ಮತ್ತೆ ಚಿನ್ನದ ದರ (Gold Rate) ಏರಿಕೆಯಾಗಿದ್ದು ಜಾಗತಿಕ, ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅದರಲ್ಲೂ ಹೂಡಿಕೆದಾರರಿಗೆ ಹೊಡೆತ ಬಿದ್ದಂತಾಗಿದೆ.
ಆರ್ಥಿಕತೆಯ ಮೇಲೆ ಪರಿಣಾಮ!
ಜಾಗತಿಕ ಆರ್ಥಿಕತೆ ಒಂದಲ್ಲ ಒಂದು ಕಾರಣಕ್ಕೆ ಏರಿಳಿತಗಳನ್ನು ಕಾಣುತ್ತಿದೆ. ಇಂದು ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಎದುರಿಸಬೇಕಾಗಿದೆ. ಆದರೆ ಇಂತಹ ಆರ್ಥಿಕ ಅಸಮತೋಲನದ ಪರಿಸ್ಥಿತಿಯಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆಯನ್ನು ಮಾಡಿ ಸುರಕ್ಷಿತ ಹೂಡಿಕೆಯ ಬಗ್ಗೆ ಹೆಚ್ಚು ಗಮನ ವಹಿಸುತ್ತಾರೆ. ಆದರೆ ಈಗ ಚಿನ್ನದ ಬೆಲೆ (Gold Rate) ಪ್ರತಿ ಗ್ರಾಂಗೆ 7,000ಗಳಿಗೆ ತಲುಪಿದ್ದು ಹೂಡಿಕೆದಾರರಿಗೆ ಹೂಡಿಕೆ ಮಾಡುವುದಕ್ಕೆ ಹೆಚ್ಚು ಬಾರಿ ಆಗುತ್ತಿದೆ.
ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಸೃಷ್ಟಿಯಾಗಿವೆ!
ಹೂಡಿಕೆದಾರರು ಚಿನ್ನವನ್ನು ಹೆಚ್ಚು ಆಶ್ರಯಿಸುತ್ತಿರುವುದರಿಂದ ಚಿನ್ನದ ಬೆಲೆ (Gold Rate) ದಿನದಿಂದ ದಿನಕ್ಕೆ ಏರುತ್ತಿದೆ ಅದರಲ್ಲೂ ಮಧ್ಯಪ್ರಾಚ್ಯ ದೇಶಗಳಲ್ಲಿ ಆರ್ಥಿಕ ಅನಿಶ್ಚಿತತೆ ಹೂಡಿಕೆದಾರರು ಹೆಚ್ಚು ಚಿನ್ನದ ಮೇಲೆ ಹೂಡಿಕೆ ಮಾಡುವಂತೆ ಮಾಡಿದೆ. ಅನಿಶ್ಚಿತತೆ ಹೆಚ್ಚಾಗುತ್ತಿದ್ದಂತೆ ಚಿನ್ನದ ಬೇಡಿಕೆಯು ಹೆಚ್ಚಾಗಿದೆ ಹಾಗಾಗಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.
ಹಬ್ಬದ ಕಾರಣಕ್ಕೆ ಬೆಲೆ ಏರಿಕೆ!
ನಮ್ಮ ದೇಶದಲ್ಲಿ ಈಗ ಸಾಲು ಸಾಲು ಹಬ್ಬಗಳು ಬರುತ್ತಿವೆ. ದಸರಾ, ದೀಪಾವಳಿ ಹಬ್ಬ ಇರುವುದರಿಂದ ಚಿನ್ನದ ಮೇಲಿನ ಬೇಡಿಕೆ ಹೆಚ್ಚಾಗಿದೆ ಹೆಂಗಳೆಯರು ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಗೆ ಮುಂದಾಗುತ್ತಾರೆ ಹೀಗಾಗಿ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಂಡಿದೆ.
ಸೆಂಟ್ರಲ್ ಬ್ಯಾಂಕ್ ನ ಚಿನ್ನ ಖರೀದಿ!
ಉದಯೋನ್ಮುಖ ಮಾರುಕಟ್ಟೆಯಲ್ಲಿ ಕೇಂದ್ರೀಯ ಬ್ಯಾಂಕ್ ನ ಚಿನ್ನದ ಮೇಲಿನ ಆಸಕ್ತಿಯು ಕೂಡ ಚಿನ್ನ ದ ಬೆಲೆ ಏರಿಕೆಯಾಗಲು ಕಾರಣವಾಗಿದೆ. ಸೆಂಟ್ರಲ್ ಬ್ಯಾಂಕ್ (Central Bank) ಚಿನ್ನವನ್ನು ವಿಶ್ವಾಸಾರ್ಹ ಆಸ್ತಿಯಾಗಿ ಪರಿಗಣಿಸಿದ್ದು ಚಿನ್ನದ ಬೇಡಿಕೆ ಮತ್ತು ಬೆಲೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಒಟ್ಟಾರೆಯಾಗಿ ಜಾಗತಿಕ ಅನಿಶ್ಚಿತ ಮಾರುಕಟ್ಟೆ, ಹಣದುಬ್ಬರ, ಚಿನ್ನದ ಮೇಲಿನ ಬೇಡಿಕೆ ಹೆಚ್ಚಾಗಿರುವುದು ಈ ಎಲ್ಲಾ ಕಾರಣಗಳಿಂದ ಚಿನ್ನದ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಇದರಿಂದಾಗಿ ಹೂಡಿಕೆದಾರರು ಮುಂದಿನ ದಿನಗಳಲ್ಲಿ ಚಿನ್ನ ಸ್ಥಿರತೆ ಕಾಯ್ದುಕೊಳ್ಳುವುದೋ ಅಥವಾ ಅನಿಶ್ಚಿತ ಪರಿಸ್ಥಿತಿ ಮುಂದುವರೆಯುವುದೋ ಎಂಬುದನ್ನು ಕಾದು ನೋಡಬೇಕಿದೆ.