Karnataka Times
Trending Stories, Viral News, Gossips & Everything in Kannada

BPL Card: ಎಲೆಕ್ಷನ್ ಸಮೀಪದಲ್ಲೇ ಬಿಪಿಎಲ್ ಕಾರ್ಡುದಾರರಿಗೆ ಸಿಕ್ತು ನೋಡಿ ಬಂಪರ್ ಆಫರ್!

Advertisement

ಬಿಪಿಎಲ್(BPL) ಅಂದರೆ ಬಡತನದ ರೇಖೆಗಿಂತ ಕೆಳಗಿರುವವರಿಗೆ ನೀಡುವಂತಹ ಪಡಿತರ ಚೀಟಿಯಾಗಿದೆ. ಈ ಕಾಡಿನ ಅನ್ವಯಿ ಸಿಗುವಂತಹ ಉಚಿತ ವಸ್ತುಗಳ ಮೇಲೆ ಸಾಕಷ್ಟು ಬದಲಾವಣೆಗಳನ್ನು ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದ ಎಂಬುದಾಗಿ ತಿಳಿದುಬಂದಿದೆ. ಇತ್ತೀಚಿಗಷ್ಟೇ ವಿಶ್ವ ಆರೋಗ್ಯ ಸಂಸ್ಥೆ(WHO) ಭಾರತ ದೇಶದಲ್ಲಿ ಕೆಳ ಸ್ಥರದ ಜನರು ಪೋಷಕಾಂಶ ಭರಿತ ಆಹಾರವನ್ನು ಪಡೆಯದ ಕಾರಣ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂಬುದಾಗಿ ವರದಿಯನ್ನು ಬಿಡುಗಡೆ ಮಾಡಿತ್ತು. ಇದೇ ಹಿನ್ನೆಲೆಯಲ್ಲಿ ಸರ್ಕಾರ ಈಗ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ ಎಂಬುದಾಗಿ ತಿಳಿದು ಬಂದಿದೆ.

ಕೆಲವರ್ಗದ ಜನರಿಗೆ ಅಂದರೆ ಬಿಪಿಎಲ್ ಕಾರ್ಡುದಾರರಿಗೆ(BPL Card Holder) ನೀಡುವಂತಹ ಉಚಿತ ಅಕ್ಕಿ ಸೇರಿದಂತೆ ಇನ್ನಿತರ ವಸ್ತುಗಳ ಜೊತೆಗೆ ಪೋಷಕಾಂಶ ಭರಿತ ಆಹಾರವನ್ನು ವಿತರಿಸಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಹೊಸ ರೂಪುರೇಷೆಯನ್ನು ಸಿದ್ಧಪಡಿಸಿದೆ. ಈಗಾಗಲೇ ಸರ್ಕಾರ ಉಚಿತವಾಗಿ ಅಕ್ಕಿಯನ್ನು ನೀಡುತ್ತಿತ್ತು ಆದರೆ ಅಕ್ಕಿಯ ಬದಲಿಗೆ ಇನ್ನೂ ಒಂದು ವಸ್ತುವನ್ನು ನೀಡುವ ಸಿದ್ಧತೆಗೆ ಸರ್ಕಾರ ಸಿದ್ಧವಾಗಿ ನಿಂತಿದೆ ಎಂಬುದಾಗಿ ತಿಳಿದು ಬಂದಿದೆ. ಸಾಮಾನ್ಯ ಅಕ್ಕಿಯ ಬದಲಾಗಿ Fortified Rice ಅನ್ನು ನೀಡಲು ಮುಂದಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಇದು ಸಾಮಾನ್ಯ ಅಕ್ಕಿಗಿಂತ ಹೆಚ್ಚಿನ ಪೋಷಕಾಂಶವನ್ನು ಸೇವಿಸುವವರಿಗೆ ನೀಡುತ್ತದೆ ಎಂಬುದು ಸಾಬೀತಾಗಿರುವಂತಹ ವಿಚಾರವಾಗಿದೆ. ಈಗಾಗಲೇ ಇದರ ಸಿದ್ಧತೆ ನಡೆದು ಬಂದಿದ್ದು ಅತಿ ಶೀಘ್ರದಲ್ಲೇ ವಿತರಣೆಯನ್ನು ಕೂಡ ನಡೆಸಲು ಸರ್ಕಾರ(Government) ಸಿದ್ಧವಾಗಿ ನಿಂತಿದ್ದು ಕೆಳ ಸ್ಥರದ ಜನರಿಗೆ ಈ ರೀತಿಯ ಪೋಷಕಾಂಶ ಆಹಾರವನ್ನು ನೀಡುವ ಮೂಲಕ ಅವರ ಆರೋಗ್ಯದಲ್ಲಿ ಸುಧಾರಣೆ ತರುವಂತಹ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಖಂಡಿತವಾಗಿ ನಮ್ಮ ದೇಶದ ನಾಗರಿಕರ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ತೆಗೆದುಕೊಳ್ಳುತ್ತಿರುವಂತಹ ಈ ನಿಯಮ ಪ್ರತಿಯೊಬ್ಬರು ಮೆಚ್ಚಿ ಕೊಳ್ಳಬೇಕಾಗಿರುವುದು.

Leave A Reply

Your email address will not be published.