ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಕಳೆದ ಹದಿನೈದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬಂದಿತ್ತು. ಆದರೆ ಮಂಗಳವಾರ ದರ ಸ್ಥಿರವಾಗಿದ್ದು ಚಿನ್ನದ ಬೆಲೆ 10ಗ್ರಾಂ ಗೆ 56,000ರೂಪಾಯಿಗಳು ಆಗಿದ್ದವು. ಇಂದು ಈ ದರದಲ್ಲಿ ಇನ್ನಷ್ಟು ಇಳಿಕೆ ಕಂಡುಬಂದಿದೆ.
ಬಂಗಾರದ ದರದಲ್ಲಿ ಗುರುವಾರ ಅಂದರೆ ಇವತ್ತಿನ ಬೆಲೆ ಎಷ್ಟಿದೆ ನೋಡೋಣ.
ಇಂದು ಚಿನ್ನದ ದರ 720 ರೂ. ಇಳಿಕೆಕಂಡಿದೆ. ಇದು 24 ಕ್ಯಾರಟ್‌ನ (24 carat) ಬೆಲೆ ಆಗಿದ್ದು, ಇದೀಗ 10 ಗ್ರಾಂ ಬಂಗಾರದ ಬೆಲೆ 55,680 ರೂ.ಆಗಿದೆ. ಅದೇ 22 ಕ್ಯಾರಟ್ ಚಿನ್ನದ ಬೆಲೆ ಹತ್ತು ಗ್ರಾಂ ಗೆ ಮೊದಲಿನ ದರಕ್ಕೆ ಹೋಲಿಸಿದರೆ 650 ರೂ. ಕಡಿಮೆ ಆಗಿದ್ದು 51,050 ರೂ. ಆಗಿದೆ.
ಇನ್ನು ಬೆಳ್ಳಿದರ ಕಳೆದ ಎರಡು ದಿನಗಳಲ್ಲಿ ಕೊಂಚ ಇಳಿಕೆ ಕಂಡಿದ್ದು, ಪ್ರತಿ ಕೆ.ಜಿ ದರದಲ್ಲಿ 2,500 ರೂ. ಕಡಿಮೆ ಆಗಿ 70,000 ರೂ.ಗೆ ಬಂದು ನಿಂತಿದೆ.
ಚಿನ್ನದ ಬೆಲೆ ಡಾಲರ್(Doller)ನ್ನುಅವಲಂಬಿಸಿರುತ್ತದೆ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಪ್ರತಿ ಔನ್ಸ್‌ಗೆ (ounce) ಅಂದರೆ 28 ಗ್ರಾಂ ಚಿನ್ನದ ದರ 1636 ಡಾಲರ್‌ಗೆ ಕುಸಿತ ಕಂದಿತ್ತು. ಆದರೆ ಈಗ 1950 ಡಾಲರ್‌ಗಳಷ್ಟು ಜಿಗಿತ ಕಂಡಿದೆ. ಇಡೆ ಏರಿಕೆ ಮುಂದುವರೆದರೆ ಇದು 2,000 ಡಾಲರ್ ಗೆ ತಲುಪಲೂ ಬಹುದು. 2,078 ಡಾಲರ್‌ಗಳ ದಾಖಲೆಯ ಮಟ್ಟದ ಜಿಗಿತ ಕಾಣಬಹುದು ಎಂದು ತಜ್ಞರ ಅಭಿಪ್ರಾಯವಾಗಿದೆ. ಅಂದರೆ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ಗೆ ಏರಿಕೆ ಆಗಬಹುದು ಎನ್ನಲಾಗಿದೆ.
ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿನ್ನೆಡೆ ಬಂಗಾರದ ದರ ಏರಿಕೆಯಾಗಲು ಪ್ರಮುಖ ಕಾರಣವಾಗಬಹುದು. ಕೋಟಕ್ ಸೆಕ್ಯುರಿಟೀಸ್‌ನ (Kotak Securities) ತಜ್ಞ ರವೀಂದ್ರ ರಾವ್ ಹೇಳುವಂತೆ 1973ರ ನಂತರ 7 ಮಹಾ ಆರ್ಥಿಕ ಹಿಂಜರಿತದ ಸಂದರ್ಭ ಎದುರಿಸಲಾಗಿದ್ದು 5 ಸಲ ಬಂಗಾರದ ದರ ಏರಿಕೆಯಾಗಿತ್ತು. ಆರ್ಥಿಕ ವಿಪತ್ತಿನ ಕಾರಣದಿಂದ ಚಿನ್ನದ ಬೆಲೆ ಏರಿಕೆ ಕಾಣುತ್ತದೆ ಎಂದಿದ್ದಾರೆ.
ಚಿನ್ನದ ಆಮದು ಸುಂಕ ತಗ್ಗಿಸಬೇಕು:
ಸ್ವರ್ಣದ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಮದು ದರವನ್ನು ಕಡಿಮೆ ಮಾಡಬೇಕು ಎಂದು ತಜ್ಞರ ಒತ್ತಾಯ. ಆಮದು ಸುಂಕ ಈಗ 15% ಇದೆ. ಬಂಗಾರದ ಬೆಲೆ ಹೆಚ್ಚಳದಿಂದಾಗಿ ಬಂಗಾರಕ್ಕೆ ಬೇಡಿಕೆ ತಾತ್ಕಾಲಿಕವಾಗಿ ಇಳಿಕೆಯಾಗಬಹುದು. ಆಗ ಹಲವು ವ್ಯವಹಾರಗಳಿಗೆ ಹೊಡೆತಬೀಳುತ್ತದೆ. ಹಾಗಾಗಿ ಈ ಸಮತೋಲನಕ್ಕೆ ಆಮದು ಸುಂಕ ಕಡಿಮೆ ಮಾಡುವುದು ಕೂಡ ಅಗತ್ಯವಾಗಿದೆ.