MLA Madal Virupakshappa: ಕಣ್ಮರೆಯಾಗಿದ್ದ ಶಾಸಕ ಮಡಾಳ ವಿರೂಪಾಕ್ಷಪ್ಪ ಪತ್ತೆ; ಹಣದ ಬಗ್ಗೆ ಹೇಳಿದ್ದೇ ಬೇರೆ

Advertisement
ಲೋಕಾಯುಕ್ತ ದಾಳಿಯ ಬಳಿಕ ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು (Bail) ಪಡೆದುಕೊಂಡಿದ್ದ ಶಾಸಕ ಮಡಾಳ ವಿರೂಪಾಕ್ಷ ಇದ್ದಕ್ಕಿದ್ದ ಹಾಗೆ ನಾಪತ್ತೆ ಆಗಿದ್ದರು. ಇದೀಗ ಸ್ವ ಗ್ರಾಮದಲ್ಲಿ ಮತ್ತೆ ಪ್ರತ್ಯಕ್ಷರಾಗಿದ್ದು ಎಲ್ಲರಿಗೂ ಶಾಕ್ ಆಗಿದೆ. ಅಷ್ಟೇ ಅಲ್ಲ ಲೋಕಾಯುಕ್ತ ದಾಳಿಯ ಸಮಯದಲ್ಲಿ ಸಿಕ್ಕ ಎಲ್ಲಾ ಹಣ ಆಸ್ತಿ ಮೊದಲಾದವುಗಳಿಗೆ ಸರಿಯಾದ ದಾಖಲೆ ಇದೆ ಎಲ್ಲವನ್ನು ನೀಡುತ್ತೇನೆ ಎಂದು ವಿರೂಪಾಕ್ಷಪ್ಪ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಡಾಳ್ ವಿರೂಪಾಕ್ಷಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದು ಮಾತ್ರವಲ್ಲದೆ ಪುತ್ರನ ಭ್ರಷ್ಟಾಚಾರ ಕೂಡ ಹೊರ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ಇದೀಗ ಹೈಕೋರ್ಟ್(High court) ನಿಂದ ಜಾಮೀನು ಪಡೆದುಕೊಂಡಿರುವ ಮಡಾಳ್ ವಿರೂಪಾಕ್ಷಪ್ಪ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ವಿರೂಪಾಕ್ಷಪ್ಪ ಗ್ರಾಮಕ್ಕೆ ಬರುತ್ತಿದ್ದಂತೆ ಅವರ ಬೆಂಬಲಿಗರು ಪೂರ್ಣ ಕುಂಭ ಸ್ವಾಗತ ಮಾಡಿದ್ದಾರೆ ಹೂವಿನ ಹಾರ ಹಾಕಿ ಮಡಾಳ್ ಪರವಾಗಿ ಘೋಷಣೆ ಕೂಗಿದ್ದಾರೆ.
Advertisement
ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಕಾರ್ಖಾನೆ ನಿಗಮಕ್ಕೆ ಟೆಂಡರ್ (Tender) ನೀಡುವ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಮಡಾಳ್ ಅವರ ಎರಡನೆಯ ಪುತ್ರ ಪ್ರಶಾಂತ್ ಮಡಾಳ್ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ನಂತರ ಲೋಕಾಯುಕ್ತರ ದಾಳಿಯನ್ನು ಅವರು ಎದುರಿಸಬೇಕಾಗಿತ್ತು. ಆದರೆ ಇದೆಲ್ಲದರಿಂದ ತಪ್ಪಿಸಿಕೊಳ್ಳಲು ಮಡಾಳ್ ವಿರೂಪಾಕ್ಷಪ್ಪ ಕಣ್ಮರೆ ಆಗಿದ್ದರು.
ಇದೀಗ ದಿಢೀರ್ ಅಂತ ಪ್ರತ್ಯಕ್ಷ ಆಗಿರುವ ಮಾಡಾಳ್ ವಿರೂಪಾಕ್ಷಪ್ಪ, ಲೋಕಾಯುಕ್ತ ದಾಳಿಯಲ್ಲಿ ಸಿಕ್ಕ ಪ್ರತಿಯೊಂದು ಹಣಕ್ಕೂ ದಾಖಲೆ ಇದೆ ಅದೆಲ್ಲವನ್ನು ನೀಡಿ ಹಣವನ್ನು ವಾಪಸ್ ಪಡೆಯುತ್ತೇನೆ ಎಂದಿದ್ದಾರೆ ಜೊತೆಗೆ ಅಡಿಕೆ ತೋಟ ಕ್ರಶರ್ (Crusher) ನಿಂದ ಬಂದು ಹಣವನ್ನು ಮನೆಯಲ್ಲಿ ಇಟ್ಟಿದ್ದೇವು.
ಆ ಹಣವನ್ನ ಲೋಕಾಯುಕ್ತ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಅದನ್ನ ದಾಖಲೆ ನೀಡಿ ಮತ್ತೆ ಪಡೆದುಕೊಳ್ಳುತ್ತೇನೆ. ಕೆಎಲ್‌ಡಿಎಲ್ (KLDL) ಅಧ್ಯಕ್ಷನಾಗಿ ಕಾನೂನುಬಾಹಿರ ಕೆಲಸ ಮಾಡಿಲ್ಲ ನನ್ನ ಪಕ್ಷ ತಾಯಿ ಇದ್ದಂತೆ ಅದಕ್ಕೆ ಮೋಸ ಮಾಡಿಲ್ಲ ಎಂದು ವಿರೂಪಾಕ್ಷಪ್ಪ ಹೇಳಿದ್ದಾರೆ. ಅಲ್ಲದೆ ಇನ್ನು 48 ಗಂಟೆಯೊಳಗೆ ತನಿಕಾ ಅಧಿಕಾರಿ ಮುಂದೆ ಹಾಜರಾಗುತ್ತೇನೆ ಎಂದು ಶಾಸಕ ವಿರೂಪಾಕ್ಷಪ್ಪ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಿಷ್ಪಕ್ಷಪಾತ ತನಿಖೆ ಮಾಡುವುದಾಗಿ ಹೇಳಿದ್ದಾರೆ ಇನ್ನು 48 ಗಂಟೆಯ ಒಳಗೆ ತನಿಕಾ ಅಧಿಕಾರಿ ಮುಂದೆ ಹಾಜರಾಗುತ್ತೇನೆ ಎಂದು ಚೆನ್ನಕೇಶಪುರದಲ್ಲಿ ಮಡಾಳ್ ವಿರೂಪಾಕ್ಷಪ್ಪ ತಿಳಿಸಿದ್ದಾರೆ.
Advertisement