ಟೀಂ ಇಂಡಿಯಾದ ಯಂಗ್ ಆ್ಯಂಡ್ ಸೆನ್ಸೇಶನ್ ಶುಭ್‌ಮನ್ ಗಿಲ್ (Shubman Gill) ಎಲ್ಲರ ನೆಚ್ಚಿನ ಆಟಗಾರ, ಕ್ರಿಕೆಟ್ ಹೊರತಾಗಿ ತಮ್ಮ ವೈಯಕ್ತಿಕ ಜೀವನದಲ್ಲೂ ಇವರು ಸುದ್ದಿಯಲ್ಲಿರುತ್ತಾರೆ. ಕ್ರಿಕೆಟ್ ಹೊರತಾಗಿ ಪ್ರೀತಿ, ಪ್ರೇಮ, ಡೆಟಿಂಗ್ ವಿಚಾರದಲ್ಲಿ ಈ ಯುವ ಕ್ರಿಕೆಟಿಗನ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸದಾ ಹರಿದಾಡುತ್ತಿರುತ್ತದೆ. ಇದೀಗಾ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika mandana) ವಿಚಾರವಾಗಿ ಸುದ್ದಿ ಯಾಗಿದ್ದಾರೆ. ಸದಾ ಒಂದಲ್ಲ ಒಂದು ಕಾರಣಕ್ಕೆ ರಶ್ಮೀಕಾ ಸುದ್ದಿಯಾಗುತ್ತಲೇ ಇರುತ್ತಾರೆ.
ಇತ್ತೀಚೆಗಂತೂ ಹಿಟ್ ಮತ್ತು ಫ್ಲಾಪ್ ಸಿನೆಮಾಗಳನ್ನು ನೀಡುತ್ತಲೇ ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳ ಗಮನವನ್ನು ಸೆಳೆಯುತ್ತಲಿದ್ದಾರೆ. ಎಷ್ಟೇ ಟ್ರೋಲ್ ಆದ್ರೂ ತಲೆಕೆಡಿಸಿಕೊಳ್ಳದೆ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ. ಸ್ಯಾಂಡಲ್‌ವುಡ್ ಸೇರಿದಂತೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲಾ ಸಿನಿರಂಗಗಳಲ್ಲೂ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸ್ಟಾರ್ ನಟರ ಸಿನೆಮಾಗಳಿಗೆ ರಶ್ಮಿಕಾರನ್ನೆ ಆಯ್ಕೆ ಮಾಡುತ್ತಿದ್ದಾರೆ ಎನ್ನಬಹುದು.
ಕ್ರಿಕೆಟಿಕ ಶುಭ ಮನ್ ಗಿಲ್ ರಶ್ಮೀಕಾ ನನ್ನ ಕ್ರಶ್ ಎಂದು ಹೇಳಿಕೊಂಡಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಕ್ಕೆ ಉತ್ತರ ನೀಡಿದ ಶುಭ ಮನ್ ಗಿಲ್, ನಾನು ಯಾವಾಗ ಈ ರೀತಿ ಹೇಳಿದ್ದೇನೆ, ನನಗೆ ಗೊತ್ತಿಲ್ಲ. ಎಲ್ಲಿಯೂ ನಾನು ಇದರ ಬಗ್ಗೆ ಮಾತಾಡಿಲ್ಲ ಅಂತ ಯೋಚನೆ ಮಾಡ್ತಿರುವ ಎಮೋಜಿ ಹಾಕಿ ಕಾಮೆಂಟ್ ಮಾಡಿದ್ದಾರೆ. ರಶ್ಮಿಕಾ ನನ್ನ ಕ್ರಶ್ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಕ್ರಶ್ ಅವಳಲ್ಲ. ಯಾವತ್ತೂ ನಾನು ಹೇಳಿಲ್ಲ, ಹೇಳುವುದೂ ಇಲ್ಲ. ಇದೊಂದು ಸುಳ್ಳು ವರದಿ ಎಂದು ಹೇಳಿಕೊಂಡಿದ್ದಾರೆ.
ಯುವ ಕ್ರಿಕೆಟಿಗ ಶುಭಮನ್ ಗಿಲ್ ರಶ್ಮಿಕಾಗೆ ಮದುವೆ ಪ್ರಪೋಸಲ್ ಕೂಡ ಮಾಡಿದ್ದಾರಂತೆ. ಈ ಸುದ್ದಿ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು, ಈಗ ರಶ್ಮಿಕಾ ಮಂದಣ್ಣ ನನ್ನ ಕ್ರಶ್ ಎಂದು ವೈರಲ್ ಆಗ್ತಿದೆ, ಆದರೆ ಇದು ಸುಳ್ಳು ಎಂದು ಸ್ವತಃ ಶುಭ್‌ಮನ್ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಗಿಲ್ ಜೊತೆ ಈ ಹಿಂದೆ ಸಚಿನ್ ತೆಂಡೂಲ್ಕರ್ (Sachin Tendulkar) ಪುತ್ರಿ ಸಾರಾ (Sara) ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಜೊತೆಗಿದ್ದ ಫೋಟೋಗಳು ಕೂಡ ಸಿಕ್ಕಿದ್ದವು, ಈ ಹಿಂದೆ ಶುಭಮನ್ ಗಿಲ್ ಫೀಲ್ಡಿಂಗ್ ಮಾಡುವ ವೇಳೆ ಅಭಿಮಾನಿಗಳು ಸಾರಾ-ಸಾರಾ ಎಂದು ಕೂಗಿದ್ದರು,ಆದರೆ ಗಿಲ್ ಅವರು ಈ ವಿಚಾರವಾಗಿ ಮೌನ ಮುರಿದಿದ್ದರು. ರಶ್ಮೀಕಾ ವಿಚಾರವಾಗಿ ಮಾತ್ರ ಉತ್ತರ ನೀಡಿದ್ದಾರೆ.