ಸಮಾಜಿಕತಾಣಗಳು ಇಂದು ಜನರನ್ನು ಎಷ್ಟು ಆಕರ್ಷಿಸುತ್ತಿವೆ ಎಂದರೆ, ಕೈಯಲ್ಲಿ ಒಂದು ಸ್ಮಾರ್ಟ್ ಫೋನ್ ಇದ್ದರೆ ಸಾಕು ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣದಲ್ಲಿಯೇ ದಿನದ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಸೋಶಿಯಲ್ ಮೀಡಿಯಾ ಅಡಿಕ್ಟ್ ಆಗಿದ್ದಾರೆ ಎಂದರೆ ತಪ್ಪಲ್ಲ.
ಇದಕ್ಕೆ ತಕ್ಕ ಹಾಗೆ ಸಾಕಷ್ಟು ತಮಾಷೆಯಾಗಿರುವ ಮನೋರಂಜನೀಯವಾಗಿರುವ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡುತ್ತವೆ ಇಂತಹ ವಿಡಿಯೋಗಳನ್ನು ನೋಡಿ ಯಾರಾದ್ರೂ ನಗಲೇ ಬೇಕು ಹೀಗೆ ಎಲ್ಲರನ್ನೂ ಬೆರಗಾಗಿಸುವ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಜೊತೆಗೆ ಸಾಕಷ್ಟು ಬಾರಿ ಶೇರ್ ಕೂಡ ಕಂಡಿದೆ. ಅಂತದೇನಪ್ಪಾ ಇದೆ ಈ ವಿಡಿಯೋದಲ್ಲಿ ಅಂತೀರಾ? ಹೇಳ್ತಿವಿ ಮುಂದೆ ಓದಿ.
ಈ ವಿಡಿಯೋ ನೋಡಿದ್ರೆ ನಿಮಗೆ ಆಶ್ಚರ್ಯವಾಗಬಹುದು ಅಥವಾ ನಂಬಲು ಅಸಾಧ್ಯವಾಗಬಹುದು. ಸಾಮಾನ್ಯವಾಗಿ ಬಿಕ್ಷುಕ ಅಂದ್ರೆ ಹೇಗಿರುತ್ತಾನೆ? ಹರಿದ ಬಟ್ಟೆ ಹಾಕಿಕೊಂಡು, ಕೈಯಲ್ಲಿ ಒಂದು ಮುರಿದು ಹೋಗಿರುವ ತಟ್ಟೆ ಹಿಡಿದುಕೊಂಡು ಒಂದು ಜೋಳಿಗೆ ಸಿಕ್ಕಿಸಿಕೊಂಡು ಭಿಕ್ಷೆ ಬೇಡುತ್ತಾನೆ. ರಸ್ತೆಯ ಬದಿಯಲ್ಲಿ ಟ್ರಾಫಿಕ್ ನಲ್ಲಿ ರೈಲುಗಳಲ್ಲಿ ಬಸ್ಗಳಲ್ಲಿ ಇಂತಹ ಭಿಕ್ಷುಕರನ್ನು ಕಾಣಬಹುದು. ಆದರೆ ಈ ಬಿಕ್ಷುಕ ಮಾತ್ರ ಎಲ್ಲರಿಗಿಂತ ಡಿಫ್ರೆಂಟ್. ಈತ ಆನ್ಲೈನ್ ಮೂಲಕವೇ ಭಿಕ್ಷೆ ಬೇಡುತ್ತಾನೆ. ಈ ವಿಡಿಯೋ ನೋಡಿ ಎಲ್ಲರಿಗೂ ಗೊಂದಲ ಆಗೋದು ಸಹಜ ಆದರೆ ಅಷ್ಟೇ ತಮಾಷೆಯಾಗಿಯೂ ಇದೆ.
ಮುಂಬೈನ ಲೋಕಲ್ ಟ್ರೈನ್ ಒಂದರಲ್ಲಿ ಈ ಘಟನೆ ನಡೆದಿದೆ ಸಧ್ಯ ಯಾರೋ ಪ್ರಯಾಣಿಕರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಜನಜಂಗುಳಿ ತುಂಬಿರುವ ರೈಲಿನಲ್ಲಿ ಒಬ್ಬ ಭಿಕ್ಷುಕ ಭಿಕ್ಷೆ ಬೇಡುತ್ತಿದ್ದಾನೆ ಭಿಕ್ಷೆ ಬೇಡುತ್ತಿರುವ ಈ ಭಿಕ್ಷುಕನನ್ನು ನೋಡಿದರೆ ನಿಮಗೆ ಒಮ್ಮೆ ಆಶ್ಚರ್ಯವಾಗಬಹುದು.
ಯಾಕೆಂದರೆ ಆತನ ಕೈಯಲ್ಲಿ ಮುರಿದು ಹೋಗಿರುವ, ತಟ್ಟಾಗಿರುವ ಅಲ್ಯೂಮಿನಿಯಂ ತಟ್ಟೆ ಇಲ್ಲ. ಅದರ ಬದಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದಾದ ಫಲಕ ಇತ್ತು. ಫೋನ್ ಪೇ (Phone Pe) ಮೂಲಕ ನೀವು ಆ ವ್ಯಕ್ತಿಗೆ ಹಣ ನೀಡಬಹುದು. ಈತ ಒಬ್ಬ ಅಂತರಾಷ್ಟ್ರೀಯ ಹೈಟೆಕ್ ಭಿಕ್ಷುಕ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.
ಇಂದು ಭಾರತದಲ್ಲಿ ಕ್ಯಾಶ್ ವ್ಯವಹಾರ ಇಲ್ಲ ಹೆಚ್ಚಾಗಿ ಎಲ್ಲರೂ ಆನ್ಲೈನ್ ಪೇಮೆಂಟ್ ಮಾಡಿ ಹಣಕಾಸಿನ ವ್ಯವಹಾರ ಮುಗಿಸಿಕೊಳ್ಳುತ್ತಾರೆ. ಬಹುಶಃ ಇದನ್ನ ಚೆನ್ನಾಗಿ ಅರಿತಿರುವ ಈ ಭಿಕ್ಷುಕ ಯಾರ ಬಳಿಯೂ ಚಿಲ್ಲರೆ ಇರುವುದಿಲ್ಲ ಎನ್ನುವ ಕಾರಣಕ್ಕೆ ಕ್ಯೂಆರ್ ಕೋಡ್ ಸ್ಕ್ಯಾನರ್ ಹಿಡಿದು ಭಿಕ್ಷೆ ಬೇಡುತ್ತಿದ್ದಾನೆ. ಇತ ಒಬ್ಬ ಪಕ್ಕ ಹೈಟೆಕ್ ಭಿಕ್ಷುಕ ಎನ್ನಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಬಿಕ್ಷುಕನ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.
View this post on Instagram