Karnataka Times
Trending Stories, Viral News, Gossips & Everything in Kannada

Radhika Kumaraswamy: ರಾಧಿಕಾ ಕುಮಾರಸ್ವಾಮಿ ತಮ್ಮ ಮಗಳಿಗೆ ಶಮಿಕ ಎನ್ನುವ ಹೆಸರನ್ನು ಇಟ್ಟಿದ್ಯಾಕೆ? ಸತ್ಯ ಬಯಲಿಗೆ

Advertisement

ರಾಧಿಕಾ ಕುಮಾರಸ್ವಾಮಿ(Radhika Kumaraswamy) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಒಂದು ಕಾಲದ ಟಾಪ್ ನಟಿಯಾಗಿದ್ದರು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಂಗಳೂರು ಮೂಲದಿಂದ ಬಂದಿರುವಂತಹ ಈ ನಟಿ ಈಗ ಆಗೊಮ್ಮೆ ಈಗೊಮ್ಮೆ ಮಾತ್ರ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಅವರು ಹೇಳಿದ ಕೇಳಿದೆ ಮದುವೆಯಾಗಿದ್ದು ಕೂಡ ಸಾಕಷ್ಟು ಅಭಿಮಾನಿಗಳಿಗೆ ದೊಡ್ಡ ಮಟ್ಟದಲ್ಲಿ ದುಃಖವನ್ನು ನೀಡಿತ್ತು.

ಅದೇನೇ ಇರಲಿ ಕುಮಾರಸ್ವಾಮಿ(Kumaraswamy) ಅವರನ್ನು ಮದುವೆಯಾದ ನಂತರ ರಾಧಿಕಾ ಕುಮಾರಸ್ವಾಮಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಿಂದ ನಿಯಮಿತವಾಗಿ ದೂರ ಉಳಿಯುತ್ತಾರೆ ಆದರೂ ಕೂಡ ಮತ್ತೆ ಕೆಲವೊಂದು ಮಹಿಳಾ ಪ್ರಾಧಾನ್ಯತೆ ಹೊಂದಿರುವ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಹಾಗೂ ನಿರ್ಮಾಪಕವಾಗಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಮರು ಪಾದರ್ಪಣ ಮಾಡಿದ್ದು ಇಂದಿಗೂ ಕೂಡ ಸ್ಟಾರ್ ನಟನಿಗೆ ನಾಯಕಿಯಾಗುವಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಒಂದು ಸಂದರ್ಶನದಲ್ಲಿ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರು ಕಾಣಿಸಿಕೊಂಡಿದ್ದು ಯೂಟ್ಯೂಬ್ ನಲ್ಲಿ ಸಾಕಷ್ಟು ವೈರಲ್ ಆಗಿತ್ತು ಅದರಲ್ಲಿ ಅವರು ತಮ್ಮ ಮಗಳ ಕುರಿತಂತೆ ಯಾವ ರೀತಿಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ನೀವು ಒಬ್ಬ ಪರ್ಫೆಕ್ಟ್ ಅಮ್ಮ ಆಗಿದ್ದೀರಾ ಎಂಬುದಾಗಿ ಕೇಳಿದಾಗ ಇಲ್ಲ ನನಗೆ ಇರೋದು ಒಬ್ಬಳೇ ಮಗಳು ನನ್ನ ಸಹೋದರರ ಮಕ್ಕಳನ್ನು ಸೇರಿಸಿ ನಾನು ಎಲ್ಲರನ್ನೂ ಕೂಡ ಒಂದೇ ರೀತಿಯಲ್ಲಿ ಕಾಣುತ್ತೇನೆ ಎಂಬುದಾಗಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು ಇದರ ಜೊತೆಗೆ ಶಮಿಕ(Shamika Kumaraswamy) ಅವರಿಗೆ ಹೆಸರನ್ನು ಇಟ್ಟಿರುವ ಬಗ್ಗೆ ಕೇಳಿದಾಗ ಪುರೋಹಿತರು ಶ ಇಂದ ಪ್ರಾರಂಭ ಆಗುವಂತಹ ಹೆಸರನ್ನು ಇಡಬೇಕು ಎಂದಾಗ ನನ್ನ ಹೆಸರು ರಾಧಿಕಾ ಹಾಗೂ ನನ್ನ ತಾಯಿಯ ಹೆಸರು ಸುರೇಖಾ ಹೀಗಾಗಿ ಕೊನೆಯ ಅಕ್ಷರ ಕ ಬರುವಂತೆ ಶಮಿಕ ಎನ್ನುವುದಾಗಿ ಹೆಸರಿಟ್ಟಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಇನ್ನು ಜೀವನದಲ್ಲಿ ಕಳೆದುಕೊಳ್ಳಲು ಭಯ ಪಡುವಂತಹ ಒಂದೇ ಒಂದು ಜೀವ ಎಂದರೆ ಅದು ನನ್ನ ಮಗಳು ಎಂಬುದಾಗಿ ಈ ಸಂದರ್ಶನದಲ್ಲಿ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಹೇಳಿಕೊಂಡಿದ್ದಾರೆ.

Leave A Reply

Your email address will not be published.