Karnataka Times
Trending Stories, Viral News, Gossips & Everything in Kannada

Labour Card: ಮನೆಯಲ್ಲೇ ಕುಳಿತು ಕಾರ್ಮಿಕರ ಕಾರ್ಡ್ ಮಾಡಿಕೊಳ್ಳುವ ವಿಧಾನ ಇಲ್ಲಿದೆ, ಸಿಗಲಿದೆ ಉಚಿತ ಬಸ್ ಪಾಸ್, ಸ್ಕಾಲರ್ಶಿಪ್, ಮದುವೆ ಸಹಾಯಧನ.

ಇಂದು ದೇಶದಲ್ಲಿ ಜನರ ಹಿತ ಹಾಗೂ ಒಳಿತಿಗಾಗಿ ಅನೇಕ ಸೌಲಭ್ಯಗಳಿವೆ. ಆದರೆ ಬಹುತೇಕ ಜನರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಲಭ್ಯ ಇಲ್ಲ ಎಂದರೂ ತಪ್ಪಾಗಲಾರದು. ಇಂದು ಆಧಾರ್ ಕಾರ್ಡ್ (Aadhaar Card) ಸರ್ವ ವ್ಯಾಪಿ ಜನರ ವಾಸ ಸ್ಥಾನದ ಗುರುತು ಚೀಟಿಯಾಗಿ ದೃಢವಾಗುತ್ತಿದ್ದಂತೆ ಕೂಲಿ ಕಾರ್ಮಿಕರ ಪ್ರೋತ್ಸಾಹಕ್ಕಾಗಿ ಸರಕಾರ ಲೆಬರ್ ಕಾರ್ಡ್ (Labour Card) ಅನ್ನು ಸಹ ಪರಿಚಯಿಸಿತು. ಕಳೆದ ಕೆಲ ವರ್ಷಗಳಿಂದ ಅಪ್ಪಳಿಸಿದ ಕೊರೋನಾ ಸೇರಿದಂತೆ ಸಾಂಕ್ರಾಮಿಕ ರೋಗವು ಬಹುತೇಕ ಜನರ ಉದ್ಯೋಗ ಕಸಿದಿದ್ದು ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಸಣ್ಣ ಪುಟ್ಟ ಕಿರಣಿ ಅಂಗಡಿಯವರು ಉದ್ಯೋಗವಿಲ್ಲದ ಸ್ಥಿತಿ ತಲುಪಿದಾಗ ಅವರಿಗೆ ನೆರವಾಗಲೆಂದು ಹುಟ್ಟಿಕೊಂಡ ಯೋಜನೆಯೇ ಲೇಬರ್ ಕಾರ್ಡ್.

ಲೇಬರ್ ಕಾರ್ಡ್ (Labour Card) ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಹರಿದಾಡಿದಂತೆ ಜನರು ಸೈಬರ್ ಗೆ ತೆರಳಿ ಉದ್ದುದ್ದ ಕ್ಯೂ ನಿಂತೂ ತಮ್ಮ ಕಾರ್ಡ್ ಅನ್ನು ಮಾಡಿಸಿದ್ದಾರೆ. ಅದೇ ರೀತಿ ಹಣ ಕೂಡ ಜಮಾವಣೆಯಾಗಿದೆ‌. ಆದರೆ ಸೈಬರ್ ಅವರು ಈ ಅರ್ಜಿ ಪ್ರಕ್ರಿಯೆಗೆ ದುಬಾರಿ ಶುಲ್ಕ ಪಡೆಯುತ್ತಿದ್ದು ಬಹುತೇಕರು ಕಾರ್ಡ್ ಮಾಡಬೇಕೊ ಬೇಡವೇ ಎಂಬ ಗೊಂದಲಕ್ಕೆ ಸಹ ಒಳಗಾಗಿದ್ದರು, ಆದರೆ ಇದೀಗ ನೀವು ಮನೆಯಲ್ಲಿಯೇ ಯಾವುದೇ ರೀತಿ ಹಣ ವ್ಯಯಿಸದೆಯೂ ಅರ್ಜಿ ಸಲ್ಲಿಸಬಹುದಾಗಿದೆ ಈ ಕುರಿತಾದ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

Join WhatsApp
Google News
Join Telegram
Join Instagram

ಅರ್ಹತೆ ಏನು?

  • ಭಾರತೀಯ ಪ್ರಜೆ ಯಾಗಿದ್ದು 18 ವರ್ಷ ಕನಿಷ್ಟ ವಯಸ್ಸಾಗಿರಬೇಕು.
  • ನಿಮ್ಮ ಪ್ರದೇಶದಲ್ಲಿ ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ನೀವು ಕಾರ್ಮಿಕರಾಗಿ ನೋಂದಾಯಿಸಿಕೊಳ್ಳಬೇಕು.ಅರ್ಜಿ ಸಲ್ಲಿಸಲು 60 ವರ್ಷ ದಾಟಿರಬಾರದು.
  • ವರ್ಷಕ್ಕೆ ಕನಿಷ್ಠ 100-150 ದಿನ ಕಾರ್ಮಿಕ ಕೆಲಸದಲ್ಲಿ ತೊಡಗಿರಬೇಕು.ಕಟ್ಟಡ ಕಾರ್ಮಿಕ ಆಗಿದ್ದಲ್ಲಿ , ನಿಮ್ಮ ಮೆಸ್ತ್ರಿಯ (Labour Card Number ) ಅಥವಾ ಅವರ ಜೊತೆಗೆ ಕೆಲಸ ಮಾಡುವ ಕುರಿತು ಸರ್ಟಿಫಿಕೇಟ್ ಪಡೆದುಕೊಳ್ಳಬೇಕು.

ಯಾವೆಲ್ಲ ದಾಖಲಾತಿ ಅಗತ್ಯ:

  • ನಿಮ್ಮ ಬ್ಯಾಂಕ್ ಪಾಸ್ ಬುಕ್
  • ಆಧಾರ್ ಕಾರ್ಡ್ ಹಾಗೂ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಅಗತ್ಯ
  • ಪಾಸ್ ಪೋರ್ಟ್ ಅಳತೆಯ ನಿಮ್ಮ ಭಾವಚಿತ್ರ
  • ರೇಶನ್ ಕಾರ್ಡ್

ಹೇಗೆ ಸಲ್ಲಿಕೆ?

Step 1: ಆನ್ಲೈನ್ ನೋಂದಣಿ Tab ಓಪನ್ ಮಾಡಿ, ನಂತರ ನವೀಕರಣ Tab open ಮಾಡಿಕೊಳ್ಳಿ. ಬಳಿಕ ಅಲ್ಲಿ Portal ಒಳ್ಗೆ ಸೇರಿಸಲು, ಹೊಸ ನೋಂದಣಿ Tab ಅ ನ್ನು ಕ್ಲಿಕ್ ಮಾಡಿಕೊಳ್ಳಿ. ಅಲ್ಲಿ ಕೊಟ್ಟಿರುವ ಎಲ್ಲ ವಿವರಗಳನ್ನು ತುಂಬಿರಿ‌. ನಿಮ್ಮ ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ರಚನೆ ಮಾಡಿಕೊಳ್ಳಿ. ಇದು ನಿಮಗೆ ಆನ್ಲೈನ್ ಕಾರ್ಡ್ (ಅರ್ಜಿ) ತುಂಬಲು ಬಹುಮುಖ್ಯ ಪಾತ್ರ ವಹಿಸುತ್ತದೆ.

Step 2: ಬೆನಿಫಿಟ್ ಕಾರ್ಡ್ ಮತ್ತು ಪಾಸ್ವರ್ಡ್ ಬಳಸಿಕೊಂಡು ಪೋರ್ಟಲ್ ಗೆ ಲಾಗಿನ್ ಮಾಡಿ, ಅಲ್ಲಿ ಕೊಟ್ಟಿರುವ ಎಲ್ಲ ದಾಖಲೆಗಳನ್ನು ತುಂಬಿ ಬಳಿಕ ಅಪ್ಲೋಡ್ ಮಾಡಬೇಕು.

Step 3: ನಂತರದಲ್ಲಿ ಅರ್ಜಿ ಸಲ್ಲಿಸಿದ ಮೇಲೆ, ನೀವು ಶುಲ್ಕವನ್ನು ನೀಡಬೇಕಾಗುತ್ತದೆ, ಆನ್ಲೈನ್ ಅಥವಾ ಆಫ್ಲೈನ್ ಪಾವತಿ ಮಾಡಬಹುದು. ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಈ ಮೂಲಕ ಯಾವುದೇ ಸೈಬರ್ ಕೇಂದ್ರಗಳಿಗೆ ಅಲೆದಾಟಮಾಡದೆಯೂ ಅರ್ಜಿ ಸಲ್ಲಿಸಬಹುದಾಗಿದೆ.

Leave A Reply

Your email address will not be published.