Karnataka Times
Trending Stories, Viral News, Gossips & Everything in Kannada

Divorce: ಡಿವೋರ್ಸ್ ನೀಡುವ ಎಲ್ಲರಿಗೂ ಕೋರ್ಟ್ ಮೊದಲೇ ಸೂಚನೆ, ಹೊಸ ನಿಯಮ

Advertisement

ಮದುವೆಯಾದ ಮೇಲೆ ಸತಿ ಪತಿಗಳು ಒಬ್ಬರಿಗೊಬ್ಬರೂ ಆಶ್ರಯ ಆಗಲೇ ಬೇಕು ಒಂದು ವೇಳೆ ಇಬ್ಬರ ನಡುವೆ ವೈವಾಹಿಕ ಜೀವನ ಉತ್ತಮವಾಗಿರದಿದ್ದರೆ ಆಗ ವಿಚ್ಛೇಧನಕ್ಕೆ ಮುಂದಾಗಲಾಗುತ್ತದೆ. ಅದೇ ರೀತಿ ವಿಚ್ಛೇದನ (Divorce) ಪಡೆದರೆ ಪತಿಯು ತನ್ನ ಆದಾಯದಲ್ಲಿ ಇಂತಿಷ್ಟು ಹಣವನ್ನು ಜೀವನಾಂಶವಾಗಿ ಪತ್ನಿಗೆ ನೀಡಬೇಕು. ಇದು ಪತಿಯ ಕಾನೂನಾತ್ಮಕ ಜವಾಬ್ದಾರಿ ಆಗಿರುತ್ತದೆ. ಆದರೆ ಇತ್ತೀಚೆಗೆ ವಿಚಿತ್ರ ಎಂಬ ಪ್ರಕರಣವೊಂದು ಪಂಜಾಬ್ ನಲ್ಲಿ ಕಂಡು ಬಂದಿದ್ದು ಸದ್ಯ ಅದಕ್ಕೂ ಕೋರ್ಟ್ ನಲ್ಲಿ ಪರಿಹಾರ ನೀಡಿದೆ‌.

ಏನು ಆ ಪ್ರಕರಣ:

ಪಂಜಾಬ್ (Punjab) ನಲ್ಲಿ ಮಹಿಳೆಯೊಬ್ಬಳು ಹಿಂದೂ ವಿವಾಹ ಕಾಯ್ದೆಯ 24ನೆ ಸೆಕ್ಷನ್ (Hindhu marrige act) ಆಧಾರದಲ್ಲಿ ಕೋರ್ಟ್ ಮೊರೆಹೋಗಿದ್ದು ವಿಚ್ಚೇದಿತ ಪತಿಯಿಂದ 15000ಜೀವನಾಂಶ ಹಾಗೂ 11000 ದಾವೆಯ ವೆಚ್ಚ ನೀಡುವಂತೆ ಕೋರ್ಟ್ (Court) ಮೆಟ್ಟಿಲೆರಿದ್ದಾರೆ. ಆದರೆ ಆ ಮಹಿಳೆಯ ಪತಿ ಓರ್ವ ವೃತ್ತಿಪರ ಭಿಕ್ಷುಕನಾಗಿದ್ದು ಇದರ ತೀರ್ಪು ಏನಾಗುತ್ತದೆ ಎಂಬುದೆ ಎಲ್ಲರ ಕುತೂಹಲಕ್ಕೆ ಕಾರಣವಾಯಿತು. ಈ ಮೂಲಕ 5000 ಜೀವನಾಂಶ ಹಾಗೂ 5500 ದಾವೆಯ ವೆಚ್ಚ ಭರಿಸುವಂತೆ ಎಚ್.ಎಸ್. ಮದನ್ (HS Madhan) ಅವರು ತೀರ್ಪು ನೀಡಿದ್ದಾರೆ.

Court ಹೇಳಿದ್ದೇನು:

ಈ ತೀರ್ಪು ಸಮಂಜಸವಲ್ಲವೆಂದು ಹೈ ಕೋರ್ಟ್ (High Court) ಮೊರೆ ಹೊಕ್ಕವನಿಗೆ ಅಲ್ಲಿ ಅಚ್ಚರಿಯ ಉತ್ತರ ಕಾದಿತ್ತು. ದೇಹದ ಆರೋಗ್ಯ ಉತ್ತಮವಾಗಿರುವಾಗ ಜೀವನದ ಕನಿಷ್ಠ ಆದಾಯವಾದರೂ ಗಳಿಸುವ ಸಾಮರ್ಥ್ಯ ಈ ವ್ಯಕ್ತಿಗೆ ಇದೆ. ಇಂದು ಕೂಲಿ ಕೆಲಸದಿಂದ 500 ರೂ. ಆದರೂ ಸಿಗುತ್ತದೆ. ಹೆಂಡತಿ ನೋಡಿಕೊಳ್ಳುವುದು ಗಂಡನ ಕರ್ತವ್ಯವಾಗಿದ್ದು ಆ ಕರ್ತವ್ಯ ನಿಭಾಯಿಸದಿದ್ದರೆ ಜೀವನಾಂಶವಾದರೂ ನೀಡಬೇಕು. ಇಂದು ಜೀವನ ನಡೆಸುವುದು ತುಂಬಾ ಕಷ್ಟ ಹಾಗಾಗಿ ಪತಿ ಭಿಕ್ಷುಕನಾಗಿದ್ದರೂ ಪತ್ನಿಗೆ ಜೀವನಾಂಶ ನೀಡಲೇ ಬೇಕು.

ಈ‌ಮೂಲಕ ತನಗಿಂತ ಅಸಮರ್ಥಳಾದ ಪತ್ನಿಯನ್ನು ನೋಡಿಕೊಳ್ಳುವುದು ಪತಿಯ ಹೊಣೆ ಎನ್ನಲಾಗಿದೆ. ಈ‌ಮೂಲಕ ಪತಿ ಕಳಿಸಿದ್ದ ಅರ್ಜಿ ಸದ್ಯ ವಜಾಗೊಳಿಸಲಾಗಿದೆ. ಈ ಮೂಲಕ ಬದಲಾಗುತ್ತಿರುವ ಸಮಾಜದ ಅಗತ್ಯತೆಗೆ ತಕ್ಕಂತೆ ಜೀವನಾಂಶವನ್ನು ಬದಲಾಯಿಸುವುದು ಸಹ ಕಾಣಬಹುದು.

Leave A Reply

Your email address will not be published.