Karnataka Times
Trending Stories, Viral News, Gossips & Everything in Kannada

Rohit Sharma: ಕ್ರಿಕೆಟಿಗ ರೋಹಿತ್ ಶರ್ಮಾ ಮೇಲೆ ಕಿಡಿಕಾರಿದ ಹಿಂದೂಗಳು, ಎಲ್ಲೆಡೆ ಆಕ್ರೋಶ.

ಹೋಳಿ ಹಬ್ಬ ಬಂತೆಂದರೆ ಜನರಿಗೆ ಎಲ್ಲಿಲ್ಲದ ಖುಷಿ. ರಂಗಿನ ಹಬ್ಬಕ್ಕೆ ಮನತುಂಬಾ ಆಡಿ ಹಾಡಿ ನಲಿದು ಒಬ್ಬರ ಮೇಲೊಬ್ಬರು ಬಣ್ಣ ಬಳಿಯುವ ಮಜಾನೇ ಬೇರೆ. ಅದೇ ರೀತಿ ತರತರದ ಹೋಳಿ ಆಟದ ಪೋಸ್ಟರ್ ಗಳು ಆಗಾಗ ವೈರಲ್ ಆಗುತ್ತಲೇ ಇದ್ದು ಇತ್ತೀಚೆಗೆ ಪ್ರಾಣಿಗಳ ಮೇಲೂ ಹೋಳಿ ಬಣ್ಣ ಹಾಕಿ ಹ್ಯಾಪಿ ಹೋಲಿ ಎಂದು ಪೋಸ್ಟರ್ ಹಾಕಲಾಗಿತ್ತು, ಇದನ್ನು ಖಂಡಿಸಿದ್ದ ಭಾರತೀಯ ಕ್ರಿಕೆಟ್ ತಂಡದ ಆಟಗಾರ ರೋಹಿತ್ ಶರ್ಮಾ (Rohit Sharma) ಅವರು ಪೋಸ್ಟರ್ ಹಾಕಿದ್ದರು.

ಹೋಳಿ ಹಬ್ಬದ ಶುಭಾಶಯಗಳು. ಪ್ರಾಣಿಗಳಿಗೆ ಬಣ್ಣ ಬಳಿದು ಹೋಳಿಯ ನೀರೆರಚಿ ಅವುಗಳಿಗೆ ಹಿಂಸೆ ನೀಡುವುದು ಬೇಡ. ಹೆಚ್ಚು ಬೀದಿ ನಾಯಿಗಳಿಗೆ ಈ ರೀತಿ ಕಾಟ ನೀಡುತ್ತಾರೆ ಇದು ಮನುಷ್ಯತ್ತ್ವ ಅಲ್ಲ ಎಂದು ಕ್ರಿಕೆಟಿಗ ರೋಹಿತ್ ಶರ್ಮಾ ಅವರು ಟ್ವೀಟ್ ಮಾಡಿದ್ದರು. ಈ ಮೂಲಕ ಇವರ ಪೋಸ್ಟರ್ ಎಲ್ಲೆಡೆ ವೈರಲ್ ಆಗುತ್ತಿದ್ದು ಕೆಲವರು ಸಪೋರ್ಟ್ ಮಾಡಿದ್ದರೆ ಇನ್ನು ಕೆಲವರು ಅಪೋಸ್ ಕೂಡ ಮಾಡುತ್ತಿದ್ದಾರೆ.

Join WhatsApp
Google News
Join Telegram
Join Instagram

ರೋಹಿತ್ ಶರ್ಮಾ ಅವರು ಈ ರೀತಿ ಪೋಸ್ಟ್ ಮಾಡುವುದು ಹೊಸದೇನು ಆಗಿರದೇ ಈ ಹಿಂದೆ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯಬೇಡಿ ಪ್ರಾಣಿಗಳಿಗೆ ಹಿಂಸೆಯಾಗುತ್ತದೆ. ಇದರಿಂದಾಗಿ ಶಬ್ಧ ಮಾಲಿನ್ಯ ಹಾಗೂ ವಾಯುಮಾಲಿನ್ಯವಾಗುತ್ತದೆ. ಹೋಳಿ ಹಬ್ಬದ ಸಂದರ್ಭದಲ್ಲಿಯೂ ಇದೇ ರೀತಿ ಮನವಿ ಮಾಡಿದ್ದರು. ಆಗ ಕೂಡ ಈ ಬಗ್ಗೆ ಪರ ವಿರೋಧ ಚರ್ಚೆಗಳು ಸಹ ನಡೆದಿತ್ತು.

ಕಿಡಿಕಾರಿದ್ದ ನೆಟ್ಟಿಗರು:

ಹಿಂದೂ ಹಬ್ಬದ ಸಂದರ್ಭವೇ ಬೇಕಂತಲೇ ರೋಹಿತ್ ಶರ್ಮಾ ಟ್ವಿಟ್ ಮಾಡುತ್ತಾರೆ. ಇಲ್ಲಿ ದೀಪಾವಳಿ, ಹೋಳಿ ಇತರ ಹಬ್ಬಗಳು ಮಾತ್ರವೇ ನಿಮಗೆ ಪ್ರಾಣಿ ಹಿಂಸೆಯಾಗುತ್ತದೆ ಎಂದು ಅನಿಸುವುದು ಆದರೆ ಮುಸ್ಲಿಮರ ಬಕ್ರೀದ್ ವೇಳೆ ಪ್ರಾಣಿ ಹಿಂಸೆ ನೆನಪಾಗುವುದಿಲ್ಲವೇ, ಆಗ ಯಾಕೆ ಸುಮ್ಮನಿದ್ದು ವಿಶ್ ಮಾಡುತ್ತೀರಿ ಇಲ್ಲಿ ಯಾವ ತತ್ತ್ವ ನೆನಪಾಗೊಲ್ಲ ಇದು ಸರಿಯೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೆ ಒಂದು ಎಂಬ ಆಪಾದನೆ ಸಹ ಕೇಳಿಬರುತ್ತದೆ. ಈ ಮೂಲಕ ಕ್ರಿಕೆಟಿಗ ರೋಹಿತ್ ಅವರು ಆಪಾದನೆಯ ಸುಳಿಯಲ್ಲಿ ಸಿಲುಕುತ್ತಿದ್ದಾರೆ.

Leave A Reply

Your email address will not be published.