ರೈಲು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ಅತೀ ಉದ್ದದ ವಾಹನ ಎನ್ನಬಹುದು. ಇದು ದೂರ ಪ್ರಯಾಣಿಕರಿಗೆ ಕಡಿಮೆ ಖರ್ಚು ಮತ್ತು ಸಮಯ ಉಳಿಸುವ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಅನುಕೂಲವಾಗುವ ವಾಹನ ಎನ್ನಬಹುದು. ರೈಲಿನ ಪಯಣದಲ್ಲಿ ಒಬ್ಬರಿಗೆ ಒಂದೊಂದು ಅಭಿಪ್ರಾಯಿದ್ದು ಕೆಲವರು ತಮ್ಮ ಪ್ರಯಾಣ ಉದ್ದೇಶ ಇಡೇರಿಕೆಗೆ ಮಾತ್ರ ಹೋದರೆ ಇನ್ನು ಕೆಲವರು ರೈಲ್ವೇ ಪ್ರಯಾಣದ ಅನುಭವ ಪಡೆಯಲು ಹೋಗುತ್ತಾರೆ. ಇಂತಹ ಅನುಭವ ಪಡೆಯುವಾಗ ಕೆಲವೊಂದು ರೈಲ್ವೇಗಾಗಿಯೇ ಇರುವ ಸಂಗತಿಗಳು ಕಾಣ ಸಿಗುತ್ತದೆ ಅಂತಹದರಲ್ಲಿ ಒಂದಾಗಿ ರೈಲ್ವೇ ಕೊನೆಯ ಭೋಗಿಯಲ್ಲಿ ಕಂಡು ಬರುವ X ಚಿಹ್ನೆಯನ್ನು ನಾವು ಕಾಣಬಹುದು.

ಟ್ವಿಟ್ಟರ್ ನಲ್ಲಿ ವೈರಲ್ ಆದ ಮಾಹಿತಿ:
ಇತ್ತೀಚೆಗೆ ಈ ಬಗ್ಗೆ ರೈಲ್ವೇ ಇಲಾಖೆಗೂ ಪ್ರಶ್ನೆ ಎದುರಾಗಿದ್ದು ಈ X ಚಿಹ್ನೆ ಬಗ್ಗೆ ಮಾಹಿತಿ ನೀಡಿದೆ. ಈ ಮಾಹಿತಿ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಇದು ರೈಲಿನ ಕೊನೆಯ ಬೋಗಿಯಾಗಿದ್ದು, ಯಾವುದೇ ಕೋಚ್‌ಗಳನ್ನು ಬಿಡದೆ ರೈಲು ಹಾದುಹೋಗಿದೆ ಎಂದು ಈ ರೀತಿಯಾದ ಮಾಹಿತಿಯನ್ನು ಅದು ಸೂಚಿಸುತ್ತದೆ. ಮೊದಲು ರೈಲ್ವೇ ಇಲಾಖೆಯ ಪೋಸ್ಟರ್ ನಲ್ಲಿ ಡಿಡ್ ಯು ನೌ ಎಂದು (Did u know ?) ಎಂದು ತಿಳಿಸಲಾಗಿದ್ದು ಬಳಿಕ ಆ ಬಗ್ಗೆ ಮಾಹಿತಿಯನ್ನು ರೈಲ್ವೇ ಇಲಾಖೆಯ ಟ್ವಿಟ್ಟರ್ ಖಾತೆಯಲ್ಲಿ ನೀಡಲಾಗಿದೆ. ಈ ಮೂಲಕ ರೈಲ್ವೇ ಇಲಾಖೆಯೂ ಕೇವಲ ಪ್ರಯಾಣದ ಒಂದು ಕೇಂದ್ರವಾಗಿರದೇ ಜನರಿಗೂ ಹಾಗೂ ರೈಲ್ವೇ ಸಿಬಂದಿಗೂ ನೆರವಾಗಲೆಂದು ಈ x ಚಹ್ನೆ ಬಳಕೆಮಾಡಿದ್ದು ಕಾಣಬಹುದು.
ಇದೇ ರೀತಿ ರೈಲ್ವೇ ಇಲಾಖೆಯಲ್ಲಿ ರೈಲಿನ ಚೈನ್ ಎಳೆದ ಕೂಡಲೆ ರೈಲು ಯಾಕೆ ನಿಲ್ಲುತ್ತದೆ. ರೈಲಿನ ಸೀಟ್ ಯಾಕೆ ದ್ವಿಬದಿ ನಿರ್ಮಿತವಾಗಿದೆ ಇನ್ನು ಅನೇಕ ಬಗೆಯಾದ ಮಾಹಿತಿಯನ್ನು ರೈಲ್ವೇ ಇಲಾಖೆಯು ಆಗಾಗ ಟ್ವಿಟ್ಟರ್ ಪೋಸ್ಟ್ ನಲ್ಲಿ ನೀಡುತ್ತಲೇ ಇದ್ದು ಜನರಿಗೆ ಈ ಕುರಿತಾಗಿ ಅರಿವು ಮೂಡಿಸುತ್ತಾ ಇದೆ.