Pan Card: ಪಾನ್ ಕಾರ್ಡ್ ಲಿಂಕ್ ಮಾಡೋರಿಗೆ ಸಿಹಿಸುದ್ದಿ, ಈ ವ್ಯಕ್ತಿಗಳು 1000 ರೂ ಕಟ್ಟೋದು ಬೇಡ.

Advertisement
ಎಲ್ಲರೂ ಕೂಡ ಲೇಟ್ ಆಗಿ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಹೀಗಾಗಿ ಇದಕ್ಕಾಗಿ ಲೇಟ್ ಫೈನ್(Late Fine) ರೂಪದಲ್ಲಿ 1000 ರೂಪಾಯಿ ಕಟ್ಟಬೇಕು ಆದರೆ ಕೆಲವು ವರ್ಗದ ಜನರು 1000 ರೂಪಾಯಿ ಕಟ್ಟಬೇಕಾದ ಅಗತ್ಯವಿಲ್ಲ ಎಂಬುದಾಗಿ ತಿಳಿದು ಬಂದಿದೆ. ಕೇವಲ ಫೈನ್ ಅಲ್ಲ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಅನ್ನು ಕೂಡ ಈ ವರ್ಗದ ಜನರು ಲಿಂಕ್ ಮಾಡುವ ಅಗತ್ಯವೂ ಕೂಡ ಇಲ್ಲ ಎಂಬುದು ಮತ್ತೊಂದು ಹೊಸ ವಿಚಾರವಾಗಿದೆ. ಇದರ ಬಗ್ಗೆ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಬನ್ನಿ.
ಮಾರ್ಚ್ 31ರವರೆಗೆ ಇದ್ದಂತಹ ಗಡುವನ್ನು ಈಗ ಜೂನ್ 30ರವರೆಗೆ ಮುಂದುವರಿಸಿದ್ದು ಒಂದು ವೇಳೆ ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್(Pan Card) ಅನ್ನು ಲಿಂಕ್ ಮಾಡದೆ ಹೋದರೆ ಯಾವುದೇ ಬ್ಯಾಂಕಿಂಗ್ ಹಾಗೂ ಆರ್ಥಿಕ ಸಂಬಂಧಿತ ಕೆಲಸಗಳನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಸರ್ಕಾರ ಎಚ್ಚರಿಕೆ ನೀಡಿತ್ತು. ಇದರಿಂದಾಗಿ ಯಾವುದೇ ಹೊಸ ಖಾತೆಗಳನ್ನು ಓಪನ್ ಮಾಡಲು ಸಾಧ್ಯವಿಲ್ಲ ಹಾಗೂ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಕೂಡ ಬ್ಯಾಂಕಿನಿಂದ ಪಡೆಯಲು ಸಾಧ್ಯವಿಲ್ಲ ಇದೇ ರೀತಿಯ ಹಲವಾರು ಆರ್ಥಿಕ ಸಂಬಂಧಿತ ಸಮಸ್ಯೆಗಳು ಒಂದೊಂದಾಗಿ ಇದರಿಂದ ಪ್ರಾರಂಭವಾಗುತ್ತದೆ.
ಸದ್ಯಕ್ಕೆ 1000 ಲೇಟ್ ಫೈನ್(Late Fine ) ಅನ್ನು ತೆಗೆದುಕೊಳ್ಳಲಾಗುತ್ತಿದೆ ಆದರೆ ಜೂನ್ 30ರ ನಂತರ ಇದರ ಗಾತ್ರ ಎನ್ನುವುದು ದೊಡ್ಡ ಮಟ್ಟದಲ್ಲಿ ಹೆಚ್ಚಾಗಬಹುದಾದ ಸಾಧ್ಯತೆ ಇದೆ. ಆದರೆ ನಮ್ಮ ದೇಶದಲ್ಲಿ ಕೆಲವು ಜನರಿಗೆ ಆಧಾರ್(Aadhar Card) ಹಾಗೂ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡುವ ಅಗತ್ಯವಿಲ್ಲ ಮತ್ತು ಫೈನ್ ಕೂಡ ನೀಡಬೇಕಾದ ಅಗತ್ಯವಿಲ್ಲ ಎಂಬುದಾಗಿ ತಿಳಿದುಬಂದಿದೆ. ಅಸ್ಸಾಂ, ಮೇಘಾಲಯ ಹಾಗೂ ಜಮ್ಮು ಕಾಶ್ಮೀರದ ಜನರಿಗೆ ಇದರ ಅಗತ್ಯವಿಲ್ಲ ಎಂಬುದಾಗಿ ಸರ್ಕಾರ ಆದೇಶವನ್ನು ಹೊರಡಿಸಿದೆ.
1961 ರ ನಿಯಮದ ಪ್ರಕಾರ ಬೇರೆ ದೇಶದಲ್ಲಿರುವಂತಹ ಭಾರತೀಯರು ಹಾಗೂ 80 ವರ್ಷಕ್ಕೂ ಮೇಲ್ಪಟ್ಟ ನಾಗರಿಕರು ಆಧಾರ್ ಹಾಗೂ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳುವ ಯಾವುದೇ ಅಗತ್ಯವಿಲ್ಲ ಹಾಗೂ ಫೈನ್ ಕಟ್ಟುವ ಅಗತ್ಯವೂ ಕೂಡ ಇಲ್ಲ ಎಂಬುದಾಗಿ ತೆರಿಗೆ ಇಲಾಖೆ(Income Tax Department) ಸ್ಪಷ್ಟಪಡಿಸಿದೆ. ಹೀಗಾಗಿ ಈ ಮೇಲೆ ಹೇಳಿರುವಂತಹ ಜನರು ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿದೆ ಹೋದರೆ ಏನಾಗುತ್ತೋ ಎನ್ನುವ ಚಿಂತೆಯನ್ನುಇಂದೇ ಬಿಟ್ಟುಬಿಡಿ. ಆದರೆ ಉಳಿದವರು ಮಾತ್ರ ತಪ್ಪದೆ ಜೂನ್ 30ರ ಒಳಗೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಅನ್ನು ತಪ್ಪದೇ ಲಿಂಕ್ ಮಾಡಿ.