Padma Bhushan Award: ಸುಧಾ ಮೂರ್ತಿ ಅವರ ಪದ್ಮಭೂಷಣ ಅವಾರ್ಡ್ ಕಾರ್ಯಕ್ರಮದಲ್ಲಿ ಬಂದಿದ್ದ ವಿಶೇಷ ವ್ಯಕ್ತಿ ಯಾರು ಗೊತ್ತಾ!

Advertisement
ಸುಧಾ ಮೂರ್ತಿ (Sudha Murthy) ಹಾಗೂ ನಾರಾಯಣಮೂರ್ತಿ ದಂಪತಿಗಳು ಮೊದಲಿನಿಂದಲೂ ಕೂಡ Infosys ಹಾಗೂ ಜನಸೇವೆ ಮತ್ತು ತಮ್ಮ ಸಿಂಪಲ್ ವ್ಯಕ್ತಿತ್ವದ ಮೂಲಕವೇ ಎಲ್ಲರ ಮನ ಗೆದ್ದಂತವರು. ಅದರಲ್ಲೂ ವಿಶೇಷವಾಗಿ ಸುಧಾ ಮೂರ್ತಿಯವರು ಇನ್ಫೋಸಿಸ್ ಟ್ರಸ್ಟ್ ಮೂಲಕ ಈಗಾಗಲೇ ಕರ್ನಾಟಕ ಸೇರಿದಂತೆ ಬಹಳ ಜನರಿಗೆ ಮಾಡಿರುವಂತಹ ಸಹಾಯಗಳನ್ನು ನೋಡಿದರೆ ಖಂಡಿತವಾಗಿ ಅವರಿಗೆ ಯಾವ ಪ್ರಶಸ್ತಿ ನೀಡಿದರು ಕೂಡ ಕಡಿಮೆ ಅಂತಾನೆ ಹೇಳಬಹುದು. ಇನ್ನು ನಿನ್ನೆಯಷ್ಟೇ ರಾಷ್ಟ್ರಪತಿ ಆಗಿರುವಂತಹ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ (Padma Bhushana Award) ಪ್ರಶಸ್ತಿಗೆ ನಮ್ಮೆಲ್ಲರ ನೆಚ್ಚಿನ ಸುಧಾ ಮೂರ್ತಿ ಅಮ್ಮ ಪಾತ್ರರಾಗಿದ್ದಾರೆ.
ಇದೇ ಪ್ರತಿಷ್ಠಿತ ಅವಾರ್ಡ್ ಅನ್ನು 2008ರಲ್ಲಿ ಸುಧಾ ಮೂರ್ತಿ ಅವರ ಪತಿ ಆಗಿರುವಂತಹ ನಾರಾಯಣ ಮೂರ್ತಿ (Narayana Murthy) ಅವರು ಪಡೆದುಕೊಂಡಿದ್ದರು. ಈಗ ಅವರ ಪತ್ನಿಯಾಗಿರುವಂತಹ ಸಮಾಜ ಸೇವಕಿ ಮತ್ತು ಇನ್ಫೋಸಿಸ್ ಫೌಂಡೇಶನ್ ನ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಸುಧಾ ಮೂರ್ತಿ ಅವರು ಪಡೆದುಕೊಂಡಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರು ಹೆಮ್ಮೆಪಡುಬೇಕಾಗಿರುವಂತಹ ವಿಚಾರವಾಗಿದೆ. ಈ ಸಂದರ್ಭದಲ್ಲಿ UK ದೇಶದ ಪ್ರಧಾನಮಂತ್ರಿಯಾಗಿರುವಂತಹ ರಿಶಿ ಸುನಕ್ (Rishi Sunak) ಅವರ ಪತ್ನಿ ಆಗಿರುವ ಅಕ್ಷತಾ ಮೂರ್ತಿ ಕೂಡ ಉಪಸ್ಥಿತರಿದ್ದರು.
ಹೌದು ಅಕ್ಷತಾ ಮೂರ್ತಿ ಬೇರೆ ಯಾರು ಅಲ್ಲ ಸುಧಾ ಮೂರ್ತಿ ಹಾಗೂ ನಾರಾಯಣ ಮೂರ್ತಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಒಬ್ಬರಾಗಿದ್ದಾರೆ. ಈ ಸಂದರ್ಭದಲ್ಲಿ ಮಗ ರೋಹನ್ ಮೂರ್ತಿ ಕೂಡ ಉಪಸ್ಥಿತರಿದ್ದರು. ಮೊದಲಿಗೆ ಅಕ್ಷತಾ ಮೂರ್ತಿ ಅವರು ತಮ್ಮ ಪೋಷಕರ ಜೊತೆಗೆ ಕಾರ್ಯಕ್ರಮದ ಮಧ್ಯಭಾಗದಲ್ಲಿರುವ ಸಾಲಿನ ಕುರ್ಚಿಯಲ್ಲಿ ಕುಳಿತುಕೊಂಡಿದ್ದರು. ನಂತರ ಅವರು UK ದೇಶದ ಪ್ರಧಾನ ಮಂತ್ರಿ ಆಗಿರುವ ರಿಷಿ ಸೋನಾಕ್ ರವರ ಪತ್ನಿ ಎನ್ನುವ ಕಾರಣಕ್ಕಾಗಿ ಪ್ರೋಟಕಾಲ್ ಮೂಲಕ ಅವರನ್ನು ಮುಂದಿನ ಸಾಲಿನಲ್ಲಿ ಕುಳಿತಿದ್ದ ವಿದೇಶಾಂಗ ಸಚಿವ ಜೈ ಶಂಕರ್ ಅವರ ಜೊತೆಗೆ ಕೂರಿಸಲಾಯಿತು. ತಮ್ಮ ಕುಟುಂಬಸ್ಥರ ಕಣ್ಣೆದುರು ಭಾರತದ ಘನವೆತ್ತ ಪ್ರಶಸ್ತಿ ಆಗಿರುವಂತಹ ಪದ್ಮಭೂಷಣ ಪ್ರಶಸ್ತಿಗೆ ನಮ್ಮೆಲ್ಲರ ನೆಚ್ಚಿನ ಸುಧಾ ಮೂರ್ತಿಯವರು (Sudha Murthy) ಪಾತ್ರರಾಗಿದ್ದಾರೆ.