Travel Tips: ಬಸ್ ನಲ್ಲಿ ದೂರ ಸಂಚರಿಸುವವರು ಈ ಮಾತ್ರೆ ತಗೆದುಕೊಂಡರೆ ವಾಂತಿಯಾಗಲ್ಲ, ಇಲ್ಲಿದೆ ಡಿಟೇಲ್ಸ್
ನಿಮಗೆ ಪ್ರಯಾಣ ಮಾಡುವಾಗ ವಾಂತಿ ಸಮಸ್ಯೆ ಇದೆಯಾ ಹಾಗಾದ್ರೆ ಈ ಒಂದು ಟ್ಯಾಬ್ಲೆಟ್ ತಗೊಳ್ಳಿ ಸಾಕು ಆರಾಮಾಗಿ ಪ್ರಯಾಣ ಮಾಡಬಹುದು.
ದೂರದ ಪ್ರಯಾಣ ಅಂದರೆ ಸಾಕಷ್ಟು ಜನರಿಗೆ ಇಷ್ಟ. ಆದರೆ ಆ ಸಮಯದಲ್ಲಿ ಉಂಟಾಗುವ ಮೋಷನ್ ಸಿಕ್ನೆಸ್ ಸಮಸ್ಯೆ ಪ್ರಯಾಣವೇ ಬೇಡ ಎನಿಸಿಬಿಡುತ್ತದೆ. ಸಾಕಷ್ಟು ಜನ ದೂರದ ಪ್ರಯಾಣ ಮಾಡುವಾಗ ಕಾರಿನಲ್ಲಿ ಅಥವಾ ಬಸ್ ಗಳಲ್ಲಿ ಪ್ರಯಾಣಿಸುವಾಗ ವಾಂತಿಯಾಗುವ ಸಮಸ್ಯೆಯನ್ನು ಅನುಭವಿಸುತ್ತಾರೆ. ಇದು ಪ್ರಯಾಣದ ಉದ್ದಕ್ಕೂ ನಮ್ಮಲ್ಲಿ ಅನಾರೋಗ್ಯವನ್ನು ಉಂಟು ಮಾಡಿರುತ್ತದೆ. ಕೆಲವರು ವಾಂತಿ ಮಾಡಿಕೊಳ್ಳುತ್ತಾರೆ ಇನ್ನು ಕೆಲವರು ವಾಂತಿ ಆಗದೆ ಇದ್ದರೂ ಹೊಟ್ಟೆ ತೊಳೆಸುವುದು ಹೊಟ್ಟೆಯಲ್ಲಿ ಕಿರಿಕಿರಿ ಆಗುವುದು, ತಲೆನೋವು, ಸುಸ್ತು ಎಲ್ಲವನ್ನು ಅನುಭವಿಸುತ್ತಾರೆ.
ಪ್ರಯಾಣದ ವೇಳೆ ವಾಂತಿ ಆದರೆ ಅಥವಾ ತಲೆ ತಿರುಗಿದಂತೆ ಆದರೆ ಇದನ್ನು ಮೋಷನ್ ಸಿಕ್ನೆಸ್ ಎಂದು ಕರೆಯಲಾಗುತ್ತದೆ. ಇದು ಮಕ್ಕಳಲ್ಲಿಯೂ ಕೂಡ ಕಾಣಿಸುವಂತಹ ಒಂದು ಸಮಸ್ಯೆ ನಾವು ಹೇಗೆ ಪ್ರಯಾಣ ಮಾಡುವಾಗ ವಾಂತಿ ಮಾಡಿಕೊಳ್ಳುತ್ತಿದ್ದರೆ ಅಥವಾ ಸುಸ್ತಾಗಿ ಮಲಗಿದರೆ ಇತರರಿಗೂ ಕೂಡ ಇದು ಕಿರಿಕಿರಿ ಎನಿಸುತ್ತದೆ ಹಾಗಾಗಿ ಈ ಸಮಸ್ಯೆಯಿಂದ ದೂರ ಉಳಿದು ನಿಮ್ಮ ಪ್ರಯಾಣವನ್ನು ಸುಖಕರವಾಗಿಸಿಕೊಳ್ಳಬೇಕು ಅಂದರೆ ವೈದ್ಯರು ಈ ಒಂದು ಮಾತ್ರೆಯನ್ನು ಸೂಚಿಸುತ್ತಾರೆ. Cinnarizine (Stugeron) ಈ ಮಾತ್ರೆಯನ್ನು ಪ್ರಯಾಣಕ್ಕೂ ಮುನ್ನ ತೆಗೆದುಕೊಂಡರೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ವೈದ್ಯರು ತಿಳಿಸುತ್ತಾರೆ. ಅದೇ ರೀತಿಯಾಗಿ ಪೆರಿನಾರ್ಮ್ (Perinorm) ಎನ್ನುವ ಟ್ಯಾಬ್ಲೆಟ್ ಕೂಡ ವಾಂತಿ ಆಗುವ ಸಮಸ್ಯೆಯನ್ನು ನಿಲ್ಲಿಸಬಹುದು. ಈ ಎರಡು ವೈದ್ಯರು ಸೂಚಿಸಿದ ಮಾತ್ರೆಗಳಲ್ಲಿ ಯಾವುದಾದರು ಒಂದನ್ನು ತೆಗೆದುಕೊಳ್ಳಬಹುದು.
ನೀವು ಪ್ರಯಾಣದ ವೇಳೆ ಕಿಟಕಿ ತೆರೆದು ಹೊರಗೆ ನೋಡುವುದು ಅಥವಾ ಕಣ್ಮುಚ್ಚಿ ಕುಳಿತುಕೊಳ್ಳುವುದು ಈ ರೀತಿ ಮಾಡಿದರು ವಾಂತಿಯ ಸಮಸ್ಯೆ ಕಡಿಮೆ ಆಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ. ಇನ್ನು ನಾವು ಇಲ್ಲಿ ಸೂಚಿಸಿರುವ ಮಾತ್ರೆ ವೈದ್ಯರು ಹೇಳಿರುವುದೇ ಆಗಿದ್ದರೂ ಕೂಡ ಇದನ್ನು ತೆಗೆದುಕೊಳ್ಳುವುದಕ್ಕೂ ಮೊದಲು ನಿಮ್ಮ ಕುಟುಂಬದ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ ಯಾವುದೇ ವೈದ್ಯರ ಸಲಹೆ ಪಡೆದುಕೊಳ್ಳದೆ ನೇರವಾಗಿ ಈ ಮಾತ್ರೆಯನ್ನು ತೆಗೆದುಕೊಳ್ಳಬೇಡಿ.