Making Reels in Class: ಕ್ಲಾಸ್ ನಲ್ಲೇ ರೀಲ್ಸ್ ಮಾಡಲು ಹೋಗಿ ಶಿಕ್ಷಕರ ಎದುರು ಸಿಕ್ಕಾಕೊಂಡ ವಿದ್ಯಾರ್ಥಿಗಳು ವಿಡಿಯೋ ಇಲ್ಲಿದೆ
ಸಾಮಾಜಿಕ ಜಾಲತಾಣವನ್ನೇ (Social Media) ವೇದಿಕೆ ಮಾಡಿಕೊಂಡು ಸೆಲೆಬ್ರಿಟಿಗಳನ್ನು ಹೊಂದಿದ ಅನೇಕರನ್ನು ಇಂದು ನಾವು ಕಾಣುತ್ತೇವೆ. ಅದರಲ್ಲೂ ಡ್ಯಾನ್ಸ್, ಹಾಡುಹೇಳುವುದು, ಅಭಿನಯ ಮಾಡುವ ಮೂಲಕ ಟಿಕ್ ಟಾಕ್ (Tiktok) ಮಾಡುವವರಂತೂ ಬಹುತೇಕರೆ ಇದ್ದಾರೆ ಎನ್ನಬಹುದು. ಮಕ್ಕಳಿಂದ ವೃದ್ಧರವರೆಗೂ ಇಂದು ರೀಲ್ಸ್ (Reels) ಅನ್ನೊ ಹವ್ಯಾಸ ರೂಢಿಯಲ್ಲಿದ್ದು ಇತ್ತೀಚೆಗೆ ವಿದ್ಯಾರ್ಥಿಗಳು (Students) ಸಹ ತಮ್ಮ ಪ್ರತಿಭೆ ತೋರಿಸಲು ಮುಂದಾಗುತ್ತಿದ್ದಾರೆ.
ರೀಲ್ಸ್ ಕ್ರೇಜ್:
ಇತ್ತೀಚೆಗೆ ಸಣ್ಣ ಪುಟ್ಟ ಮಕ್ಕಳಿಂದ ಎಲ್ಲರೂ ರೀಲ್ಸ್ ಮಾಡುತ್ತಲೇ ಇರುತ್ತಾರೆ , ಅದರಲ್ಲಿಯೂ ಯುವ ಜನತೆಗೆ ಈ ರೀಲ್ಸ್ ಕ್ರೇಜ್ ಸ್ವಲ್ಪ ಜಾಸ್ತಿ ಎಂದೇ ಹೇಳಬಹುದು. ಅದೇ ರೀತಿ ರೀಲ್ಸ್ ಮಾಡಲು ಹೋಗಿ ಸಾಕಷ್ಟು ಅಪಾಯದ ಸನ್ನಿವೇಶ ಸಹ ಎದುರಿಸುವವರಿದ್ದಾರೆ. ಇನ್ನು ಕೆಲವರು ರೀಲ್ಸ್ ಮಾಡಲು ಹೋಗಿ ತಗಲು ಹಾಕಿಕೊಳ್ಳುತ್ತಾರೆ.
ಅಂತವರಲ್ಲಿ ಬಹುತೇಕರು ವಿದ್ಯಾರ್ಥಿಗಳೇ ಎನ್ನಬಹುದು. ಅಂತಹ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುತ್ತಿದ್ದು ಸದ್ಯ ಒಂದು ವೀಡಿಯೋ ಟ್ರೆಂಡಿಂಗ್ ನಲ್ಲಿದೆ ಎಂದರೂ ತಪ್ಪಾಗಲಾರದು. ಮೇರೆ ಯಾರ್ ಕೀ ಶಾದಿ ಸಿನೆಮಾದ ಶರಾರಾ ಎಂಬ ಹಾಡಿಗೆ ಸಕ್ಕತ್ತಾಗೆ ವಿದ್ಯಾರ್ಥಿನಿಯರು ಸ್ಟೆಪ್ ಹಾಕಿ ಮೈ ಚಳಿ ಬಿಟ್ಟು ಕುಣಿದಿದ್ದಾರೆ.
ಯುನಿಫಾರ್ಮ್ ನಲ್ಲೆ ಡ್ಯಾನ್ಸ್:
ಈ ಮೂಲಕ ವಿದ್ಯಾರ್ಥಿನಿಯರು ತಮ್ಮ ಯುನಿಫಾರ್ಮ್ ಉಡುಗೆಯಲ್ಲೇ ಡ್ಯಾನ್ಸ್ ಮಾಡಿದ್ದು ಸದ್ಯ ಅವರು ವೈರಲ್ ಆಗುತ್ತಿದ್ದಾರೆ. ಡ್ಯಾನ್ಸ್ ಏನೋ ಮಸ್ತಾಗೆ ಇದೆ ಆದರೆ ವೀಡಿಯೋ ಕೊನೆಯಲ್ಲಿ ಕಾಲೇಜಿನ ಶಿಕ್ಷಕರೆಲ್ಲ ಒಟ್ಟಾಗಿ ಕ್ಲಾಸಿಗೆ ಬಂದಾಗ ಮಕ್ಕಳೆಲ್ಲ ತಬ್ಬಿಬಾಗಿ ತಮ್ಮ ತಮ್ಮ ಪ್ಲೇಸ್ ಕಡೆ ಓಡುತ್ತಾರೆ ಈ ಮೂಲಕ ಸರ್ ಬಂದ್ರು ಎಂದು ಕ್ಯಾಪ್ಶನ್ ನೀಡಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದಾರೆ. ಈ ವಿದ್ಯಾರ್ಥಿಗಳು ಬಿಎಡ್ ವ್ಯಾಸಾಂಗ ಮಾಡುತ್ತಿರುವುದಾಗಿ ಬಿಡುವಿನ ವೇಳೆಯಲ್ಲಿ ಟಿಕ್ ಟಾಕ್ ರೀಲ್ಸ್ ಮಾಡಲು ಹೋಗಿ ತಗ್ಲಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಮೂಲಕ ಎಲ್ಲೆಡೆ ಈ ವೀಡಿಯೋದ್ದೆ ಮಾತು ಕತೆ ಎನ್ನಬಹುದು.