Karnataka Times
Trending Stories, Viral News, Gossips & Everything in Kannada

Govt Documents: ವಾಟ್ಸಾಪ್ ನಲ್ಲಿಯೇ ಡೌನ್ ಲೋಡ್ ಮಾಡಿಕೊಳ್ಳಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಇಲ್ಲಿದೆ ವಿಧಾನ

Advertisement

ಸಾಮಾನ್ಯವಾಗಿ ಇಂದು ಸ್ಮಾರ್ಟ್ ಫೋನ್ ಇರುವವರು ವಾಟ್ಸಾಪ್ ಬಳಸದೆ ಇರೋದಕ್ಕೆ ಸಾಧ್ಯವೇ ಇಲ್ಲ. ಪ್ರತಿಯೊಬ್ಬರೂ WhatsApp ಬಳಸುತ್ತಾರೆ. ಗ್ರಾಹಕರ ಅನುಕೂಲಕ್ಕೆ ತಕ್ಕ ಹಾಗೆ ವಾಟ್ಸಪ್ ನಲ್ಲಿ ಹಲವಾರು ಹೊಸ ಹೊಸ ಫೀಚರ್ ಗಳು ಕೂಡ ಪರಿಚಯಿಸಲಾಗುತ್ತಿದೆ. ವಾಟ್ಸಪ್ ನಲ್ಲಿ ಈಗಾಗಲೇ ಹಣದ ವ್ಯವಹಾರ ಕೂಡ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಕೇವಲ Calls, Message ಮಾಡುವುದು ಮಾತ್ರವಲ್ಲ ಇನ್ನು ಮುಂದೆ ನೀವು Aadhaar Card, Pan Card ಮೊದಲ ದಾಖಲೆಗಳನ್ನು ಕೂಡ ಡೌನ್ಲೋಡ್ ಮಾಡಿಕೊಳ್ಳ ಬಹುದು.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಭಾರತೀಯ ಆನ್ಲೈನ್ ಡಿಜಿಟಲೀಕರಣಕ್ಕಾಗಿ DigiLocker ಸಿಸ್ಟಮ್ ಅನ್ನು ಈಗಾಗಲೇ ಪರಿಚಯಿಸಿದೆ. ಹಾಗಾಗಿ ಕುಳಿತಲ್ಲಿಯೇ ನಮಗೆ ಬೇಕಾಗಿರುವ ಯಾವುದೇ ದಾಖಲೆಯನ್ನು ಅಥವಾ ಯಾವುದೇ ಸೇವೆಯನ್ನು ಡಿಜಿಟಲ್ ಆಗಿಯೇ ಪಡೆದುಕೊಳ್ಳಬಹುದು.

ಚಾಲುನಾ ಪರವಾನಿಗೆ, ವಾಹನ ನೋಂದಣಿ, ಶೈಕ್ಷಣಿಕ ಮಾರ್ಕ್ ಶೀಟ್ ಮೊದಲಾದ ಅಧಿಕೃತ ದಾಖಲೆಗಳು ಅಥವಾ ಪ್ರಮಾಣ ಪತ್ರಗಳನ್ನು ಡಿಜಿಟಲೀಕರಣ ಬಳಕೆದಾರರು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ ಮೈ ಗೌರ್ಮೆಂಟ್ ಹೆಲ್ಪ್ ಡೆಸ್ಕ್ ವಾಟ್ಸಪ್ ಚಾಟ್ ಬೂಟ್ (MyGov Helpdesk WhatsApp chatbot) ಮೂಲಕ ಸುಲಭವಾಗಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಮೊದಲದ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

‘MyGov Helpdesk WhatsApp chatbot’ ನಲ್ಲಿ Aadhaar Card, Pan Card ಚಾಲನಾ ಪರವಾನಿಗೆ ವಿದ್ಯಾರ್ಥಿಗಳ ಮಾರ್ಕಶೀಟ್ ಮೊದಲ ದಾಖಲೆಗಳು ಸುಲಭವಾಗಿ ಸಿಗುತ್ತವೆ ಹಾಗಾಗಿ ವಾಟ್ಸಪ್ ಮೂಲಕವೇ ಈ ಎಲ್ಲಾ ದಾಖಲೆಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

‘My gov what’s app chatbot’ ನಲ್ಲಿ ದಾಖಲೆಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ ಗೊತ್ತೇ?

Advertisement

Step 1. ಮೊದಲಿಗೆ MyGov Helpdesk ನ ಕಾಂಟೆಕ್ಟ್ ನಂ. (+91-9013151515) ನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಿ. ನಂತರ ವಾಟ್ಸಾಪ್ ಮೂಲಕ ‘ನಮಸ್ತೆ’ ಎಂದು ಮೆಸೆಜ್ ಮಾಡಿ.

Step 2. ಈ ಚಾಟ್ ಬಾಟ್ ಡಿಜಿಲಾಕರ್ ಅಥವಾ ಕೋವಿನ್ ಎರಡು ಆಯ್ಕೆಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಸಂದೇಶ ಕಳುಹಿಸುತ್ತದೆ. ಅದರಲ್ಲಿ ನಿಮ್ಮ ದಾಖಲೆಗಳನ್ನು ಪಡೆಯಲು ‘ಡಿಜಿಲಾಕರ್ ಸೇವೆಗಳು’ ಆಯ್ಕೆ ಮಾಡಿಕೊಳ್ಳಿ.

Step 3. ಡಿಜಿಲಾಕರ್ ಖಾತೆಯನ್ನು ಹೊಂದಿದ್ದೀರಾ ಎನ್ನುವ ಪ್ರಶ್ನೆ ಕೇಳಲಾಗುತ್ತದೆ ಅದಕ್ಕೆ ಯೆಸ್ ಎಂಬ ಆಯ್ಕೆಯನ್ನು ಮಾಡಿ. ನೀವು ಖಾತೆ ಹೊಂದಿಲ್ಲದಿದ್ದರೆ, ಸರ್ಕಾರದ ಅಧಿಕೃತ ವೆಬ್‌ಸೈಟ್ ಅಥವಾ ಡಿಜಿಲಾಕರ್ ಅಪ್ಲಿಕೇಶನ್‌ಗೆ ಗೆ ಹೋಗಿ ಅಲ್ಲಿ ನಿಮ್ಮ ಖಾತೆಯನ್ನು ತೆರೆಯಬೇಕು.

Step 4. ಬಳಿಕ ಚಾಟ್‌ಬಾಟ್ ನಲ್ಲಿ ಡಿಜಿಲಾಕರ್ ಖಾತೆಯನ್ನು ಲಿಂಕ್ ಮಾಡಲು ಮತ್ತು ದೃಢೀಕರಿಸಲು ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ನಿಮಗೆ ಒಂದು OTP ಕಳುಹಿಸಲಾಗುತ್ತದೆ. ಅದನ್ನು ಚಾಟ್‌ಬಾಟ್‌ನಲ್ಲಿ ಹಾಕಿ.

Step 5. ನಿಮ್ಮ ಒಟಿಪಿ ಸರಿಯಾಗಿ ನಮೂದಿಸಲ್ಪಟ್ಟಿದ್ದರೆ ನಿಮ್ಮ ಡಿಜಿಲಾಕರ್ ಖಾತೆಗೆ ಲಿಂಕ್ ಮಾಡಲಾದ ಎಲ್ಲಾ ದಾಖಲೆಗಳನ್ನು ತೋರಿಸುತ್ತದೆ. ಡಾಕ್ಯುಮೆಂಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಪಟ್ಟಿ ಮಾಡಲಾದ ಸಂಖ್ಯೆಯನ್ನು ಟೈಪ್ ಮಾಡಿ. ಬಳಿಕ ನಿಮಗೆ ಅಗತ್ಯವಾದ ದಾಖಲೆಗಳನ್ನು PDF ರೂಪದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಆದರೆ ನೆನಪಿಡಿ ಏಕಕಾಲಕ್ಕೆ ನೀವು ಒಂದೇ ಒಂದು ದಾಖಲೆಯನ್ನು ಮಾತ್ರ ಡೌನ್ ಲೋಡ್ ಮಾಡಿಕೊಳ್ಳಬಹುದು. ನೀವು ಡಿಜಿಲಾಕರ್ ನಲ್ಲಿ ಸೇವ್ ಮಾಡಿದ ದಾಖಲೆಗಳನ್ನು ಮಾತ್ರ ಡೌನ್‌ಲೋಡ್ ಮಾಡಬಹುದು. ಡಿಜಿಲಾಕರ್ ನಲ್ಲಿ ದಾಖಲೆಗಳು ಇದ್ದರೆ ನೀವು ಯಾವುದೇ ಸಮಯದಲ್ಲಿ ವಾಟ್ಸಾಪ್ ಚಾಟ್‌ಬಾಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯ.

Advertisement

Leave A Reply

Your email address will not be published.