ತಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ಬಂಗಾರದ ಬೆಲೆ(Gold Rate) ಯಾವತ್ತೂ ಕೂಡ ಕಡಿಮೆ (Less) ಆಗುವುದಿಲ್ಲ ಅದು ಏರುತ್ತಲೇ (Rise)) ಇರುತ್ತದೆ ಎಂಬುದು ಎಲ್ಲರ ನಂಬಿಕೆಯಾಗಿದೆ. ಇನ್ನು ಚಿನ್ನದ ಬೆಲೆ ಆಗಾಗ ಸ್ವಲ್ಪ ಕಡಿಮೆ ಆದರೂ ಕೂಡ ಏರಿಕೆಯಂತೂ ಖಂಡಿತವಾಗಿಯೂ ಇದ್ದೇ ಇರುತ್ತದೆ ಸದ್ಯ ಇದೇ ಕಾರಣಕ್ಕಾಗಿ ದೀರ್ಘಾವಧಿಗೆ ಹೂಡಿಕೆ (Invest) ಮಾಡುವಂತಹವರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ ಹಾಗೂ ಒಂದು ಒಳ್ಳೆಯ ಮೊತ್ತ ಸಿಕ್ಕರೆ ಸಾಕು ಮೊದಲು ಚಿನ್ನವನ್ನೇ ಖರೀದಿ (Purchase) ಮಾಡಿಬಿಡುತ್ತಾರೆ.
ಸದ್ಯ ಪ್ರಪಂಚದ (World) ಎಲ್ಲಾ ದೇಶಗಳಿಗೆ ಹೋಲಿಕೆ ಮಾಡುವುದಾದರೆ ಭಾರತ (India) ಚಿನ್ನದ ಬಳಕೆಯಲ್ಲಿ ಹಾಗೂ ಹೂಡಿಕೆಯಲ್ಲಿ ಮುಂಚೂಣಿಯಲ್ಲಿದೆ ಎನ್ನಬಹುದಾಗಿದ್ದು ಭಾರತೀಯ ಮಹಿಳೆಯರಿಗೆ (Indian Ladies) ಬಂಗಾರದ ದರ ಗಗನಕ್ಕೇರಿದರೂ ಕೂಡ ಅದರ ಮೇಲಿನ ವ್ಯಾಮೋಹ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಸದ್ಯ ಇಂದು ಚಿನ್ನದ ದರ ದುಬಾರಿಯಾಗಿದೆ.
ಚಿನ್ನದ ಬೆಲೆ ಏರಿಕೆಗೆ ಏನು ಕಾರಣ?
ಸದ್ಯ ಅಮೆರಿಕದ (America) ಆರ್ಥಿಕತೆಯ ತುಮುಲ ನಿರುದ್ಯೋಗ ಅಂಕಿ ಅಂಶದ ಗೊಂದಲ ಹಣದುಬ್ಬರ ಅನಿಶ್ಚಿತತೆ ಬಡ್ಡಿ ದರ ಬಗ್ಗೆ ಅಸ್ಪಷ್ಟತೆ ಡಾಲರ್ ದುರ್ಬಲಗೊಂಡಿರುವುದು ಇವೆಲ್ಲವೂ ಕೂಡ ಹೂಡಿಕೆದಾರರನ್ನು ಚಿನ್ನದತ್ತ ಗಮನ ಕೊಡುವಂತೆ ಮಾಡಿವೆ. ಈ ಕಾರಣದಿಂದಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಿ ಬೆಲೆ ಸಹ ಹೆಚ್ಚುತ್ತಿದೆ. ಇನ್ನು ತಜ್ಞರ ಪ್ರಕಾರವಾಗಿ ಇನ್ನೂ ಬಹಳಷ್ಟು ದಿನ ಚಿನ್ನದ ಬೆಲೆ ಏರಿಕೆಯ ಟ್ರೆಂಡ್ ಮುಂದುವರಿಯಬಹುದು ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಈಗಲೂ ಪ್ರಶಸ್ತ ಸಮಯ ಇದೆ ಎಂಬ ಸಲಹೆಯನ್ನು ಕೂಡ ಕೊಡಲಾಗಿದೆ.
ಇಂದಿನ ಚಿನ್ನದ ಬೆಲೆ…
ಸದ್ಯ ಇಂದು ಚಿನ್ನ ಸ್ವಲ್ಪ ದುಬಾರಿಯಾಗಿದೆ ಎನ್ನಬಹುದು. ಯಾಕೆಂದರೆ ನಿನ್ನೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ಸುಮಾರು 5,530 ರೂ ಆಗಿದ್ದು ಇಂದು ಪ್ರತಿ ಗ್ರಾಂಗೆ ರೂ. 5,625 ಆಗಿ ಬಿಟ್ಟಿದೆ.ಇನ್ನು ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಬಂಗಾರದ ದರ ನೋಡುವುದಾದರೆ ಬೆಂಗಳೂರಿನಲ್ಲಿ 10 ಗ್ರಾಂ ನ 22 ಕ್ಯಾರಟ್ ಬಂಗಾರದ ಬೆಲೆ ) ರೂ. 56,300 ಆಗಿದ್ದು ಚೆನ್ನೈ ನಲ್ಲಿ 56,900 ರೂ ಹಾಗೂ ಮುಂಬೈ ನಲ್ಲಿ 56,250 ರೂ ಮತ್ತು
ಕೊಲ್ಕತ್ತಾ ನಗರಗಳಲ್ಲಿ ರೂ. 56,250 ಆಗಿದೆ.
ಇನ್ನು ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,400 ರೂ. ಆಗಿದೆ ಇನ್ನು ಇಂದಿನ ಬಂಗಾರದ ರೇಟ್ ಎಷ್ಟಾಗಿದೆ ಎಂದು ನೋಡುವುದಾದರೆ ಒಂದು ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,625 ಆಗದ್ದು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 6,136 ಆಗಿದೆ. ಇನ್ನು ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 45,000 ಆಗಿದ್ದು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 49,088 ಆಗಿದೆ.
ಇಂದಿನ ಬೆಳ್ಳಿಯ ಬೆಲೆ..
ಇನ್ನು ಬೆಳ್ಳಿ ಅಂತೂ ಮುಟ್ಟುವ ಹಾಗೇ ಇಲ್ಲ ಎನ್ನುವಂತಾಗಿದ್ದು 2,490 ರೂಪಾಯಿ ಹೆಚ್ಚಿಸಿಕೊಳ್ಳುವ ಮೂಲಕವಾಗಿ ಒಂದು ಕೆಜಿ ಬೆಳ್ಳಿಗೆ 77,090 ರೂಪಾಯಿ ಆಗಿದೆ. ಇನ್ನು ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm ಗೆ ರೂ.807,
100gm ಗೆ ರೂ. 8,070 ಮತ್ತು 1000gm (1ಕೆಜಿ) ಬೆಳ್ಳಿ ಬೆಲೆ ರೂ. 80,700 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದಂತಹ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ.80,700 ಆಗಿದ್ದರ ದೆಹಲಿಯಲ್ಲಿ ರೂ. 77,090 ಮುಂಬೈನಲ್ಲಿ ರೂ. 77,090 ಮತ್ತು ಕೊಲ್ಕತ್ತದಲ್ಲೂ ರೂ. 77,090 ಗಳಾಗಿದೆ.