ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ರಾಷ್ಟ್ರಪತಿ ಭವನದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪದ್ಮಭೂಷಣ ಪ್ರಶಸ್ತಿ ಸಮಾರಂಭ ಅದ್ದೂರಿಯಾಗಿ ನಡೆದಿತ್ತು. ಈ ಸಂದರ್ಭದಲ್ಲಿ ಯುಕೆ ಅಂದರೆ ಯುನೈಟೆಡ್ ಕಿಂಗ್ಡಂ(United Kingdom) ನ ಪ್ರಧಾನ ಮಂತ್ರಿ ಆಗಿರುವಂತಹ ರಿಷಿ ಸುನಕ್(Rishi Sunak) ಅವರ ಪತ್ನಿಯಾಗಿರುವ ಅಕ್ಷತಾ ಮೂರ್ತಿ ಅವರು ಕೂಡ ಆಗಮಿಸಿದ್ದರು. ಒಂದು ದೇಶದ ಪ್ರಧಾನಮಂತ್ರಿಯ ಪತ್ನಿಯಾಗಿದ್ದರೂ ಕೂಡ ಇವರು ಈ ಕಾರ್ಯಕ್ರಮದಲ್ಲಿ ಯಾಕೆ ಆಗಮಿಸಿದ್ದರು ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.
ನಮ್ಮ ಕರ್ನಾಟಕದ ಹೆಮ್ಮೆಯ ಮಹಿಳೆಯಾಗಿರುವಂತಹ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಸುಧಾ ಮೂರ್ತಿ(Sudha Murthy) ಅಮ್ಮನವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಧಾನ ಆಗುತ್ತಿದ್ದ ಸಂದರ್ಭದಲ್ಲಿ ಅವರ ಮಗಳಾಗಿರುವ ಹಾಗೂ ಯುಕೆ ದೇಶದ ಪ್ರಧಾನಮಂತ್ರಿಯ ಪತ್ನಿಯಾಗಿರುವ ಅಕ್ಷತಾ ಮೂರ್ತಿ ಅವರು ಕೂಡ ಯಾವುದೇ ಆಹ್ವಾನ ಇಲ್ಲದಿದ್ದರೂ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ತಮ್ಮ ತಾಯಿಗೆ ಸಿಗುತ್ತಿರುವಂತಹ ಈ ಗೌರವವನ್ನು ನಮ್ಮ ಕಣ್ಣಾರೆ ನೋಡುವಂತಹ ಆಸೆಯಿಂದ ಅವರು ತಮ್ಮ ಕುಟುಂಬದ ಜೊತೆಗೂಡಿ ಆಗಮಿಸಿದ್ದರು. ಕಾರ್ಯಕ್ರಮ ಪ್ರಾರಂಭವಾಗುವ ಮುನ್ನ ತಮ್ಮ ಕುಟುಂಬದವರ ಜೊತೆಗೆ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಅಕ್ಷತಾ ಮೂರ್ತಿ(Akshatha Murthy)ಯವರು ಸಡನ್ ಆಗಿ ಕಾರ್ಯಕ್ರಮದ ಮುಂದಿನ ಸಾಲಿನಲ್ಲಿ ಅಂದರೆ ವಿದೇಶಾಂಗ ಸಚಿವ ಆಗಿರುವಂತಹ ಜೈ ಶಂಕರ್(Jai Shankar) ಅವರ ಪಕ್ಕದಲ್ಲಿ ಬಂದು ಕುಳಿತುಕೊಳ್ಳುತ್ತಾರೆ.
ಒಂದು ಲೆಕ್ಕದಲ್ಲಿ ಹೇಳುವುದಾದರೆ ಅಕ್ಷತಾ ಮೂರ್ತಿ(Akshatha Murthy) ಅವರು ಯುಕೆ ದೇಶದ ಪ್ರಥಮ ಮಹಿಳೆಯಾಗಿರುತ್ತಾರೆ. ಹೀಗಾಗಿ ಪ್ರೋಟೋಕಾಲ್ ಪ್ರಕಾರ ಅವರನ್ನು ಯುಕೆ ದೇಶದ ಪ್ರಧಾನಮಂತ್ರಿಯ ಪತ್ನಿ ಆಗಿರುವ ಹಿನ್ನೆಲೆಯಲ್ಲಿ ಮೊದಲ ಸಾಲಿನಲ್ಲಿ ಕುಳ್ಳಿರಿಸಲಾಗುತ್ತದೆ. ಆದರೆ ಇಲ್ಲಿ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ಪ್ರಮುಖ ವಿಚಾರೇನೆಂದರೆ ಅಕ್ಷತಾ ಮೂರ್ತಿಯವರು ಯಾವುದೇ ಸೆಕ್ಯೂರಿಟಿ ಅಥವಾ ಯುಕೆ ದೇಶದ ರಾಜತಾಂತ್ರಿಕ ಪ್ರತಿನಿಧಿಗಳೊಂದಿಗೆ ಬಂದಿರಲಿಲ್ಲ. ಒಬ್ಬ ಮಗಳಾಗಿ ತನ್ನ ತಾಯಿಗೆ ಸಿಗುತ್ತಿರುವಂತಹ ಗೌರವವನ್ನು ನೋಡಲು ಸಾಮಾನ್ಯ ಪ್ರಜೆಯಾಗಿ ಬಂದಿದ್ದರು.