Karnataka Times
Trending Stories, Viral News, Gossips & Everything in Kannada

Medical News: ಮೆಡಿಕಲ್ ಗಳಲ್ಲಿ ಔಷಧಿ ತಗೆದುಕೊಳ್ಳುವವರಿಗೆ ಕೇಂದ್ರ ಸರ್ಕಾರದ ಗೂಡ್ ನ್ಯೂಸ್.

Advertisement

ಸದ್ಯ ದೇಶದಲ್ಲಿ (Country) ಅಗತ್ಯ ಔಷಧಗಳು (Medicines)ಹಾಗೂ ಜೀವರಕ್ಷಕ ಔಷಧಿಗಳ ಬೆಲೆಯೂ ಆರ್ಥಿಕ ವರ್ಷದ (Financial Year) ಪ್ರಾರಂಭ ದಿನವಾದ ಏಪ್ರಿಲ್ 1 ರಿಂದ ಶೇಕಡಾ 12.12 ರಷ್ಟು ಏರಿಕೆಯಾಗಿ ಬಿಟ್ಟಿತ್ತು. ಆದರೆ ಸಮೀಕ್ಷೆಯ (Survey)ಪ್ರಕಾರವಾಗಿ ವಿಶೇಷವಾಗಿ ಮಧುಮೇಹ (Diabetes)ಬಿಪಿ(BP) ಸಂಧಿವಾತ ಹಾಗೂ ಕ್ಯಾನ್ಸರ್ (Cancer) ಔಷಧಿಗಳ ಬೆಲೆಗಳು ಹೆಚ್ಚಾಗಿರುವುದರಿಂದ ಗ್ರಾಹಕರು ಈಗಾಗಲೇ ಹೊರೆ ಅನುಭವಿಸುತ್ತಿದ್ದಾರೆ ಎನ್ನಬಹುದು.

ಇನ್ನು ಕಳೆದ ಒಂದು ವರುಷದಲ್ಲಿ ಈ ರೋಗಗಳ (Disease) ಔಷಧಿಗಳ ಬೆಲೆ ಶೇಕಡಾ 20ರಷ್ಟು ದೊಡ್ಡಮಟ್ಟದಲ್ಲಿ ಹೆಚ್ಚಾಗಿತ್ತು. ಇನ್ನುಬಕಳೆದ 12 ತಿಂಗಳುಗಳಲ್ಲಿ 10 ಗ್ರಾಹಕರಲ್ಲಿ ಆರು ಮಂದಿ ಔಷಧಿ ಬೆಲೆಯಲ್ಲಿ ಶೇಕಡಾ 20 ರಷ್ಟು ಏರಿಕೆಯನ್ನು ಅನುಭವಿಸಿದ್ದು ಏಪ್ರಿಲ್ 1 ರಿಂದ ಶೇಕಡಾ 12 ರಷ್ಟು ಹೆಚ್ಚಳವು ಮತ್ತಷ್ಟು ಆರ್ಥಿಕ ಹೊರೆಯನ್ನು ಉಂಟುಮಾಡುತ್ತದೆ ಎಂದು ಸಮೀಕ್ಷೆ ತಿಳಿಸಿತ್ತು.

ಜನಸಾಮಾನ್ಯರಿಗೆ ಗುಡ್ ನ್ಯೂಸ್ : ಔಷಧಿಗಳ ಬೆಲೆ ಕಡಿಮೆಯಾಗಿದೆ.!

ಸದ್ಯ ಇದೀಗ ರಾಷ್ಟ್ರೀಯ ಔಷಧಿ ಬೆಲೆ ನಿಯಂತ್ರಕರು (National Drug Price Regulator)ತಮ್ಮ ಅಧಿಕೃತ ಟ್ವೀಟ್‌ (Tweet) ನಲ್ಲಿ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಡಿಯಲ್ಲಿ ಪಟ್ಟಿ ಮಾಡಲಾದತಂಹ ಒಟ್ಟು 870 ಔಷಧಿಗಳ ಪೈಕಿ ಸರಿ ಸುಮಾರು 651 ಔಷಧಿಗಳ ಸೀಲಿಂಗ್ ಬೆಲೆಯನ್ನ ನಿಗದಿಪಡಿಸುವಲ್ಲಿ ಸರ್ಕಾರ (GOVT) ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಇದರಿಂದಾಗಿ ಪ್ರತಿಯೊಬ್ಬ ವ್ಯಕ್ತಿಗೂ ಜೂಡ ಅಗತ್ಯ ಔಷಧಗಳ ಲಭ್ಯತೆ ಹೆಚ್ಚಾಗುತ್ತದೆ. ಇನ್ನು ಎನ್‌ಪಿಪಿಎ (NPPA) ಹೇಳಿಕೆ ಪ್ರಕಾರ 651 ಅಗತ್ಯ ಔಷಧಿಗಳ ಬೆಲೆಯನ್ನು ಈಗಾಗಲೇ ಗರಿಷ್ಠ ಬೆಲೆಗಳ ಮಿತಿಯೊಂದಿಗೆ ಶೇಕಡಾ 16.62 ರಷ್ಟು ಕಡಿಮೆ ಮಾಡಲಾಗಿದೆ. ಇದರ ಜೊತೆಗೆ ಅಗತ್ಯ ಔಷಧಗಳ ಬೆಲೆಯಲ್ಲಿ ಶೇ.12.12ರಷ್ಟು ಏರಿಕೆಯಾಗಬೇಕಿದ್ದುಬಆದರೆ ಈಗ ಏಪ್ರಿಲ್ 1ರಿಂದ ಶೇ.6.73ರಷ್ಟು ಇಳಿಕೆಯಾಗಿರುವುದು ಸಂತಸದ ವಿಚಾರ.

ಗ್ರಾಹಕರಿಗೆ ಅನುಕೂಲ!

ಸದ್ಯ NLEM ಪ್ರಕಾರವಾಗಿ ಔಷಧಿಗಳ ಬೆಲೆಯಲ್ಲಿನ ಕಡಿತದ ದೊಡ್ಡ ಫಲಾನುಭವಿ ಗ್ರಾಹಕರು ಎನ್ನಬಹುದಾಗಿದೆ. ಹೌದು ಹಿಂದಿನ ಅಂಕಿಅಂಶಗಳನ್ನು ಗಮನಿಸುವುದಾದರೆ ಸಗಟು ಬೆಲೆ ಸೂಚ್ಯಂಕ (WPI) ಆಧಾರದ ಮೇಲೆ ಔಷಧಿಗಳ ಬೆಲೆಯಲ್ಲಿ ವಾರ್ಷಿಕ ಶೇ.ಸರಿ ಸುಮಾರು 12.12ರಷ್ಟು ಏರಿಕೆಯಾಗಿತ್ತು. ಇನ್ನು 2022ರ ವಾರ್ಷಿಕ ಬದಲಾವಣೆಯು 12.12 ಶೇಕಡಾ.

ಆದರೆ ಬೆಲೆ ಇಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ಇನ್ನು ಅಗತ್ಯ ಔಷಧಿಗಳ ಸೀಲಿಂಗ್ ಬೆಲೆ ನಿಗದಿಯಾಗುತ್ತಿರುವುದು ಇದೇ ಮೊದಲಲ್ಲ ಎಂಬುದನ್ನ ಗಮನಿಸಬೇಕು. 2013 ರಿಂದ ಡಿಎಸ್‌ಪಿಒ (DSPO) ಮೂಲಕವಾಗಿ ಬೆಲೆ ನಿಗದಿಗೆ ಆದೇಶ ನೀಡಲಾಗುತ್ತಿದೆ. ಇನ್ನು ಇದನ್ನು ನಿರ್ದಿಷ್ಟ ಚಿಕಿತ್ಸಕ ವಿಭಾಗದಿಂದ ಮಾಡಲಾಗುತ್ತಿದ್ದು ಇದು 1 ಪ್ರತಿಶತಕ್ಕಿಂತ ಹೆಚ್ಚಿನ ಮಾರಾಟದೊಂದಿಗೆ ಎಲ್ಲಾ ಔಷಧಿಗಳ ಸರಳ ಸರಾಸರಿಯನ್ನು ಆಧರಿಸಿದೆ ಎನ್ನಬಹುದು.

Leave A Reply

Your email address will not be published.