Viral Video: ಚಮಕ್ ಚಲೋ ಎಂದು ಡ್ಯಾನ್ಸ್ ನಲ್ಲಿಯೇ ಮೋಡಿ ಮಾಡಿದ ಯುವತಿ ವೈರಲ್ ಆಯ್ತು ವಿಡಿಯೋ!
ಸಾಮಾಜಿಕ ಜಾಲತಾಣದಲ್ಲಿ ಕುತೂಹಲಕಾರಿ ವಿಷಯಗಳು ಸಾಕಷ್ಟು ಸಿಗುತ್ತವೆ. ಅಷ್ಟೇ ಅಲ್ಲ ಮನೋರಂಜನೆಗೂ ಕೂಡ ಯಾವುದೇ ಕೊರತೆ ಇಲ್ಲ. ಒಂದು ವೇಳೆ ಸಿನಿಮಾ ಅಥವಾ ಟಿವಿ ಶೋ ಗಳನ್ನು ನೋಡಿ ಅಷ್ಟು ಮನೋರಂಜನೆ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುವ ಕೆಲವರ ಡಾನ್ಸ್ ವಿಡಿಯೋಗಳು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತವೆ. ಹೀಗೆ ವೈರಲ್ ಆಗಿರುವ ಒಬ್ಬ ಯುವತಿಯ ಡ್ಯಾನ್ಸಿಂಗ್ ವಿಡಿಯೋ ನೋಡಿ ಎಲ್ಲರೂ ಕಣ್ತುಂಬಿಕೊಂಡಿದ್ದು ಆಯ್ತು. ನೀವು ಕೂಡ ನೋಡಬೇಕಾ?
ಹೌದು ಇಂದು ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ಎಲ್ಲರೂ ಸಕ್ರಿಯರಾಗಿರುತ್ತಾರೆ. ಪ್ರತಿಯೊಬ್ಬರ ಟ್ಯಾಲೆಂಟ್ ತೋರಿಸಿಕೊಳ್ಳುವುದಕ್ಕೆ ಇದು ಒಂದು ಅತ್ಯುತ್ತಮ ವೇದಿಕೆ ಎನಿಸಿಕೊಂಡಿದೆ. ರೀಲ್ ಗಳನ್ನು ಮಾಡಿ ಇನ್ಸ್ಟಾಗ್ರಾಮ್ ಹಾಗೂ facebook ನಲ್ಲಿ ಜನ ಮಿಂಚುತ್ತಿದ್ದಾರೆ. ಹಾಗೆಯೇ ಒಬ್ಬ ಯುವತಿ ಕಪ್ಪು ಬಣ್ಣದ ಸೀರೆ ಉಟ್ಟು ಸೊಂಟ ಬಳುಕಿಸಿ ನೃತ್ಯ ಮಾಡಿರುವ ದೃಶ್ಯ ಸೆರೆಹಿಡಿಯಲಾಗಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಕೆಯ ಮನಮೋಹಕ ನೃತ್ಯ ಜನರ ಮನ ಸೂರೆಗೊಂಡಿದೆ. ನಿಜಕ್ಕೂ ಅದ್ಭುತವಾಗಿ ಡಾನ್ಸ್ ಮಾಡುತ್ತಿದ್ದಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಕಮೆಂಟ್ ಮಾಡಿ ತಿಳಿಸುತ್ತಿದ್ದಾರೆ. ’ಕ್ಯಾ ಕಮಲ್ ಡ್ಯಾನ್ಸ್ ಕರ್ತಿ ಹೇ’ ಎಂದು ಜನ ಹಾಡಿ ಹೊಗಳುತ್ತಿದ್ದಾರೆ.
ವೆಸ್ಟ್ ಬೆಂಗಾಲ್ ನ ನಿಯೋಟಿಯ ವಿಶ್ವವಿದ್ಯಾಲಯದಲ್ಲಿ ರುಶ ಎನ್ನುವ ಯುವತಿ ತನ್ನ ಫೇರ್ವೆಲ್ ಸಮಯದಲ್ಲಿ ಕಪ್ಪು ಸೀರೆ ಉಟ್ಟು ಅತ್ಯದ್ಭುತವಾಗಿ ನೃತ್ಯ ಪ್ರದರ್ಶನ ಮಾಡಿದ್ದಾರೆ. ಶಾರುಖ್ ಖಾನ್ (Shah Rukh Khan) ಅಭಿನಯದ ಚಮಕ್ ಚಲೋ ಹಾಡಿಗೆ ಈ ಹುಡುಗಿ ನೃತ್ಯ ಮಾಡಿದ್ದು ಹುಡುಗಿಯ ನೃತ್ಯದ ಶೈಲಿ ಜನರಿಗೆ ಬಹಳ ಇಷ್ಟವಾಗಿದೆ. ಸುತ್ತಲು ಇರುವ ಆಕೆಯ ಸ್ನೇಹಿತರು ಕೂಡ ಆಕೆಗೆ ಪ್ರೋತ್ಸಾಹ ನೀಡುತ್ತಿದ್ದು ವಿಡಿಯೋದಲ್ಲಿ ಕಂಡು ಬಂದಿದೆ. ಇನ್ಸ್ಟಾಗ್ರಾಮ್ ನಲ್ಲಿ ಯುವತಿಯ ವಿಡಿಯೋ ಶೇರ್ ಮಾಡಲಾಗಿದ್ದು ಸಿಕ್ಕಾಪಟ್ಟೆ ವೀಕ್ಷಣೆ ಹಾಗೂ ಕಮೆಂಟ್ಗಳು ಬಂದಿವೆ. rusha_dl ಎನ್ನುವ ಖಾತೆಯಲ್ಲಿ ಈ ವಿಡಿಯೋ ಹಂಚಿಕೆಯಾಗಿದ್ದು ಯಾವುದೇ ವೇದಿಕೆ ಸಿಕ್ಕರೂ ನೃತ್ಯ ಮಾಡುವುದಕ್ಕೆ ನಾನು ಹಿಂಜರಿಯುವುದಿಲ್ಲ ಎಂದು ರುಶಾ ಬರೆದುಕೊಂಡಿದ್ದಾರೆ.
ರುಶಾ ಅವರ ನೃತ್ಯಕ್ಕೆ ಸಾಕಷ್ಟು ಕಮೆಂಟ್ಗಳು ಬಂದಿವೆ. ದಿದಿ ನಮ್ಮ ಕಾಲೇಜ್ ನಲ್ಲಿ ಇದ್ದರೆ ಚೆನ್ನಾಗಿತ್ತು ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಈ ಡ್ಯಾನ್ಸ್ ನೋಡಿದರೆ ಶಾರುಖ್ ಖಾನ್ ಕೂಡ ನಿಮ್ಮ ಅಭಿಮಾನಿ ಆಗುತ್ತಾರೆ ಎಂದು ಇನ್ನೊಬ್ಬ ಫಾಲೋವರ್ ಕಾಮೆಂಟ್ ಮಾಡಿದ್ದಾರೆ. ಈ ನೃತ್ಯ ನೋಡಿ ಹಾರ್ಟ್ ಬೀಟ್ ಜಾಸ್ತಿ ಆಗಿದೆ ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ಕಪ್ಪು ಬಣ್ಣದ ಸೀರೆಯಲ್ಲಿ ಚಮಕ್ ಚಲೋ ಎಂದು ನೃತ್ಯದ ಮೂಲಕ ಯುವತಿ ಮೋಡಿ ಮಾಡಿದ್ದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವೈರಲ್ ವಿಡಿಯೋ ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದು ಕೊಂಡಿದೆ.
View this post on Instagram