Aadhar New Rules: ಪಾನ್ ಗೆ 1000 ರೂ ಆಯ್ತು, ಇದೀಗ ಆಧಾರ್ ಗೆ ಬಂತು ಹೊಸ ನಿಯಮ.

Advertisement
ಸದ್ಯ ಇದೀಗ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವೂ(Unique Identification Authority of India)ಜನರು ತಮ್ಮ ಆಧಾರ್ ಕಾರ್ಡ್ (Adhar Card) ಆನ್ಲೈನ್ನಲ್ಲಿ ದಾಖಲೆಗಳನ್ನು ನವೀಕರಿಸಲು ಉಚಿತವಾಗಿ(Free) ಆಯ್ಕೆ ಮಾಡಬಹುದಾಗಿದೆ ಎಂದು ತಿಳುಸಿದೆ. ಹೌದು ಮುಂದಿನ 3 ತಿಂಗಳ ಕಾಲ MyAadhaar ಪೋರ್ಟಲ್ನಲ್ಲಿ ಉಚಿತವಾಗಿ ಡಾಕ್ಯುಮೆಂಟ್ ಅಪ್ಡೇಟ್ (Update) ಸೌಲಭ್ಯವನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದ್ದು ಡಿಜಿಟಲ್ ಇಂಡಿಯಾ (Digital India) ಉಪಕ್ರಮದ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಇನ್ನು ದೊಡ್ಡ ವಿಚಾರವೆಂದರೆ ನವೀಕರಣಕ್ಕಾಗಿ ನೀವು ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಹೌದು ನಿಮ್ಮ ಆಧಾರ್ ಅನ್ನು ಉಚಿತವಾಗಿ ನವೀಕರಿಸಲಾಗಿದ್ದು ಈ ಹಿಂದೆ ಪ್ರತಿಯೊಂದು ಅಪ್ಡೇಟ್ಗಳಿಗಾಗಿ 25 ರೂಪಾಯಿ ಶುಲ್ಕವನ್ನ ವಿಧಿಸಲಾಗುತ್ತಿತ್ತು ಆದರೆ ಸದ್ಯಕ್ಕೆ ಇದು ಉಚಿತವಾಗಿದೆ
ನಿಮಗೆ ಗೊತ್ತಾ? 10 ವರ್ಷ ಹಳೆಯ ಕಾರ್ಡ್ ಹೊಂದಿರುವವರಿಗೆ ಅವಶ್ಯಕ:
ಹೌದು ನಿಮ್ಮ ಆಧಾರ್ ಕಾರ್ಡ್ 10 ವರ್ಷ ಹಳೆಯದಾಗಿದ್ದರೆ ನೀವು ಅದನ್ನು ಕಡ್ಡಾಯವಾಗಿ ನವೀಕರಿಸಬೇಕಾಗುತ್ತದೆ ಎನ್ನಲಾಗಿದೆ. ಇನ್ನು ನವೀಕರಣದ ಪ್ರಕ್ರಿಯೆಯನ್ನು UIDAI ಒಂದು ನಿರ್ದಿಷ್ಟ ಸಮಯದವರೆಗೆ ಉಚಿತವಾಗಿ ಇರಿಸಿದ್ದು ಅಂದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಉಚಿತವಾಗಿ ನವೀಕರಿಸಬಹುದು. ಇನ್ನು ಈ ಸೌಲಭ್ಯವು ಸೀಮಿತ ಅವಧಿಗೆ ಇದ್ದರೂ 14ನೇ ಜೂನ್ 2023 ಒಳಗೆ ನಿಮ್ಮ ಆಧಾರ್ ಅನ್ನು ನೀವು ಉಚಿತವಾಗಿ ನವೀಕರಿಸಬಹುದು.
ಆಧಾರ್ ವಿವರಗಳನ್ನು ನವೀಕರಿಸುವುದು ಹೇಗೆ?
ಸದ್ಯ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಸಂಖ್ಯೆಯ ಮೂಲಕವಾಗಿ https ://myaadhaar.uidai.gov.in/ ಗೆ ಲಾಗ್ ಇನ್ ಆಗುತ್ತಾರೆ. ಇನ್ನು ಇದರ ನಂತರ ನಿಮ್ಮ ಫೋನ್ಗೆ ಒನ್ ಟೈಮ್ ಪಾಸ್ವರ್ಡ್ (OTP) ಬರುತ್ತದೆ. OTP ಅನ್ನು ಭರ್ತಿ ಮಾಡಿದ ಬಳಿಕ ಡಾಕ್ಯುಮೆಂಟ್ ನವೀಕರಣದ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನೀವು ನಿಮ್ಮ ವಿವರಗಳನ್ನು ನೋಡುತ್ತೀರಿ. ಅದರ ನಂತರ ನೀವು ನಿಮ್ಮ ವಿವರಗಳನ್ನು ಪರಿಶೀಲಿಸಬೇಕಾಗುತ್ತದೆ.
Adhar apdate
Thanks for publishing useful information on Aaadhar Card New Rules which is into effect shortly.
Useful Information. Thanks.