ತನ್ನ ಗ್ರಾಹಕರಿಗೆ ಸಾಕಷ್ಟು ವಿವಿಧ ರೀತಿಯ ಪ್ರಯೋಜನಕಾರಿ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದೀಗ ಚೆಕ್ ವಹಿವಾಟಿನ ನಿಯಮಗಳಲ್ಲಿ ಕೆಲವು ತಿದ್ದುಪಡಿ ಮಾಡಿದೆ. ಪಿಎನ್ ಬಿ ಬ್ಯಾಂಕ್ ನಲ್ಲಿ ಆಗಿರುವ ಈ ನಿಯಮಗಳ ತಿದ್ದುಪಡಿ ಏಪ್ರಿಲ್ 5 2023 ರಂದು ಜಾರಿಗೆ ಬರಲಿದೆ.
ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಚೆಕ್ ವಹಿವಾಟಿನ ನಿಯಮಗಳಲ್ಲಿ ಆಗಿರುವ ಬದಲಾವಣೆಗಳೇನು ಎಂದು ನೋಡುವುದಾದರೆ 5 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್, ಪಾವತಿ ಮಾಡುವುದಾದರೆ ಅದಕ್ಕೆ ಸಂಬಂಧಪಟ್ಟ ಹಾಗೆ ತಿದ್ದುಪಡಿ ಮಾಡಲಾಗಿದ್ದು ಬ್ಯಾಂಕ್ ಇದನ್ನು ಗ್ರಾಃಅಕರ ಗಮನಕ್ಕೆ ತಂದಿದೆ. ಈ ಮೊತ್ತಕ್ಕಿಂತ ಹೆಚ್ಚಿನ ಹಣ ಪಾವತಿ ಮಾಡಿದರೆ ಬ್ಯಾಂಕ್ ಧನಾತ್ಮಕ ಪಾವತಿ ವ್ಯವಸ್ಥೆ (Positive Pay System) ಕಡ್ಡಾಯವಾಗಿ ಪಾಲಿಸಬೇಕು. ಚೆಕ್ ವಹಿವಾಟಿನ ಮೂಲಕ ಆಗುವ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಬ್ಯಾಂಕ್ ಈ ತಿದ್ದುಪಡಿಯನ್ನು ತಂದಿದೆ.
ಪಾಸಿಟಿವ್ ಪೇ ಸಿಸ್ಟಮ್ ಜಾರಿ!
10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾತ್ರ ಪಾಸಿಟಿವ್ ಸಿಸ್ಟಮ್ ಅನ್ನು ಕಡ್ಡಾಯಗೊಳಿಸಲಾಗಿತ್ತು. ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಚೆಕ್ ಗಳ ಮೂಲಕ ವಿತರಿಸಿದಾಗ ಖಾತೆಯ ಸಂಖ್ಯೆ, ಚೆಕ್ ನಂಬರ್, ಚೆಕ್ ಆಲ್ಫಾ ಕೋಡ್, ವಿತರಣಾ ದಿನಾಂಕ ಚೆಕ್ ವಿತರಿಸಿದವರ ಹೆಸರು ಮೊದಲಾದ ಅಗತ್ಯ ವಿವರಗಳನ್ನು ಬ್ಯಾಂಕ್ ಗ್ರಾಹಕರ ಬಳಿ ಮರು ಪರಿಶೀಲಿಸುವಂತೆ ಕೇಳುತ್ತದೆ. ಈ ರೀತಿ ಮಾಡಿದಾಗ ಚೆಕ್ ವಹಿವಾಟಿನಲ್ಲಿ ಆಗುವ ಯಾವುದೇ ಅಪಾಯದ ಸಂಗತಿಯನ್ನು ತಡೆಯಬಹುದು.
ಗ್ರಾಹಕರು, ಬ್ಯಾಂಕ್ ಕಚೇರಿ ಆನ್ಲೈನ್ ಬ್ಯಾಂಕಿಂಗ್ ಮೊಬೈಲ್ ಬ್ಯಾಂಕಿಂಗ್ ಅಥವಾ ಎಸ್ಎಂಎಸ್ ಬ್ಯಾಂಕಿಂಗ್ ಮೂಲಕ ಚೆಕ್ ವಿವರಗಳನ್ನು ಒದಗಿಸಬೇಕು. ಇದನ್ನೇ ಪಾಸಿಟಿವ್ ಪೇ ಸೌಲಭ್ಯ ಎಂದು ಹೇಳಲಾಗುತ್ತದೆ. ಇತ್ತೀಚಿಗೆ ಚೆಕ್ ವಹಿವಾಟಿನಲ್ಲಿ ವಂಚನೆ ಹೆಚ್ಚಾಗಿ ದಾಖಲಾಗುತ್ತಿದ್ದು ಇದನ್ನು ತಡೆಗಟ್ಟುವ ಸಲುವಾಗಿ ಬ್ಯಾಂಕ್ ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಈ ಹೊಸ ತಿದ್ದುಪಡಿಯನ್ನ ತಂದಿದೆ. ಸಕಾರಾತ್ಮಕ ಪಾವತಿ ವ್ಯವಸ್ಥೆಯಿಂದ ಗ್ರಾಹಕರು ಕೂಡ ಯಾವುದೇ ತೊಂದರೆ ಇಲ್ಲದೆ ತಮ್ಮ ಬ್ಯಾಂಕ್ ವ್ಯವಹಾರ ಮಾಡಬಹುದು.