Karnataka Times
Trending Stories, Viral News, Gossips & Everything in Kannada

Pan-Aadhar Link: ಪಾನ್ ಗೆ ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತೆ? ಮೋದಿ ಸರ್ಕಾರದ ಹೊಸ ಖಡಕ್ ಆಜ್ಞೆ.

Advertisement

ಈಗಾಗಲೇ ವಿತ್ತ ಸಚಿವಾಲಯ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಾರ್ಚ್ 31ರ ಒಳಗೆ ಪಾನ್ ಕಾರ್ಡ್(Pan Card) ಅನ್ನು ಆಧಾರ್ ಕಾರ್ಡ್(Aadhar Card) ಜೊತೆಗೆ ಲಿಂಕ್ ಮಾಡಬೇಕು ಎನ್ನುವ ಅಧಿನಿಯಮವನ್ನು ಕಡ್ಡಾಯ ಸೂಚನೆಗಳೊಂದಿಗೆ ಹೊರಡಿಸಿತ್ತು. ಒಂದೇ ವ್ಯಕ್ತಿಯ ಹೆಸರಿನಲ್ಲಿ ಸಾಕಷ್ಟು ಪಾನ್ ಕಾರ್ಡ್ ಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಈ ರೀತಿಯ ನಿಯಮವನ್ನು ಜಾರಿಗೆ ತರಲು ಸೂಚಿಸುತ್ತಿದ್ದರೆ ಗಡುವನ್ನು ಕೂಡ ಈಗಾಗಲೇ ಜೂನ್ 30ಕ್ಕೆ ವಿಸ್ತರಿಸಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.

ಜೂನ್ 30 ಕ್ಕು ಮೊದಲೇ ಪ್ರತಿಯೊಬ್ಬ Tax Payer ಹಾಗೂ ಆರ್ಥಿಕ ವ್ಯವಹಾರಗಳನ್ನು ಮಾಡಬಯಸುವಂತಹ ಪ್ರತಿಯೊಬ್ಬ ನಾಗರಿಕನು ಕೂಡ 2017ರ ಜುಲೈ 1 ರ ವರೆಗೆ ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಈ ಪ್ರಕ್ರಿಯೆಗೆ ಒಳಗಾಗಲೇಬೇಕು ಆಧಾರ್ ಕಾರ್ಡ್ ಗೆ ಪಾನ್ ಲಿಂಕ್ ಆಗಲೇಬೇಕು ಎಂಬುದಾಗಿ ತಿಳಿಸಲಾಗಿದೆ. ಒಂದು ವೇಳೆ ಹೀಗೆ ಮಾಡಿಲ್ಲವಾದರೆ ಮುಂದಿನ ದಿನಗಳಲ್ಲಿ ನಿಮ್ಮ ಪಾನ್ ಕಾರ್ಡ್ ಯಾವ ಕೆಲಸಕ್ಕೂ ಬಾರದೆ ನಿಷ್ಕ್ರೀಯಗೊಳ್ಳುತ್ತದೆ. ಇನ್ನು ಪಾನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಮಾಡದೆ ಹೋದರೆ ಏನಾಗುತ್ತದೆ ಎಂಬುದರ ವಿವರವನ್ನು ಕೂಡ ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ಯಾವುದೇ ಟ್ಯಾಕ್ಸ್ ರಿಟರ್ನ್ ಮಾಡಲು ಸಾಧ್ಯವಿಲ್ಲ. ಪೆಂಡಿಂಗ್ ಆಗಿರುವಂತಹ ಟ್ಯಾಕ್ಸ್ ರಿಟರ್ನ್ ಯಾವುದೇ ಪ್ರಗತಿಯನ್ನು ಪಡೆದುಕೊಳ್ಳುವುದಿಲ್ಲ. ಜಾರಿಯಲ್ಲಿರುವ ರಿಫಂಡ್ ಕೂಡ process ಆಗುವುದಿಲ್ಲ. ಹೆಚ್ಚಿನ ಟ್ರಾನ್ಸ್ಯಾಕ್ಷನ್ ನನ್ನಲ್ಲಿ ದೊಡ್ಡಮಟ್ಟದ ಟ್ಯಾಕ್ಸ್ ಕಡಿತಗೊಳ್ಳುತ್ತದೆ. ಕೇವಲ ಎಷ್ಟು ಮಾತ್ರವಲ್ಲದೆ ಸಾಕಷ್ಟು Banking Transaction ಗಳಲ್ಲಿ ಕೂಡ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುವುದರಿಂದ ಯಾವುದೇ ಹಣದ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ ಇಲ್ಲವೇ ಸಾಕಷ್ಟು ಕಷ್ಟಪಡಬೇಕಾಗುತ್ತದೆ ಎನ್ನುವುದನ್ನು ಅರಿತುಕೊಂಡು ಆದಷ್ಟು ಬೇಗ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿ.

Leave A Reply

Your email address will not be published.