಆಗಿರುವಂತಹ ರಮೇಶ್ ಬಾಬು ಹೇಳಿಕೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ದಕ್ಷಿಣ ಭಾರತದ ಖಾದಿಗಳಾಗಿರುವಂತಹ ಇಡ್ಲಿ ದೋಸೆ ವಡ ಗಳಂತಹ ತಿಂಡಿಗಳು ಅವರ ಫೇವರೆಟ್ ಎಂಬುದಾಗಿ ಕೂಡ ತಿಳಿದು ಬಂದಿದೆ.

ಬೇಯಿಸಿದ ಆಹಾರವನ್ನೇ ಹೆಚ್ಚಾಗಿ ಪ್ರಗ್ನಾನಂದ ತಿನ್ನುತ್ತಾರೆ ಎಂಬುದು ಕೂಡ ಒಪ್ಪಿಕೊಳ್ಳುವ ವಿಚಾರವಾಗಿದ್ದು ಇದರ ಜೊತೆಗೆ ಅವರು ನಿದ್ರೆ ಹಾಗೂ ಅಭ್ಯಾಸದ ಸಮಯವನ್ನು ಕೂಡ ಸರಿಯಾಗಿ ಸಮತೋಲಿತ ರೀತಿಯಲ್ಲಿ ಹಂಚಿಕೊಂಡಿದ್ದು ಅವರ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ.

Leave A Reply

Your email address will not be published.