Karnataka Times
Trending Stories, Viral News, Gossips & Everything in Kannada

Population Growth: ಜನಸಂಖ್ಯೆ ಹೆಚ್ಚಾಗಲು ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಚೀನಾದಲ್ಲಿ ಹೊಸ ನಿಯಮ

Advertisement

ಇಂದು ಜನಸಂಖ್ಯೆ ಒಂದು ಜಾಗತಿಕ ಸಮಸ್ಯೆ ಎಂಬ ಕಾಲ ಹೊರಟು ಹೋಗಿ ಅದು ಮಾನವಶಕ್ತಿ ಎಂದೇ ನಂಬಲಾಗುತ್ತಿದೆ. ಜನಸಂಖ್ಯೆಯಲ್ಲಿ ಮುಂಚುಣಿಯಲ್ಲಿರುವ ಚೀನಾವು (China) ತನ್ನ ನೂತನ ನೀತಿಯ ಮೂಲಕ ಜನನ ದರ ಹೆಚ್ಚಿಸಲು ಮುಂದಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚೀನಾದಲ್ಲಿ ಜನಸಂಖ್ಯೆಯ ಜನನದ ದರವು (Population Growth) ಕುಸಿತದ ಹಾದಿಯಲ್ಲಿದ್ದು ಸದ್ಯ ಆ ದೇಶಕ್ಕೆ ಅದೊಂದು ದೊಡ್ಡ ಮಟ್ಟದ ಸಮಸ್ಯೆಯಾಗಿ ಪರಿಣಮಿಸುತ್ತಿದೆ ಎನ್ನಬಹುದು.

ಒಂದು ವಾರದ ರಜೆ ಘೋಷಣೆ:

ರಾಷ್ಟ್ರೀಯ ಕಾಳಜಿ ವಹಿಸಲು ವಿಶಿಷ್ಠವಾದ ಯೋಜನೆಯನ್ನು ಚೀನಾ ಜಾರಿಗೆ ಎಂದಿದೆ. ಈ ಮೂಲಕ 9 ಕಾಲೇಜುಗಳಲ್ಲಿ ಒಂದು ವಾರದದ ರಜೆ ನೀಡಲಾಗಿದ್ದು ಈ ಹೊಸ ವ್ಯವಸ್ಥೆಗೆ ಪ್ರೀತಿಯಲ್ಲಿ ಬೀಳಲು (Falling in love) ಎಂದು ಹೆಸರಿಡಲಾಗಿದೆ. ಹಾಗೆಂದು ಇದು ಜನನ ದರ ಹೆಚ್ಚಿಸಲು ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದು ಎಂಬ ತಪ್ಪು ಕಲ್ಪನೆ ಬೇಡ. ಇದು ಕಾಲೇಜು ವಿದ್ಯಾರ್ಥಿಗಳಿಗೆ ದೇಶದ ಅಭಿವೃದ್ಧಿಗೆ ಮಾನವಶಕ್ತಿಯ ಅಗತ್ಯತೆ ತಿಳಿಸುವ ಉದ್ದೇಶದಿಂದ ಎಪ್ರಿಲ್ 1ರಿಂದ 7ರ ವರೆಗೆ ರಜೆಯನ್ನು ಘೋಷಿಸಲಾಗಿದ್ದು ಮೀಯಾನ್ಯಾಂಗ್ ಫ್ಲೈಯಿಂಗ್ ಒಕೆಶನಲ್ ಕಾಲೇಜು (Mianyang Flying Vocational College) ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಕ್ರಮ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದೆ.

ಏನು ಇದರ ಮೂಲ ಉದ್ದೇಶ?

ಎಷ್ಟೋ ಬಾರಿ ಮಕ್ಕಳಿಗೆ ಪ್ರಕೃತಿಯೊಂದಿಗೆ (Natural Education) ಒಡನಾಟವೇ ಇರಲಾರದು ಹಾಗಾಗಿ ಈ ಒಡನಾಟ ಬೆಳೆಸುವ ಮೂಲಕ ಜೀವನದ ಮೇಲೆ ಹಾಗೂ ಪ್ರಕೃತಿಯಲ್ಲಿ ಪ್ರೀತಿ ಹೊಂದಲೆಂದು ಈ ಕಾರ್ಯಕ್ರಮಕ್ಕೆ ಮುಂದಾಗಲಾಗಿದೆ. ಒಂದು ರೀತಿಯ ಸ್ವ ಅಭಿವೃದ್ಧಿ ಕಲಿಕೆಯ ಒಂದು ವಿಧಾನವಾಗಿದೆ. ಈ ಅವಧಿಯಲ್ಲಿ ಮಕ್ಕಳು ಡೈರಿ ಬರೆಯುವುದು, ಪ್ರವಾಸದ ಬಗ್ಗೆ ವೀಡಿಯೋ (Video) ಮಾಡುವುದು, ಏನೆಲ್ಲ ಹೊಸ ವಿಚಾರ ಅರಿವಾಯಿತು ಎಂದು ಲೇಖನ ಅಥವಾ ಪ್ರಬಂಧ ಬರೆದು ತಿಳಿಸಬೇಕಾಗಿರುತ್ತದೆ.

ಮಾನವ ಶಕ್ತಿ ಪ್ರಕೃತಿಗೆ ಮುಖ್ಯ:

ಈ ಮೂಲಕ ವಿದ್ಯಾರ್ಥಿಗಳಿಗೆ ಇದೊಂದು ಕಾರ್ಯಚಟುವಟಿಕೆಯಾಗಿದ್ದು ಈ ಮೂಲಕ ವಿದ್ಯಾರ್ಥಿಗಳಿಗೆ ಮಾನವ ಶಕ್ತಿಯೂ ಈ ಪ್ರಕೃತಿಗೆ ಎಷ್ಟು ಮುಖ್ಯ ಎಂಬ ಬಗ್ಗೆ ಸಹ ಅರಿವು ಮೂಡಿಸಲಾಗುತ್ತಿದೆ. ದೇಶದ ವ್ಯವಸ್ಥೆ ಪ್ರಕೃತಿ ಸೊಬಗು ಎಲ್ಲ ಪರಿಚಯಿಸುವ ನೆಲೆಯಲ್ಲಿ ಈ ಹೊಸ ನೀತಿ ಸಾಕಷ್ಟು ಹೊಸ ವಿಚಾರಗಳನ್ನು ಹೊಂದಿದೆ ಎನ್ನಬಹುದು.

Leave A Reply

Your email address will not be published.