ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಆರು ಬಾರಿ ರೆಪೋ ದರವನ್ನು ಏರಿಸಿದ್ದು ನಿಮಗೆ ಗೊತ್ತೇ ಇದೆ ಅದರ ಪರಿಣಾಮ ನೇರವಾಗಿ ಬ್ಯಾಂಕುಗಳ ಮೇಲೆ ಬೀರುತ್ತದೆ. ಹಿಂದಿನ ವರ್ಷ ಮೇ ಯಿಂದ ಫೆಬ್ರುವರಿಯ ವರೆಗೂ ಈ ಏರಿಕೆಯ ಬಿಸಿ ಬ್ಯಾಂಕ್ ಗಳ ಮೇಲೆ ತಟ್ಟಿದೆ. ಹಾಗಾಗಿ ಬ್ಯಾಂಕ್ ನಲ್ಲಿ ಲೋನ್ ಬಡ್ಡಿದರ ಹೆಚ್ಚಾಗಿದೆ ಇದರ ಜೊತೆಗೆ ರೆಪೋ ದರ (Repo Rate) ಏರಿಕೆಯ ಹಿನ್ನೆಲೆಯಲ್ಲಿ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡಿಪೋಸಿಟ್ ನ ಬಡ್ಡಿ ದರ ಕೂಡ ಏರಿಕೆಯಾಗಿದೆ. ಸ್ಥಿರ ಠೇವಣಿ ಅಥವಾ ಎಫ್ ಡಿ ಬ್ಯಾಂಕ್ ಗಳು ಅದರ ಮೇಲೆ ನೀಡುತ್ತಿರುವ ಬಡ್ಡಿ ದರವನ್ನು ಏರಿಸಿದೆ. ಅದರಲ್ಲೂ ಹಿರಿಯ ನಾಗರಿಕರ ಠೇವಣಿ ಮೇಲೆ ಬಡ್ಡಿದರ ಹೆಚ್ಚಾಗಿದ್ದು, ಹಿರಿಯ ನಾಗರಿಕರಿಗೆ ಇದು ಖುಷಿಯ ವಿಚಾರ.
ದೇಶದಲ್ಲಿ ಕೆಲವು ಬ್ಯಾಂಕ್ಗಳು ಫಿಕ್ಸೆಡ್ ಡೆಪಾಸಿಟ್ ಮೇಲೆ ಹಿರಿಯ ನಾಗರಿಕರ ಖಾತೆಗೆ ಶೇಕಡ 9.50 ಬಡ್ಡಿದರವನ್ನು ಹೆಚ್ಚಿಸಿವೆ. ಇನ್ನು ಸಾಮಾನ್ಯ ಖಾತೆಗೆ 3.50 ರಿಂದ ಶೇಕಡ 8ರ ವರೆಗೆ ಬಡ್ಡಿದರ ನೀಡಲಾಗುತ್ತಿದೆ. ಇನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತಲೂ ಸಣ್ಣ ಹಣಕಾಸು ಬ್ಯಾಂಕ್ ನಲ್ಲಿಯೇ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿದರ ಹೆಚ್ಚಾಗಿದೆ. ಕೆಲವು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್ ಮೇಲೆ ಶೇಕಡ 9 ರವರೆಗೂ ಬಡ್ಡಿ ದರವನ್ನು ಹೆಚ್ಚಿಸಿವೆ.
ಯಾವ ಬ್ಯಾಂಕ್ ನಲ್ಲಿ ಎಷ್ಟಿದೆ ಬಡ್ಡಿದರ?
Utkarsh Small Finance Bank: ಈ ಬ್ಯಾಂಕ್ ಸಾಮಾನ್ಯ ಜನರಿಗೆ ಎಫ್‌ಡಿ ಮೇಲೆ 8.25 ರಷ್ಟು ಬಡ್ಡಿಯನ್ನು ನೀಡುತ್ತದೆ ಈ ಬಡ್ಡಿದರ 700 ದಿನಗಳ ಎಫ್ ಡಿ ಮೇಲೆ ನಿಗದಿಪಡಿಸಲಾಗಿದೆ. ಅದೇ ರೀತಿ ಹಿರಿಯ ನಾಗರಿಕರಿಗೆ ಶೇಕಡಾ 9ರವರೆಗೂ ಬಡ್ಡಿ ದರವನ್ನು ಇದೆ ಅವರಿಗೆ ಹೆಚ್ಚಿಸಿದೆ.
Unity Small Finance Bank: ಈ ಬ್ಯಾಂಕ್ ನಲ್ಲಿಯೂ ಹಿರಿಯ ನಾಗರಿಕರ ಎಫ್ ಡಿ ಠೇವಣಿಯ ಮೇಲೆ ಬಡ್ಡಿದರ ಹೆಚ್ಚಿಸಲಾಗಿದೆ. 1001 ದಿನಗಳ ಎಫ್ ಡಿ ಮೇಲೆ ಶೇ. 9.50 ಬಡ್ಡಿದರ ನೀಡಲಾಗುತ್ತಿದೆ. ಅದೇ 501 ಒಂದು ದಿನಗಳ ಎಫ್ ಡಿ ಮೇಲೆ ಹಿರಿಯ ನಾಗರಿಕರು ತಮ್ಮ ಎಫ್ ಡಿ ಮೇಲೆ ಪಡೆಯಬಹುದು.
SuryodayBank: ಇಲ್ಲಿ ಒಂದು ವರ್ಷ ಆರು ತಿಂಗಳಿನಿಂದ ಎರಡು ವರ್ಷದವರೆಗೆ ಎಫ್ಹ್ ಡಿ ಇಟ್ಟರೆ ಶೇಕಡ 8.51 ರಷ್ಟು ಬಡ್ಡಿ ನೀಡಲಾಗುವುದು. ಅದೇ ಎರಡು ವರ್ಷದಿಂದ 998 ದಿನಗಳ ಎಫ್ ಡಿ ಮೇಲೆ 8.01 ಹಾಗೂ 999 ದಿನಗಳ ಎಫ್ ಡಿ ಮೇಲೆ ಹಿರಿಯ ನಾಗರಿಕರಿಗೆ ಶೇಕಡಾ 8.76ರಷ್ಟು ಬಡ್ಡಿ ನೀಡಲಾಗುವುದು.
ಇನ್ನು ಈ ರೀತಿಯಾದಂತಹ ಸಣ್ಣ ಫೈನಾನ್ಸ್ ಬ್ಯಾಂಕ್ ಗಳಲ್ಲಿ ನೀವು ಹೂಡಿಕೆ ಮಾಡುವುದಿದ್ದರೆ ಮೊದಲು ಆ ಬ್ಯಾಂಕ್ ನ ಬಗ್ಗೆ ಹಾಗೂ ಆ ಬ್ಯಾಂಕ್ ನ ಸುರಕ್ಷತೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಫಿಕ್ಸೆಡ್ ಡೆಪಾಸಿಟ್ ಎನ್ನುವುದು ಸುರಕ್ಷಿತ ಹಾಗೂ ಉತ್ತಮ ಉಳಿತಾಯ ಹೂಡಿಕೆಯಾಗಿದೆ. ಆದರೆ ನಾವು ಯಾವ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಹಾಗಾಗಿ ಸರಿಯಾಗಿ ಬ್ಯಾಂಕ್ ಬಗ್ಗೆ ವಿಚಾರಿಸಿ ನಂತರ ಹೂಡಿಕೆ ಮಾಡಿ.