Karnataka Times
Trending Stories, Viral News, Gossips & Everything in Kannada

Hero Splendor: ರಸ್ತೆಗಿಳಿದ ಹೊಸ ಹೀರೋ ಸ್ಪ್ಲೆಂಡರ್ ಬೈಕ್, 68 Km ಮೈಲೇಜ್; ಬೆಲೆ ಇಲ್ಲಿದೆ.

ದೇಶದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆ ಕೂಡ ಬಹಳ ವಿಸ್ತರಿಸಿದೆ. ಈಗಾಗಲೇ ಹಲವಾರು ಮೋಟಾರ್ ಕಂಪನಿಗಳು ಹೊಸ ಹೊಸ ಮಾದರಿಯ ಬೈಕ್ ಬಿಡುಗಡೆ ಮಾಡುತ್ತಿವೆ. ಅದರಲ್ಲೂ ಗ್ರಾಹಕರ ಅನುಕೂಲಕ್ಕೆ ತಕ್ಕ ಹಾಗೆ ದಕ್ಷತೆಯುಳ್ಳ ಬೈಕ್ ಬಿಡುಗಡೆ ಮಾಡಲಾಗುತ್ತಿದೆ. ಇದೀಗ ಹೀರೋ ಮೋಟೋ ಕಾರ್ (Hero Moto Corp)ಕಂಪನಿ ಸೂಪರ್ ಸ್ಪ್ಲೆಂಡರ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ (ದೆಹಲಿ ಎಕ್ಸ್ ಶೋರೂಮ್ ದರ) 83,368 ರೂಪಾಯಿಗಳು.

ಇನ್ನು ಈ ಬೈಕ್ ನಲ್ಲಿ ಇರುವ ವಿಶೇಷತೆ ನೋಡುವುದಾದರೆ ಸ್ಪ್ಲೆಂಡರ್ ಬೈಕ್ ಗಳಿಗೆ ದೇಶದಲ್ಲಿ ಮೊದಲಿನಿಂದಲೂ ಬೇಡಿಕೆ ಇದೆ. ಅತ್ಯುತ್ತಮ ಬೈಕ್ ನೀಡಿದ ಹೆಗ್ಗಳಿಕೆ ಹೀರೋ ಮೋಟೋ ಕಾರ್ಪ್ ಕಂಪನಿಯದ್ದು. ಈ ಬೈಕ್ ನ ಇಂಧನದ ದಕ್ಷತೆ ಕಡಿಮೆ ಮೇಂಟೆನೆನ್ಸ್ (maintenance)ನಿಂದಾಗಿ ಹೆಚ್ಚು ಜನರಿಗೆ ಇಷ್ಟವಾಗಿದೆ.

Join WhatsApp
Google News
Join Telegram
Join Instagram

ಇನ್ನು ಸೂಪರ್ ಸ್ಪ್ಲೆಂಡರ್ ಎಕ್ಸ್ ಟೆಕ್ ನ ವಿಶೇಷತೆ ನೋಡುವುದಾದರೆ ಬೈಕ್ ನ ಹೊರಭಾಗದಲ್ಲಿ ಹೊಸ ಗ್ರಾಫಿಕ್ಸ್(Graphics) ಅಳವಡಿಸಲಾಗಿದೆ. ರಿಂಗ್ ಗೆ ಅಳವಡಿಸಲಾಗಿರುವ ಟೇಪ್ ಅತ್ಯಂತ ಆಕರ್ಷಕವಾಗಿ ಕಾಣಿಸುತ್ತದೆ. ಜೊತೆಗೆ ನೂತನ ಎಲ್ಇಡಿ ಹೆಡ್ (LED)ಲ್ಯಾಂಪ್ ಹಾಗೂ ಬೈಕ್ ನ ಮೂರು ಬಗೆಯ ಪೇಯಿಂಟ್ ಜನರನ್ನು ಹೆಚ್ಚು ಆಕರ್ಷಿಸುತ್ತದೆ.

ಗ್ಲಾಸ್ ಬ್ಲಾಕ್ (glossy black), ಮ್ಯಾಟ್ ಆಕ್ಸಿಸ್ ಗ್ರೇ (Matte axis grey) ಹಾಗೂ ಬ್ಲೀಚಿಂಗ್ ರೆಡ್ (Bleaching Red) ಬಣ್ಣದಲ್ಲಿ ಬೈಕ್ ಲಭ್ಯವಿದೆ. (ಕಪ್ಪು, ಬೂದು ಕೆಂಪು ಬಣ್ಣ). ಇನ್ನು ಈ ಬೈಕ್ ನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (Digital Instrument Cluster), ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್(Real Time Mileage Indicator) ಕೂಡ ಇದೆ. ಇಂಧನ ಕಡಿಮೆಯಾಗುತ್ತಿದ್ದ ಹಾಗೆ ಸೂಚನೆಯನ್ನು ನೀಡುವ ಇಂಡಿಕೇಟರ್ ಕೂಡ ಇದೆ. ಅಷ್ಟೇ ಅಲ್ಲದೆ ಯುಎಸ್ ಬಿ ಚಾರ್ಜರ್ (USB Charger) ಕೂಡ ಬೈಕ್ ನಲ್ಲಿ ಅಳವಡಿಸಲಾಗಿದೆ.

ಹಾಗಾಗಿ ಬೈಕ್ ಓಡಿಸುವ ಅಗಲು ಮೊಬೈಲ್ ಚಾರ್ಜ್ ಮಾಡಿಕೊಳ್ಳಬಹುದು. ಇನ್ನು ಆಧುನಿಕ ತಂತ್ರಜ್ಞಾನವನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗಿರುವ ಈ ಸ್ಪ್ಲೆಂಡರ್ ಬೈಕ್ ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಕೂಡ (Bluetooth Connectivity) ನೀಡಲಾಗಿದೆ. ಹಾಗಾಗಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮೂಲಕ ಫೋನ್(Phone) ಅಥವಾ ಎಸ್ಎಂಎಸ್ (SMS) ಬಂದಿದ್ದರೆ ಅದರ ಅಲರ್ಟ್ ನಿಮಗೆ ಗೊತ್ತಾಗುತ್ತದೆ. ಫೋನ್ ಬ್ಯಾಟರಿ ಚಾರ್ಜಿಂಗ್ ಲೆವೆಲ್ ಕೂಡ ನೀವು ಇದರಲ್ಲಿ ತಿಳಿದುಕೊಳ್ಳಬಹುದು.

ನೂತನ ಸ್ಪ್ಲೆಂಡರ್ ಬೈಕ್ 125 ಸಿಸಿ ಸಿಂಗಲ್ ಸಿಲಿಂಡರ್ (Single Cylinder)ಎಂಜಿನ್ ಹೊಂದಿದೆ. 10.6 ಟಾರ್ಕ್ (Torque) ಉತ್ಪಾದನೆ ಮಾಡುತ್ತದೆ. ಐದು ಹಂತದ ಗಿಯರ್ ಬಾಕ್ಸ್( Gear box) ಇದ್ದು, 68 ಕಿಲೋಮೀಟರ್ ಮೈಲೇಜ್ (Mileage) ನೀಡುತ್ತದೆ ಎಂದು ಕಂಪನಿ ಘೋಷಿಸಿದೆ. ಮುಖ್ಯವಾಗಿ ಇದರಲ್ಲಿ ಇತರ ಕಂಪನಿಗಳಿಗೆ ಹೋಲಿಸಿದರೆ ಮೈಲೇಜ್ ಜಾಸ್ತಿ ಇರುವುದರಿಂದ ಮುಂದಿನ ದಿನಗಳಲ್ಲಿ ಹೀರೋ ಸ್ಪ್ಲೆಂಡರ್ ಎಕ್ಸ್ ಟೆಕ್ (Hero Splendor xtec) ಬೈಕ್ ನ ಬೇಡಿಕೆ ಹೆಚ್ಚಾಗುವುದರಲ್ಲಿ ನೋ ಡೌಟ್

Leave A Reply

Your email address will not be published.