UPI Payment: ಗೂಗಲ್ ಪೇ ಫೋನ್ ಪೇ ಮಾಡುವವರಿಗೆ ಭಾರತ ಸರ್ಕಾರದ ಹೊಸ ಸಿಹಿಸುದ್ದಿ.

Advertisement
RBI ನ ಗವರ್ನರ್ ಆಗಿರುವಂತಹ ಶಕ್ತಿಕಾಂತ್ ದಾಸ್( Shakthikanth Das) ಆನ್ಲೈನ್ ಟ್ರಾನ್ಸ್ಯಾಕ್ಷನ್ಗಳಾಗಿರುವಂತಹ UPI ಮಾದರಿಯ ಡಿಜಿಟಲ್ ಹಣದ ವರ್ಗಾವಣೆಯನ್ನು ಇನ್ನಷ್ಟು ಪ್ರೋತ್ಸಾಹಿಸುವ ಕಾರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇನ್ನು ಇದರ ಅನ್ವಯ ಈಗಾಗಲೇ ಅವರು ಬಳಸುತ್ತಿರುವಂತಹ ಅಪ್ಲಿಕೇಶನ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಮಾದರಿಯ ಸೌಲಭ್ಯಗಳನ್ನು ಕೂಡ ನೀಡುವ ಕುರಿತಂತೆ ಯೋಚನೆ ಮಾಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಯುಪಿಐ ಟ್ರಾನ್ಜ್ಯಕ್ಶನ್ಗಳು ಈಗಾಗಲೇ ಜನಪ್ರಿಯವಾಗಿರುವ ಹಿನ್ನೆಲೆಯಲ್ಲಿ ಇದನ್ನು ಇನ್ನಷ್ಟು ಜನಪ್ರಿಯವಾಗಿಸುವ ನಿಟ್ಟಿನಲ್ಲಿ ಇಲ್ಲಿ ಸಾಲ ಸೌಲಭ್ಯವನ್ನು ನೀಡುವ ನಿರ್ಧಾರಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reserve Bank Of India) ಬಂದಿದೆ ಎಂಬುದಾಗಿ ಗವರ್ನರ್ ಹೇಳಿದ್ದಾರೆ.
ಆಯಾಯ ಬ್ಯಾಂಕ್ಗಳಿಂದ UPI ಬಳಕೆದಾರರಿಗೆ ಕ್ರೆಡಿಟ್ ಲೈನ್ ಮಿತಿಯನ್ನು ನೀಡಲಾಗುತ್ತದೆ. ಅದರ ಅನ್ವಯ ಅವರಿಗೆ ಆ ಮಿತಿಯ ಲಿಮಿಟ್ ಒಳಗೆ ಹಣ ಸಿಗಲಿದ್ದು ತಮ್ಮ ಬೇರೆ ಖರ್ಚುಗಳಿಗೆ ಹಾಗೂ ಸಾಲವನ್ನು ತೀರಿಸಲು ಈ ಹಣವನ್ನು ಬಳಸಬಹುದಾಗಿದೆ. ಆದ ನಂತರ ನಿಯಮಿತ ದಿನದೊಳಗೆ ಅದಕ್ಕೆ ಬಡ್ಡಿ ಸೇರಿಸಿ ವಾಪಸ್ ಕಟ್ಟಬೇಕಾಗುತ್ತದೆ.
ಹೀಗಾಗಿಯೇ ಅಂತಹ ಗ್ರಾಹಕರಿಗೆ ಆಯಾಯ UPI ಟ್ರಾನ್ಸಾಕ್ಷನ್ ಮಾಡುವಂತಹ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಪ್ರಿ Approved ಆಗಿರುವ ಕ್ರೆಡಿಟ್ ಲೈನ್ ಅನ್ನು ನೀಡುತ್ತದೆ. RBI ಗವರ್ನರ್ ಹೇಳಿರುವ ಪ್ರಕಾರ ಇಡೀ ಭಾರತ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ UPI ಟ್ರಾನ್ಜ್ಯಕ್ಶನ್ ಮೂಲಕವೇ ಹೆಚ್ಚಿನ ವ್ಯವಹಾರಗಳ ನಡೆಯುತ್ತಿವೆ. ಗವರ್ನರ್ ಇತ್ತೀಚಿಗಷ್ಟೇ ನಡೆಸಿರುವ ಎಂ ಪಿ ಸಿ ಸಭೆಯಲ್ಲಿ UPI ಗ್ರಾಹಕರಿಗೂ ಕೂಡ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ನೀಡುವಂತಹ ಅನುಮತಿಯನ್ನು ಅನುಷ್ಠಾನಗೊಳಿಸಲಾಗಿದೆ.
NPCI ಮೂಲಗಳ ಪ್ರಕಾರ ಸಿಕ್ಕಿರುವ ಆಧಾರದ ಮೇರೆಗೆ 8.7 ಬಿಲಿಯನ್ ಗಳಿಗೂ ಅಧಿಕ UPI ವ್ಯವಹಾರ ನಡೆಯುತ್ತಿದೆ. ಪ್ರತಿ ಬಾರಿ 60 ಪ್ರತಿಶತಕ್ಕೂ ಅಧಿಕ ಪ್ರಗತಿ ಇದರಲ್ಲಿ ಕಾಣುತ್ತಿದೆ. 12 ತಿಂಗಳ ಅಂಕಿ ಸಂಖ್ಯೆಗಳನ್ನು ಗಮನಿಸುವುದಾದರೆ ಪ್ರತಿದಿನ ಸರಾಸರಿ 36 ಕೋಟಿ ಅಧಿಕ ವ್ಯಾಪಾರ ವ್ಯವಹಾರಗಳು UPI ಮುಖಾಂತರ ನಡೆಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ UPI ವ್ಯವಹಾರಗಳು ಈ ವರ್ಷದ ಅದೇ ತಿಂಗಳಿಗೆ 50 ಪ್ರತಿಶತಕ್ಕೂ ಅಧಿಕ ಹೆಚ್ಚಳವಾಗಿರುವುದು ಡಿಜಿಟಲ್ ಟ್ರಾನ್ಸಾಕ್ಷನ್ ವಿಚಾರದಲ್ಲಿ ಭಾರತದ ಜನರು ಯಾವ ನಿರ್ಧಾರವನ್ನು ತೋರಿಸುತ್ತಿದ್ದಾರೆ ಎನ್ನುವುದಕ್ಕೆ ನೀಡಿರುವಂತಹ ಜೀವಂತ ಉದಾಹರಣೆಯಾಗಿದೆ ಎಂದರು ತಪ್ಪಾಗಲಾರದು.