Karnataka Times
Trending Stories, Viral News, Gossips & Everything in Kannada

Rented House Rules: 1 ವರ್ಷದವರೆಗೆ ಬಾಡಿಗೆ ಮನೆಯಲ್ಲಿ ಇರುವವರಿಗೆ ದೇಶಾದ್ಯಂತ ಹೊಸ ರೂಲ್ಸ್.

Advertisement

ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಸ್ಥಳವನ್ನು ಬಾಡಿಗೆಗೆ(Rent) ಪಡೆದು, ವ್ಯವಹಾರ ನಡೆಸಲು ಮುಂದಾಗುತ್ತಾನೆ.ನಿರ್ದಿಷ್ಟ ಸ್ಥಳ ಆತನ ಸ್ನೇಹಿತನಿಗೆ ಸೇರಿದ್ದಾಗಿದ್ದು ಯಾವುದೇ ನೋಂದಣಿ ಪ್ರಕ್ರಿಯೆ ಇಲ್ಲದೆ ಬಾಡಿಗೆ ಅಥವಾ ಲೀಸ್ ಗೆ ಪಡೆದಿರುತ್ತಾನೆ ಎಂದಿಟ್ಟುಕೊಳ್ಳಿ.ಕೆಲವು ದಿನಗಳ ಕಾಲ ಸುಸೂತ್ರವಾಗಿ ಅದು ನಡೆದರೆ ಕೊಂಚ ದಿನದ ನಂತರ ವ್ಯಾಜ್ಯ ಅಥವಾ ಜಗಳ ಆರಂಭವಾಗುತ್ತದೆ.ಆದರೆ ಅವರು ಕೋರ್ಟ್ ಮೊರೆ ಹೋಗಲು ಅಥವಾ ಕೇಸ್ ತಾಕಲಿಸಲು ಸರಿಯಾದ ಆಧಾರದ ಕೊರತೆ ಇರುತ್ತದೆ ಕಾರಣ ಅವರು ನೋಂದಣಿ ಮಾಡಿಸಿಕೊಂಡಿಲ್ಲ.

ಹೌದು ಇಂತಹ ಅನೇಕ ಸಮಸ್ಯೆಗಳು ನಮ್ಮ ನಡುವೆ ಇದು ಇದಕ್ಕೆ ಪರಿಹಾರ ಸೂಚಿಸುವ ಸಲುವಾಗಿ ಇದೀಗ ಮಹತ್ವದ ಕಾನೂನು ಜಾರಿಯಾಗಿದೆ.ಮನೆ, ಕಟ್ಟಡ, ಗೋದಾಮು, ಅಂಗಡಿ, ಸೈಟು, ಭೂಮಿ ಸೇರಿದಂತೆ ಸ್ಥಿರಾಸ್ತಿ ಸ್ವತ್ತುಗಳ ಬಾಡಿಗೆ ಪಡೆದಾಗ ಭಾರತೀಯ ನೋಂದಣಿ ಕಾಯ್ದೆ ಪ್ರಕಾರ ಕಡ್ಡಾಯವಾಗಿದೆ. ಇದು ಬಾಡಿಗೆದಾರ ಮತ್ತು ಸ್ವತ್ತಿನ ಮಾಲೀಕರಿಗೆ ಭವಿಷ್ಯದಲ್ಲಿ ಅನುಕೂಲವಾಗಲಿದೆ.

ನೋಂದಣಿ ಕಾಯ್ದೆ 1908ರ ಕಲಂ 17(ಡಿ) ಅನ್ವಯ 1 ವರ್ಷ ಅವಧಿಗೂ ಮೇಲ್ಪಟ್ಟ ಅವಧಿಗೆ ವಾಸಕ್ಕೆ ಅಥವಾ ವಾಣಿಜ್ಯ ಉಪಯೋಗಕ್ಕೆ ಬಾಡಿಗೆ ಪಡೆದಾಗ ನೋಂದಣಿ ಕಡ್ಡಾಯ ಆಗಿರುತ್ತದೆ.ಇದರಿಂದ ಬಾಡಿಗೆ ನೀಡಿದವರು ಹಾಗೂ ಪಡೆದವರು ಇಬ್ಬರಿಗೂ ಕೂಡ ಸಹಾಯವಾಗಲಿದೆ.ಇನ್ನ ಪ್ರತಿಯೊಂದು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿ ಸೌಲಭ್ಯ ಇರಲಿದ್ದು, ನೋಂದಣಿ ಮತ್ತು ಮದ್ರಾಂಕ ಶುಲ್ಕ ಹೆಚ್ಚೆನು ಇರುವುದಿಲ್ಲ.
ಹೌದು ನೋಂದಣಿ ಮಾಡಿಸಲು ಪಾರದಾಡಬೇಕಾದ ಅವಶ್ಯಕತೆಯೂ ಇಲ್ಲ, ಅಲ್ಲದೆ ಇದು ನಾವು ನೆನೆದುಕ್ಕಿಂತ ಕಡಿಮೆ ಮೊತ್ತಕ್ಕೆ ಮುಗಿದು ಹೋಗುತ್ತದೆ.
ಭವಿಷ್ಯದಲ್ಲಿ ಬಾಡಿಗೆದಾರ ಮತ್ತು ಮಾಲೀಕರ ನಡುವೆ ಮನಸ್ಥಾಪ ಬಂದಾಗ ಒಪ್ಪಂದ ಪತ್ರದಲ್ಲಿ ಉಲ್ಲೇಖಿಸದಂತೆ ನಡೆದುಕೊಳ್ಳಲು ಅನುಕೂಲ ಆಗಲಿದೆ.

ಹಾಗಾದರೇ ನೋಂದಣಿಗೆ ತಗಲುವ ವೆಚ್ಚ ಎಷ್ಟು ಗೊತ್ತಾ..?

ವಾಸಪೊಪಯೋಗಿ ಸ್ವತ್ತುಗಳಿಗೆ 1 ವರ್ಷದ ಒಳಗಿನ ಅವಧಿ ಒಪ್ಪಂದಗಳಿಗೆ ಪರಿಗಣಿಸಿದ ಮೊತ್ತಕ್ಕೆ ಶೇ.0.5 ಅಥವಾ ಗರಿಷ್ಠ 500 ರೂ.ಗಳ ಮುದ್ರಾಂಕ ಶುಲ್ಕ ಹಾಗೂ ಶೇ.0.5ರಷ್ಟು ಅಥವಾ ಗರಿಷ್ಠ 200 ರೂ.ಗಳ ನೋಂದಣಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.ವಾಣಿಜ್ಯೋಪಯೋಗಿ ಅಥವಾ ಕೈಗಾರಿಕಾ ಸ್ವತ್ತುಗಳಿಗೆ ಒಂದು ವರ್ಷದ ಒಳಗಿನ ಅವಧಿಯ ಒಪ್ಪಂದಗಳಿಗೆ ಪರಿಗಣಿಸಿದ ಮೊತ್ತಕ್ಕೆ ಶೇ.0.5 ಮುದ್ರಾಂಕ ಶುಲ್ಕ ಮತ್ತು ಶೇ.0.5 ಅಥವಾ ಕನಿಷ್ಠ 200 ರೂ. ನೋಂದಣಿ ಶುಲ್ಕ ಪಾವತಿಸಬೇಕು.

ಒಂದು ವರ್ಷಕ್ಕೆ ಮೇಲ್ಪಟ್ಟ ಹಾಗೂ 10 ವರ್ಷಗಳ ಅವಧಿ ಮೀರಿದ ಬಾಡಿಗೆ ಒಪ್ಪಂದಕ್ಕೆಪರಿಗಣಿಸಿದ ಮೊತ್ತಕ್ಕೆ ಶೇ.1 ಮುದ್ರಾಂಕ ಶುಲ್ಕ ನಿಗದಿ ಮಾಡಲಾಗಿದೆ.10 ವರ್ಷಗಳಿಗೆ ಮೇಲ್ಪಟ್ಟ ಮತ್ತು 20 ವರ್ಷಗಳ ಅವಧಿ ಮೀರದ ಬಾಡಿಗೆ ಒಪ್ಪಂದಕ್ಕೆ ಪರಿಗಣಿಸಿದ ಮೊತ್ತಕ್ಕೆ ಶೇ.2 ಮುದ್ರಾಂಕ ಶುಲ್ಕ ಹಾಗೂ 20 ವರ್ಷಗಳಿಗೆ ಮೇಲ್ಪಟ್ಟ ಮತ್ತು 30 ವರ್ಷಗಳ ಅವಧಿ ಮೀರಿದ ಬಾಡಿಗೆ ಒಪ್ಪಂಡಗಳಿಗೆ ಪರಿಗಣಿಸಿದ ಮೊತ್ತಕ್ಕೆ ಶೇ.3 ಮುದ್ರಾಂಕ ಶುಲ್ಕ ಪಾವತಿಸಬೇಕು. ಉಳಿದಂತೆ ಶೇ.0.5 ಅಥವಾ ಕನಿಷ್ಠ 200 ರೂ. ನೋಂದಣಿ ಶುಲ್ಕ ಪಾವತಿ ಸಾಮಾನ್ಯವಾಗಿ ಅನ್ವಯ ಆಗಲಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಇದರಿಂದ ಇನ್ನು ಮುಂದೆ ಬಾಡಿಗೆ ಹಾಗೂ ವಿಚಾರವಾಗಿ ನಡೆಯುವ ಅದೆಷ್ಟೋ ತಕರಾರುಗಳು ತಪ್ಪಲಿದೆ.

Leave A Reply

Your email address will not be published.