ಈಗ ಎಲ್ಲಿ ನೋಡಿದ್ರೂ ಜಾಹೀರಾತು. ಯಾವುದೇ ಉತ್ಪನ್ನ ಮಾರುಕಟ್ಟೆಗೆ ಬರಲಿ ಮೊದಲು ಅದರ ಜಾಹೀರಾತು ನೀಡುತ್ತಾರೆ. ವಿವಿಧ ಸೌಂದರ್ಯ ವರ್ಧಕಗಳು ಇರಬಹುದು ಬಟ್ಟೆ ಫ್ಯಾಷನ್ ಮೊದಲಾದ ವಿಷಯಗಳ ಬಗ್ಗೆ ಜಾಹಿರಾತು ನೀಡಲಾಗುತ್ತದೆ. ಇನ್ನು ಈ ಜಾಹೀರಾತುಗಳನ್ನು ಕೇವಲ ಕಂಪನಿ ನೀಡುವುದು ಮಾತ್ರವಲ್ಲ ಸೆಲಿಬ್ರೇಟಿಗಳು ಈ ಕಂಪನಿಗಳ ಉತ್ಪನ್ನವನ್ನು ಜಾಹೀರಾತು ಮಾಡುತ್ತಾರೆ ಅಥವಾ ಪ್ರಚಾರ ಮಾಡುತ್ತಾರೆ.
ತಮ್ಮ ತಮ್ಮ ಇಷ್ಟದ ಸ್ಟಾರ್ ನಟ ಅಥವಾ ನಟಿ ಯಾವುದೇ ಉತ್ಪನ್ನದ ಪ್ರಚಾರ ಮಾಡಿದಾಗ ಅದನ್ನು ಖರೀದಿಸುವ ಮನಸ್ಸು ಜನರಿಗೆ ಆಗುವುದು ಸಹಜ. ಆದರೆ ಈ ಎಲ್ಲಾ ಉತ್ಪನ್ನಗಳ ಬಳಕೆ ಎಷ್ಟು ಸೇಫ್ ಎನ್ನುವುದನ್ನು ಯಾವ ಸೆಲೆಬ್ರಿಟಿ ಕೂಡ ಹೇಳುವುದಿಲ್ಲ. ಹಾಗಾಗಿ ಇನ್ಮೇಲೆ ಯಾವುದಾದರೂ ಉತ್ಪನ್ನಗಳ ಪ್ರಚಾರ ಮಾಡಿ ಜನರನ್ನ ಸೆಲೆಬ್ರೆಟಿಗಳು ಮೋಸ ಮಾಡುವಂತಿಲ್ಲ ಇದಕ್ಕೆಲ್ಲ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ.
ಹೌದು, ಜನರ ದಾರಿ ತಪ್ಪಿಸುವಂತಹ ಯಾವುದೇ ಜಾಹೀರಾತನ್ನು ನೀಡುವ ಹಾಗೆ ಇಲ್ಲ ಒಂದೊಮ್ಮೆ ಅಂತಹ ಜಾಹೀರಾತು ಪ್ರಸಾರವಾಗಬೇಕಾದರೆ ಸಂಪೂರ್ಣ ವಿಷಯವನ್ನ ಸೆಲಿಬ್ರೆಟಿಗಳು ಬಹಿರಂಗಪಡಿಸಬೇಕು. ಅಂದರೆ ಆ ಉತ್ಪನ್ನವನ್ನು ತಾವು ಬಳಸಿದ್ದೇವೆಯೇ ಅಥವಾ ಕೇವಲ ಹಣಕ್ಕಾಗಿ ಪ್ರಚಾರ ಮಾಡುತ್ತಿರುವುದೇ ಅಥವಾ ಈ ಜಾಹೀರಾತು ನೀಡಲು ಬೇರೆ ಏನಾದರೂ ಕಾರಣ ಇದೆಯೇ ಎಂಬುದನ್ನ ಬಹಿರಂಗಪಡಿಸಬೇಕು. ಯಾವುದೇ ಉತ್ಪನ್ನವಾದರೂ ಸರಿ ಕೇವಲ ಹಣಕ್ಕಾಗಿ ಅದರ ಪ್ರಚಾರವನ್ನು ಸೆಲಿಬ್ರೇಟ್ ಗಳು ಇನ್ನು ಮಾಡುವಂತಿಲ್ಲ.
ಸಾಕಷ್ಟು ಸಿನಿಮಾ ನಟ ನಟಿಯರು ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಯುವಕ ಯುವತಿಯರು ಇಂದು ಸಾಕಷ್ಟು ಬೇರೆಬೇರೆ ಉತ್ಪನ್ನಗಳ ಪ್ರಮೋಷನ್ ಮಾಡುತ್ತಾರೆ ಆದರೆ ಇದು ಜನರ ಮೇಲೆ ನೆಗೆಟಿವ್ ಪರಿಣಾಮ ಬೀರಬಹುದು ಹಾಗಾಗಿ ಕ್ಯಾಮರಾ ಮುಂದೆ ನಗುತ್ತಾ ಆ ಸಾಧನವನ್ನು ಅಥವಾ ಉತ್ಪನ್ನವನ್ನು ಕೈಯಲ್ಲಿ ಹಿಡಿದು ಕೊಡುವ ಮುನ್ನ ಸೆಲಿಬ್ರೆಟಿಗಳು ಸಾಕಷ್ಟು ವಿಚಾರವನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕು.
ಆಯಾ ಉತ್ಪನ್ನದ ಕಂಪನಿಗಳ ಜೊತೆ ತಮಗಿರುವ ವಾಣಿಜ್ಯ ಸಂಬಂಧವನ್ನು ಬಹಿರಂಗಪಡಿಸಬೇಕು ಎಂದು ಸರ್ಕಾರ ಶರತ್ತು ಹಾಕಿದೆ. ಗ್ರಾಹಕ ವ್ಯವಹಾರ ಇಲಾಖೆ, ಹೊಸದೊಂದು ಮಾರ್ಗಸೂಚಿಯನ್ನು ಹೊರಡಿಸಿದೆ. ಯಾವುದೇ ಸೆಲೆಬ್ರಿಟಿಗಳು ಪ್ರಭಾವಶಾಲಿಗಳು Social Media Influencer ಆಗಿರುವವರು ತಾವು ಪ್ರಚಾರ ಮಾಡುವ ನಿರ್ದಿಷ್ಟ ಸಾಧನ ಅಥವಾ ಸೇವೆಯನ್ನು ಯಾವ ಉದ್ದೇಶಕ್ಕಾಗಿ ಪ್ರಚಾರ ಮಾಡುತ್ತಿದ್ದೇವೆ ಎಂಬುದನ್ನು ಕಡ್ಡಾಯವಾಗಿ ತಿಳಿಸಬೇಕು.
ಪ್ರಚಾರದ ಸಮಯದಲ್ಲಿ ಪಾವತಿಸಿದ ಅಥವಾ ವಿನಿಮಯದ ಬ್ರಾಂಡ್ ಅನುಮೋದನೆಯ ಜೊತೆಗೆ ಜಾಹೀರಾತು ಪ್ರಾಯೋಜಿತ ಸಹಯೋಗ ಅಥವಾ ಪಾಲುದಾರಿಕೆ ಎಂಬುದನ್ನ ಬಹಿರಂಗವಾಗಿ ಹೇಳಬೇಕು. ಇನ್ನು ಕೇವಲ ಕ್ಯಾಶ್ ಟ್ಯಾಗ್ ಅಥವಾ ಹೆಡ್ ಲೈನ್ ನಲ್ಲಿ ಕೆಲವು ಪದಗಳನ್ನು ಸೇರಿಸಿ ಬಹಿರಂಗಪಡಿಸುವುದಲ್ಲ. ಅವರು ಪ್ರಚಾರ ಮಾಡುವ ವಿಡಿಯೋದಲ್ಲಿ ವಿಡಿಯೋ ಅಥವಾ ಆಡಿಯೋ ರೂಪದಲ್ಲಿ ಸಂಪೂರ್ಣ ಸ್ಟ್ರೀಮಿಂಗ್ ನಲ್ಲಿ ನಿರಂತರವಾಗಿ ಈ ವಿಷಯ ಪ್ರದರ್ಶನವಾಗಬೇಕು. ಸರ್ಕಾರದ ಈ ಒಂದು ಪ್ರಮುಖ ಹೆಜ್ಜೆಯಿಂದಾಗಿ ಖಂಡಿತವಾಗಿಯೂ ಇನ್ನು ಮುಂದೆ ಜನರು ಉತ್ಪನ್ನಗಳನ್ನು ಖರೀದಿಸುವಾಗ ಎಚ್ಚರಿಕೆಯಿಂದ ಇರಬಹುದು.