ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಸಾಕಷ್ಟು ಗ್ರಾಹಕರನ್ನು ಹೊಂದಿದ್ದು ದಿನದಿಂದ ದಿನಕ್ಕೆ ಉತ್ತಮ ಗ್ರಾಹಕ ಸೇವೆಯನ್ನು ಕೂಡ ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಸಂಖ್ಯೆಯು ಜಾಸ್ತಿ ಆಗುತ್ತಿದೆ. ಎಸ್ ಬಿ ಐ 1.9 ಕೋಟಿ ಕ್ರೆಡಿಟ್ ಕಾರ್ಡ್ (Credit Card) ಬಳಕೆದಾರರನ್ನು ಹೊಂದಿದೆ. ಅತಿ ಹೆಚ್ಚು ಕ್ರೆಡಿಟ್ ಕಾರ್ಡ್ ಗ್ರಾಹಕರನ್ನು ಹೊಂದಿರುವ SBI ತನ್ನ ಯಾವುದೇ ಬೆಲೆಯಲ್ಲಿ ವ್ಯತ್ಯಾಸ ಮಾಡಿದರೆ ಅದು ಲಕ್ಷಾಂತರ ಬಡಕೆದಾರರ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಇದೀಗ ಕ್ರೆಡಿಟ್ ಕಾರ್ಡ್ ಶುಲ್ಕಕ್ಕೆ ಸಂಬಂಧಪಟ್ಟ ಹಾಗೆ ಎಸ್ಬಿಐ ಹೊಸ ಮಾಹಿತಿ ಒಂದನ್ನು ನೀಡಿದೆ.
SBI ತನ್ನ ಗ್ರಾಹಕರಿಗೆ ಈ ಮೇಲ್ ಕಳಿಸುವುದರ ಮೂಲಕ ನವೀಕೃತ ನಿಯಮದ ಬಗ್ಗೆ ತಿಳಿಸಿದೆ. ಕ್ರೆಡಿಟ್ ಕಾರ್ಡ್ (Credit Card) ಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ತಿಳಿಸಲು ನಾವು ಈ ಸಂದೇಶ ಕಳುಹಿಸುತ್ತಿದ್ದೇವೆ ಎಂದು ಬ್ಯಾಂಕ್ ಹೇಳಿಕೊಂಡಿದೆ.
ಎಸ್ ಬಿ ಐ ಕಾರ್ಡ್ ಗಳು ನವೆಂಬರ್ 1 2024 ರಿಂದ, ಎಲ್ಲಾ ಅಸುರಕ್ಷಿತ ಎಸ್ಬಿಐ ಕಾರ್ಡ್ ಗಳಲ್ಲಿ ವಹಿವಾಟು ಶುಲ್ಕವನ್ನು 3.75% ಗೆ ಪರಿಷ್ಕರಿಸಲಾಗುವುದು ಎಂದು ಹೇಳಿದೆ. ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಯುಟಿಲಿಟಿ ಬಿಲ್ ಪಾವತಿಸಿದರೆ ಅದರ ಮೇಲಿನ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಈ ಹೊಸ ನಿಯಮ ಡಿಸೆಂಬರ್ 1, 2024 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.
ಅಂದರೆ ಯುಟಿಲಿಟಿ ಪಾವತಿ ಮೊತ್ತ 50,000 ಮೀರಿದರೆ ಪಾವತಿಯ ಒಟ್ಟು ಮೊತ್ತದ ಮೇಲೆ ಶೇಕಡ 1% ನಷ್ಟು ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ ಎಂದು ಎಸ್ ಬಿ ಐ ತಿಳಿಸಿದೆ.
ಎಸ್ ಬಿ ಐ ಇತ್ತೀಚಿಗೆ ಕೋ ಬ್ರಾಂಡೆಡ್ ವಿಸ್ತಾರ ಕಾರ್ಡ್ (Vistara Card) ಅನ್ನು ಸ್ಥಗಿತಗೊಳಿಸಿದೆ. ಎಫ್ ಡಿ ಅಥವಾ ಇತರ ಯಾವುದೇ ಹೂಡಿಕೆಗೆ ಕ್ರೆಡಿಟ್ ಸ್ಕೋರ್ (Credit Score) ಪರವಾಗಿ ಕ್ರೆಡಿಟ್ ಕಾರ್ಡ್ ಅನ್ನು ನೀಡಿದರೆ ಅದನ್ನು ಅಸುರಕ್ಷಿತ ಕ್ರೆಡಿಟ್ ಕಾರ್ಡ್ ಎಂದು ಪರಿಗಣಿಸಲಾಗುತ್ತದೆ.