Karnataka Times
Trending Stories, Viral News, Gossips & Everything in Kannada

Kiccha Sudeep: ಬಸವರಾಜ್ ಬೊಮ್ಮಾಯಿ ಹೇಳಿದ್ರೆ ಚುನಾವಣೆ ಸ್ಪರ್ಧೆ ಮಾಡ್ತೀರಾ? ಸುದೀಪ್ ಉತ್ತರ ಹೀಗಿತ್ತು

Advertisement

ನಟ ಸುದೀಪ್ (Actor Sudeep) ,​ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ (CM Basavaraj Bommai) ಅವರ ಬೆಂಬಲ ಮತ್ತು ಪ್ರಚಾರ ಕಾರ್ಯದಲ್ಲಿ ತೊಡಗಿಸಿ ಕೊಳ್ಳುವುದಾಗಿ ಘೋಷಿಸಿದ್ದಾರೆ, ಈ ನಡುವೆ ಕಿಚ್ಚನ (Kiccha) ಬಗ್ಗೆ ಕೆಲವೆಡೆ ಭಾರೀ ವಿರೋಧ ಗಳು ಕೇಳಿಬರ್ತಿವೆ, ಸುದೀಪ್ ಬೊಮ್ಮಯಿ ಗೆ ಬೆಂಬಲ ಪ್ರಚಾರ ನೀಡ್ತಾರೆ ಅಂದ್ರೆ ಅವರು ಬಿ ಜೆಪಿ ಸೇರ್ಪಡೆ ಯಾಗಿದ್ದಾರೆ ಎಂದರ್ಥ, ಇವರನ್ನು ಮತ ಪ್ರಚಾರಕ್ಕೆ ಬಳಸಿಕೊಂಡಿದ್ದು ತಪ್ಪು ಎನ್ನುವುದು ಕೆಲವರ ವಾದ.

ಕಿಚ್ಚ ಹೇಳಿದ್ದೇನು

ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ನಟ ಸುದೀಪ್ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ರು, ಈ ವೇಳೆ , ಬಸವರಾಜ ಬೊಮ್ಮಾಯಿ ಚಿತ್ರರಂಗದಲ್ಲಿ ನನಗೆ ಬಹಳಷ್ಟು ಸಹಾಯಕ್ಕೆ ನಿಂತಿದ್ದಾರೆ. ನನ್ನ ಕಷ್ಟಕ್ಕೆ ಸ್ಪಂದಿಸಿದ್ದಾರೆ, ಈ ನಿಟ್ಟಿನಲ್ಲಿ ಅವರ ಪರ ನಾನು ಪ್ರಚಾರ ಮಾಡುತ್ತೇನೆ. ಅಲ್ಲದೆ ಅವರು ಎಲ್ಲಿ ಪ್ರಚಾರ ಮಾಡು ಅಂತಾರೋ ಅಲ್ಲಿ ಮಾಡುತ್ತೇನೆ. ಎಂದು ಕಿಚ್ಚ ಸುದೀಪ್ ಹೇಳಿದ್ದರು.

ನಾನು ಯಾವ ಪಕ್ಷದಲ್ಲೂ ಚುನಾವಣೆಗೆ ನಿಲ್ಲುವುದಿಲ್ಲ

ಯಾವುದೇ ಕಾರಣಕ್ಕೂ ನಾನು ಚುನಾವಣೆಗೆ ನಿಲ್ಲುವುದಿಲ್ಲ. ಎಲ್ಲಾ ಪಕ್ಷ ದಲ್ಲಿಯೂ ನನಗೆ ಆತ್ಮೀಯ ರಿದ್ದಾರೆ. ಹಾಗಾಗಿ ಯಾವ ಪಕ್ಷದಲ್ಲಿಯು ನಿಲ್ಲೋದಿಲ್ಲ, ಕೆಲವರ ಪರವಾಗಿ ನಾನು ನಿಲುವು ತೆಗೆದು ಕೊಂಡಿದ್ದೇನೆ. ನನಗೆ ಮಾಡಲು ತುಂಬಾ ಸಿನಿಮಾಗಳು ಇವೆ. ನಿರ್ಧಾರ ಮಾಡಿಯೇ ನಾನು ನಿಲುವು ತೆಗೆದು ಕೊಳ್ತೇನೆ ಎಂದರು.

ಬಸವರಾಜ್ ಬೊಮ್ಮಯಿ ಹೇಳಿದ್ರೆ ಚುನಾವಣೆ ನಿಲ್ತೀರಾ

ನಾನು ಯಾರ ಪರವಾಗಿಯೂ ಚುನಾವಣೆಯಲ್ಲಿ ಟಿಕೆಟ್‌ ಕೇಳಿಲ್ಲ, ನಾನು ನಿರ್ಧಾರ ಮಾಡಿಯೇ ಪ್ರಚಾರಕ್ಕೆ ಬಂದಿದ್ದು, ಯಾವುದೇ ಪಕ್ಷ ನನಗೆ ಬೇಡ, ಹಾಗೇನಾದ್ರೂ ಚುನಾವಣೆಗೆ ಸ್ಪರ್ಧೆ ಮಾಡುವುದು ಅನಿವಾರ್ಯ ಎಂದಾದಾರೆ ಅದನ್ನ ಖಂಡಿತವಾಗಿಯೂ ನೇರವಾಗಿಯೇ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದ್ರು. ಅನಿವಾರ್ಯ ಕಾರಣಗಳಿಗೆ ನಾನು ಚುನಾವಣೆ ಗೆ ನಿಲ್ಲೋದೆ ಇಲ್ಲ, ಬಸವರಾಜ್ ಬೊಮ್ಮಯಿ ಚುನಾವಣೆ ನಿಲ್ಲಲೇ ಬೇಕು ಅಂದ್ರು ಆ ನಿರ್ಧಾರ ತೆಗೆದುಕೊಳ್ಳುವುದಿಲ್ಲ‌ ಎಂದರು.

ಕಿಚ್ಚನ ವಿರುದ್ಧ ದೂರು

ಬಿಜೆಪಿ ಪರ ಪ್ರಚಾರ ಮಾಡಲು ಮುಂದಾಗಿರುವ ನಟ ಕಿಚ್ಚ ಸುದೀಪ್‌ ಅವರ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಸುದೀಪ್ ಅವರ ಟಿವಿ ಶೋಗಳನ್ನು ಪ್ರಸಾರ ಮಾಡಿದರೆ ಜನರಬ ಮೇಲೆ ಪ್ರಭಾವ ಬೀರುವ ಸನ್ನಿವೇಶ ಇದೆ, ಪ್ರಸಾರ ಮಾಡಿದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಯಾಗುತ್ತದೆ. ಹೀಗಾಗಿ ಚುನಾವಣೆ ಮುಗಿಯುವವರೆಗೆ ಅವರ ಚಿತ್ರಗಳನ್ನು ಪ್ರಸಾರಕ್ಕೆ ತಡೆಯೊಡ್ಡಬೇಕೆಂದು ಮನವಿ ಮಾಡಿದ್ದಾರೆ, ಇದೀಗ ಈ ವಿಷಯ ಕೆಲವು ಅಭಿಮಾನಿಗಳಿಗೆ ಖುಷಿ ನೀಡಿದ್ದರೂ, ಇನ್ನೂ ಕೆಲವರು ರಾಜಕೀಯದಿಂದ ದೂರ ಇರಿ ನಿಮಗೆ ಸಮಸ್ಯೆಯಾಗುತ್ತದೆ, ಎಂದು ಮನವಿ ಮಾಡಿದ್ದಾರೆ

Leave A Reply

Your email address will not be published.