Rishab Shetty: ಸಿಎಂ ಬಸವರಾಜ್ ಬೊಮ್ಮಾಯಿಗೆ ವಿಶೇಷ ಪತ್ರ ಬರೆದ ರಿಷಬ್ ಶೆಟ್ಟಿ

Advertisement
ಕಾಂತರಾ ಸಿನಿಮಾದ ಬಿಗ್ ಸಕ್ಸಸ್ ನಂತರ ರಿಷಬ್ ಶೆಟ್ಟಿ (Rishab Shetty) ಅವರ ಲಕ್ ಕೂಡ ಬದಲಾಗಿದೆ. ಸಿನಿಮಾದ ಎರಡನೇ ಭಾಗವನ್ನು ಕೂಡ ಚಿತ್ರೀಕರಣ ಮಾಡಲು ಮುಂದಾಗಿರುವ ರಿಷಬ್ ಶೆಟ್ಟಿ ತಮ್ಮ ಅತ್ಯುತ್ತಮ ಚಿತ್ರಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಕೂಡ ಮೂಡಿಗೆರೆಸಿಕೊಂಡಿದ್ದಾರೆ. ಇನ್ನು ಚುನಾವಣೆಯ ಸಂದರ್ಭದಲ್ಲಿ ರಿಷಬ್ ಶೆಟ್ಟಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿ ಆಗಿದ್ದು ಜನರಲ್ಲಿ ಕುತೂಹಲ ಮೂಡಿಸಿದೆ. ಶೆಟ್ರು ಸಿನಿಮಾ ಮಾಡುವುದನ್ನು ಬಿಟ್ಟು ರಾಜಕೀಯಕ್ಕೆ ಸೇರುತ್ತಿದ್ದಾರಾ ಅಂತ ಜನ ವೈರಲ್ ಆಗಿರುವ ಫೋಟೋ ನೋಡಿ ಕಮೆಂಟ್ ಮಾಡಿದ್ದರು. ಆದರೆ ರಿಷಬ್ ಶೆಟ್ಟಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿದ್ದು ಬೇರೆಯದೇ ಕಾರಣಕ್ಕೆ.
ರಿಷಿಪ್ ಶೆಟ್ಟಿ ಅವರ ನಿರ್ದೇಶನದ ನಟನೆಯ ಕಾಂತಾರ ಸಿನಿಮಾದಲ್ಲಿ ಕರ್ನಾಟಕದ ಕರಾವಳಿ ಭಾಗದ ಜನರ ಸಂಪ್ರದಾಯ ಆಚಾರ ವಿಚಾರ ಎಲ್ಲವನ್ನು ಚಿತ್ರೀಕರಿಸಲಾಗಿದೆ. ಹಾಗಾಗಿ ದಕ್ಷಿಣ ಕನ್ನಡ ಭಾಗದ ದೈವರಾಧನೆ, ಭೂತಕೋಲ ಮೊದಲಾದವು ಜಗತ್ತಿನ ಮೂಲೆ ಮೂಲೆಗೂ ತಲುಪಿದೆ. ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ನಂತರ ಒಂದಲ್ಲ ಒಂದು ಸಂದರ್ಶನದಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ದಿನವೂ ರಿಷಬ್ ಶೆಟ್ಟಿ ಅವರ ಕುರಿತಾಗಿ ಒಂದಲ್ಲ ಒಂದು ಸುದ್ದಿ ಹರಿದಾಡುತ್ತಲೇ ಇರುತ್ತದೆ.
ಇವತ್ತಿನ ಕುತೂಹಲಕಾರಿ ವಿಷಯ ಅಂದ್ರೆ ರಿಷಬ್ ಹಾಗೂ ಮುಖ್ಯಮಂತ್ರಿ ಅವರ ದಿಡೀರ್ ಮೀಟಿಂಗ್. ಕನ್ನಡದ ಭರವಸೆಯ ನಟ ಹಾಗೂ ನಿರ್ದೇಶಕ ಎನಿಸಿಕೊಂಡಿರುವ ರಿಷಬ್ ಶೆಟ್ಟಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿ ಆಗಿದ್ದಾರೆ ಈ ಭೇಟಿಗೆ ಪ್ರಮುಖವಾದ ಕಾರಣವೂ ಇದೆ. ಆದರೆ ಈ ಭೇಟಿ ಚುನಾವಣೆಯ ಸಂದರ್ಭದಲ್ಲಿ ಬೇರೆಯದೇ ಅರ್ಥವನ್ನು ಕೊಡುತ್ತಿದೆ. ಆದರೆ ರಿಷಭ್ ಅವರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ವರದಿ ಒಂದನ್ನು ಸಲ್ಲಿಸಿದ್ದಾರೆ ಆ ವರದಿಯಲ್ಲಿ ಏನಿದೆ ಗೊತ್ತಾ?
ಅರಣ್ಯ ಹಾಗೂ ಅಲ್ಲಿ ವಾಸಿಸುವ ಜನರ ಸಮಸ್ಯೆಯನ್ನು ರಿಶಬ್ ಶೆಟ್ಟಿ ಹತ್ತಿರದಿಂದ ಬಲ್ಲವರು. ಇದು ಸಿನಿಮಾ ಚಿತ್ರಿಕರಣ ಮಾತ್ರವಲ್ಲ ನಿಜವಾಗಿಯೂ ಆ ಭಾಗದಲ್ಲಿ ಇರುವ ಜನರ ಸಮಸ್ಯೆಯಾಗಿದೆ. ಹಾಗಾಗಿ ರಿಷಬ್ ಅವರು ಈ ಕುರಿತಂತೆ ಒಂದು ವರದಿ ಸಿದ್ಧಪಡಿಸಿದ್ದಾರೆ. ಕಾಡು ಮೇಡುಗಳಲ್ಲಿ ವಾಸಿಸುವ ಜನರ ಸಮಸ್ಯೆಗಳನ್ನು ಹಾಗೂ ಕಾಡಿನ ರಕ್ಷಣೆಗೆ ಬೇಕಾಗಿರುವ ಕ್ರಮ ಕೈಗೊಳ್ಳುವಂತೆ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆಗೂ ಚರ್ಚಿಸಿ ತಯಾರಿಸಲಾದ ಈ ವರದಿಯನ್ನು ರಿಷಬ್ ಶೆಟ್ಟಿ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅವರಿಗೆ ತಾವು ತಯಾರಿಸಿದ ವರದಿಯನ್ನು ವರ್ಗಾಯಿಸಿದ್ದಾರೆ.
Advertisement
ರಿಷಬ್ ನೀಡಿರುವ ವರದಿಯನ್ನು ಗಮನಿಸಿದ ಮುಖ್ಯಮಂತ್ರಿಗಳು ಶೀರ್ಘದಲ್ಲಿಯೇ ಆ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ರಿಷಬ್. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
“ಚಿತ್ರದ ನಂತರ ಕಾಡು ಸುತ್ತಿ ಅಡವಿ ಅಂಚಿನ ಜನರ ಜೊತೆಗೆ ಮಾತನಾಡಿ ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆಗೂ ಚರ್ಚೆ ಮಾಡಿ ಕೆಲವು ಮಾಹಿತಿಯನ್ನು ಕಲೆ ಹಾಕಿದ್ದೇನೆ. ಅದನ್ನು ಮುಖ್ಯಮಂತ್ರಿಗಳ ಜೊತೆಗೆ ಹಂಚಿಕೊಂಡಾಗ ಅವರು ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರಿಗೆ ಧನ್ಯವಾದಗಳು”. ಈ ರೀತಿಯಾಗಿ ನಟ ರಿಷಬ್ ಶೆಟ್ಟಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕಾಡು ಮೇಡುಗಳ ಜನರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ನೋಡಿ ಅರಿತಿರುವ ನಟ ರಿಷಬ್ ಶೆಟ್ಟಿ ಕೇವಲ ತಮ್ಮ ಸಿನಿಮಾಕ್ಕೆ ಮಾತ್ರ ಸೀಮಿತವಾಗಿರದೆ ನಿಜವಾಗಿಯೂ ಅಲ್ಲಿಯ ಜನರ ಸಮಸ್ಯೆಗೆ ಸ್ಪಂದಿಸಲು ಮುಂದಾಗಿದ್ದಾರೆ ಇದೇ ಕಾರಣಕ್ಕೆ ಸಿಎಂ ಅವರ ಮುಂದೆಯೂ ತಮ್ಮ ಬೇಡಿಕೆಯನ್ನು ಇಟ್ಟಿದ್ದಾರೆ. ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಕೂಡ ಪ್ರತಿಕ್ರಿಯೆ ನೀಡಿದ್ದು ಸದ್ಯದಲ್ಲಿಯೇ ಕಾಡಂಚಿನ ಜನರ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ,ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಶ್ರೀ @BSBommai ಯವರಿಗೆ ಧನ್ಯವಾದಗಳು.@CMofKarnataka @aranya_kfd pic.twitter.com/VRL9YDDZcg
— Rishab Shetty (@shetty_rishab) March 8, 2023
Advertisement