BPL Card: BPL ಕಾರ್ಡ್ ಬಗ್ಗೆ ಮುಂಜಾನೆಯೇ ಅಧಿಕೃತವಾಗಿ ಹೊಸ ಘೋಷಣೆ ಹೊರಡಿಸಿದ ಸರ್ಕಾರ

Advertisement
ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಿ ಕಾಯಿತ್ತಿದ್ದವರಿಗೆ ಅಥವಾ ಮುಂದೆ ಬಿ ಪಿ ಎಲ್ ಕಾರ್ಡ್(BPL Card) ಪಡೆಯಬೇಕು ಎಂದುಕೊಂಡ ವರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದೆ.ಹೌದು, ರಾಜ್ಯದಲ್ಲಿ ಇನ್ನುಮುಂದೆ ಹೊಸ ಬಿಪಿಎಲ್ ಕಾರ್ಡ್ ಸಿಗೋದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.ಇದಕ್ಕೆ ಪ್ರಮುಖ ಕಾರಣ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04 ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಲಾನುಭವಿಗಳಿಗೆ 1,03,70,669 ಬಿಪಿಎಲ್ ಕಾರ್ಡ್ ನೀಡಬೇಕೆಂಬ ನಿಯಮವಿದೆ.
ಆದರೆ, ರಾಜ್ಯದಲ್ಲಿ ಸದ್ಯ 3,92,54,052 ಲಾನುಭವಿಗಳಿಗೆ 1,16,98,551 ರೇಷನ್ ಕಾರ್ಡ್‌ಗಳನ್ನು(Ration Card) ನೀಡಲಾಗಿದೆ. ನಿಗದಿಗಿಂತ ಹೆಚ್ಚುವರಿಯಾಗಿ 13,27,882 ಬಿಪಿಎಲ್ ಕಾರ್ಡ್ ಈಗಾಗಲೇ ನೀಡಲಾಗಿದೆ.ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ.ಅಲ್ಲದೆ ಈಗಾಗಲೇ ಉಚಿತ ಯೋಜನೆಗಳನ್ನು ಜಾರಿಗೆ ತರುವ ಸಲುವಾಗಿ ಅನೇಕ ಯೋಜನೆಗಳು ಈಗಾಗಲೇ ರದ್ದಾಗಿದೆ.ಹೀಗಾಗಿ, ಹೊಸ ಬಿಪಿಎಲ್ ಕಾರ್ಡ್ ನೀಡುವುದನ್ನು ಸ್ಥಗಿತಗೊಳಿಸಲು ಆಹಾರ ಇಲಾಖೆ ಚಿಂತಿಸಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಜನರಿಗೆ ಹೊಸ ಕಾರ್ಡ್‌ಗಳು ಸಿಗುವುದಿಲ್ಲ.
ಅರ್ಜಿ ವಿಲೇವಾರಿಗೆ ಸಿಗದ ಅನುಮತಿ
ರಾಜ್ಯದಲ್ಲಿ ಬಾಕಿ ಉಳಿದಿರುವ 2,95,986 ಅರ್ಜಿಗಳ ವಿಲೇವಾರಿಗೆ ಅನುಮತಿ ನೀಡುವಂತೆ ಆಹಾರ ಇಲಾಖೆ ಸರ್ಕಾರಕ್ಕೆ ಪತ್ರ ಬರೆದು ಎರಡು ತಿಂಗಳಾಗಿದೆ.ಆದರೂ ಇದುವರೆಗೂ ಇವುಗಳ ವಿಲೇಗೆ ಸರ್ಕಾರವು ಅನುಮತಿ ನೀಡಿಲ್ಲ. ಹಿಂದೆ ಹೊಸ ರೇಷನ್ ಕಾರ್ಡ್, ಸೇರ್ಪಡೆ, ತಿದ್ದುಪಡಿ ಕೋರಿ ಇದುವರೆಗೆ ಇಲಾಖೆಗೆ ಸಲ್ಲಿಕೆಯಾದ ಒಟ್ಟು 39,04,798 ಅರ್ಜಿಗಳ ಪೈಕಿ 26,48,171 ಅರ್ಜಿಗಳು ಅನುಮೋದನೆಗೊಂಡರೆ, 9,60,641 ಅರ್ಜಿಗಳು ತಿರಸ್ಕಾರಗೊಂಡಿತ್ತು.36,08,812 ಅರ್ಜಿಗಳು ವಿಲೇವಾರಿಯಾದರೆ 2,95,986 ಅರ್ಜಿಗಳು ಹಲವು ತಿಂಗಳಿಂದ ಬಾಕಿ ಉಳಿದಿವೆ.
ಮೇನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಇದರಿಂದಾಗಿ ಪಡಿತರ ಚೀಟಿ ನೀಡಲು, ಸೇರ್ಪಡೆ, ತಿದ್ದುಪಡಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಬಾಕಿ ಅರ್ಜಿಗಳ ವಿಲೇವಾರಿಗೆ ಸರ್ಕಾರ ಅನುಮತಿ ಕೊಟ್ಟಿಲ್ಲ. ಹೀಗಾಗಿ, ಬಾಕಿ ಅರ್ಜಿಗಳ ವಿಲೇಗೆ ಇಲಾಖೆ, ಸರ್ಕಾರಕ್ಕೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಹೊಸ ಬಿಪಿಎಲ್ ಕೋರಿ ಹೃದಯ ಸಮಸ್ಯೆ ಸೇರಿ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಿಪಿಎಲ್ ಮುಖ್ಯವಾಗಿದೆ. ಇವರಿಗಾದರೂ ಕಾರ್ಡ್ ನೀಡಬೇಕಿದೆ.
ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಕೋರಿ ಸಲ್ಲಿಸಲಾಗಿರುವ 2,95,986 ಅರ್ಜಿಗಳು ಬಾಕಿ ಉಳಿದಿವೆ. ಇವುಗಳ ವಿಲೇವಾರಿಗೆ ಸರ್ಕಾರ ಯಾವಾಗ ಅನುಮತಿ ಕೊಡುತ್ತದೆ ಎಂಬುದರ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇಲ್ಲದಂತಾಗಿದೆ.ಒಟ್ಟಾರೆ ಸರ್ಕಾರದ ನಿರ್ಲಕ್ಷದಿಂದ ಅನೇಕ ಜನರು ಪರದಾಡುವಂತಹ ಸ್ಥಿತಿ ಎದುರಾಗಿದೆ.