Weather Report: ಮುಂದಿನ ವಾರವಿಡೀ ರಾಜ್ಯದಲ್ಲಿ ಸುರಿಯಲಿದೆ ಧಾರಾಕಾರ ಮಳೆ: ವರುಣನಿಗೆ ಯಾವ ಜಿಲ್ಲೆ ಮೊದಲ ಟಾರ್ಗೆಟ್ ಗೊತ್ತಾ?
ಈಗಾಗಲೇ ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿದೆ. ಮಕ್ಕಳಿಗೆ ರಜೆ ಸಿಗುತ್ತಿದ್ದ ಹಾಗೆ ಫ್ಯಾಮಿಲಿ ಸಮೇತರಾಗಿ ಟ್ರಿಪ್, ಡ್ರೈವ್ ಅಂತ ಪ್ಲ್ಯಾನ್ ಮಾಡಿಕೊಂಡಿರುತ್ತೀರಿ ಅಲ್ವಾ ಹಾಗೇನಾದರೂ ನೀವು ಪ್ಲಾನ್ ಮಾಡಿದ್ದರೆ ಒಂದು ವಾರಗಳ ಕಾಲ ಈ ಪ್ಲಾನ್ ಮುಂದೂಡೋದು ಒಳ್ಳೆಯದು. ಯಾಕೆ ಅಂತೀರಾ? ಕೆ ಎಸ್ ಎನ್ ಡಿ ಎಂ ಸಿ ವರದಿಯ ಪ್ರಕಾರ ಏಪ್ರಿಲ್ 12 ರಿಂದ ಏಪ್ರಿಲ್ 20ರ ವರೆಗೆ ರಾಜ್ಯದ ವಿವಿಧಡೆ ಭಾರಿ ಮಳೆ ಆಗಲಿದೆ.
ವರದಿಯಲ್ಲಿ ಏನಿದೆ?
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSMDMC) ಪ್ರಕಟಣೆ ಹೊರಡಿಸಿದ್ದು ಏಪ್ರಿಲ್ 12 ರಿಂದ 20 ರವರೆಗೆ ರಾಜ್ಯದ ಬೇರೆ ಬೇರೆ ಕಡೆ ಸಾಧಾರಣ ಹಾಗೂ ಭಾರಿ ಮಳೆ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ನಿರೀಕ್ಷೆ ಇದೆ. ಮಳೆ ಮುನ್ಸೂಚನೆ ಬಗ್ಗೆ ಮಾಹಿತಿ ನೀಡಲಾಗಿದ್ದು ತಿಳಿ ನೀಲಿ ಬಣ್ಣದಿಂದ ಕೂಡಿದ ಸಾಧಾರಣ ಮಳೆ ಕೆಲವು ಜಿಲ್ಲೆಗಳಲ್ಲಿ ಆದರೆ ಹಾಗೂ ಕಡು ಹಸಿರು ಬಣ್ಣದಿಂದ ಕೂಡಿರುವ ಗುಡುಗು ಸಹಿತ ಮಳೆ ಕೆಲವು ಪ್ರದೇಶಗಳಲ್ಲಿ ಆಗಬಹುದು.
ಸಾಧಾರಣ ಮಳೆಯಾಗುವ ಪ್ರದೇಶಗಳು:
ಉತ್ತರ ಕನ್ನಡ, ತುಮಕೂರು ಮಧ್ಯ ಹಾಗೂ ಊರ್ವ ಭಾಗದ ತಾಲೂಕುಗಳು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶ, ಉಡುಪಿ, ಕೊಪ್ಪಳ ಪೂರ್ವ ಭಾಗ, ರಾಯಚೂರಿನ ದಕ್ಷಿಣ ಭಾಗ, ಬೀದರ್ ನ ಕೆಲವು ಭಾಗಗಳಲ್ಲಿ ಮಳೆ ಆಗಲಿದೆ. ಮಳೆ ಮುನ್ಸೂಚನೆ ವರದಿಯ ಪ್ರಕಾರ ಈ ಪ್ರದೇಶಗಳಲ್ಲಿ 5 ಮಿಲಿ ಮೀಟರ್ ನಿಂದ 16 ಮಿಲಿ ಮೀಟರ್ ವರೆಗೆ ಮಳೆ ಆಗಬಹುದು.
ಹೆಚ್ಚು ಮಳೆ ಯಾಗುವ ಪ್ರದೇಶಗಳು:
ಗೋಕಾಕ್, ಕಿತ್ತೂರು, ದಕ್ಷಿಣ ಕನ್ನಡದ ಪೂರ್ವ ಭಾಗ, ಕಲಬುರ್ಗಿ, ರಾಮನಗರ, ಕುಣಿಗಲ್ ತುಮಕೂರಿನ ಪಶ್ಚಿಮ ಭಾಗ, ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಬಳ್ಳಾರಿಯ ಕೆಲವು ಭಾಗ, ಕೂಡ್ಲಗಿ, ಕೊಪ್ಪಳ, ಬಾಗೇವಾಡಿ, ತಾಳಿಕೋಟೆ, ಸಿಂದಗಿ, ಇಂಡಿ, ಯಲಬುರ್ಗಾ, ಕುಷ್ಟಗಿ ಜೀವರ್ಗಿ, ಆಫ್ಜಲ್ಪುರ, ಕಮಲಾಪುರ, ಚಿಂಚೋಳ್ಳಿ ಮೊದಲಾದ ಪ್ರದೇಶಗಳಲ್ಲಿ ಹೆಚ್ಚು ಮಳೆ ಆಗುವ ನಿರೀಕ್ಷೆ ಇದೆ.
ಅತಿ ಹೆಚ್ಚು ಮಳೆ ಆಗುವ ಪ್ರದೇಶಗಳು:
ಬಾಗಲಕೋಟೆ, ಬೆಳಗಾವಿ, ವಿಜಯನಗರ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಡಗು ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.
ಅತ್ಯಲ್ಪ ಮಳೆಯಾಗುವ ಪ್ರದೇಶಗಳು:
ತುಮಕೂರಿನ ಪೂರ್ವಭಾಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದ ಪೂರ್ವ ಭಾಗ, ಕೋಲಾರ, ಬಳ್ಳಾರಿಯ ಪೂರ್ವ ಭಾಗ ಹಾಗೂ ಬೀದರ್ ನ ಕೆಲವು ಪ್ರಾಂತ್ಯಗಳಲ್ಲಿ ಅತಿ ಕಡಿಮೆ ಮಳೆಯಾಗಬಹುದು ಎಂದು ಕೆ ಎಸ್ ಎಮ್ ಡಿ ಎಂ ಸಿ ಪ್ರಕಟಿಸಿರುವ ವರದಿಯಲ್ಲಿ ತಿಳಿಸಲಾಗಿದೆ.