Aadhaar Update: ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರ ದಿಂದ ಸಿಹಿಸುದ್ದಿ.

Advertisement
ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಗುರುತಾಗಿ ಆಧಾರ್ ಕಾರ್ಡ್ ಬೇಕೆ ಬೇಕು. ಯಾವುದೇ ಬ್ಯಾಂಕ್ ವ್ಯವಹಾರ ಮಾಡುವುದಿದ್ದರೆ ಅಥವಾ ಇನ್ನಿತರ ಯಾವುದೇ ಕಾನೂನಾತ್ಮಕ ಚಟುವಟಿಕೆಗಳಿಗೂ ಆಧಾರ್ ಕಾರ್ಡ್ ಅನ್ನೇ ಆಧಾರವಾಗಿಟ್ಟುಕೊಳ್ಳಲಾಗಿದೆ. ಆಧಾರ್ ಕಾರ್ಡ್ ಮಾತ್ರವಲ್ಲದೇ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಎಲ್ಲವೂ ನಮ್ಮ ವಿಳಾಸವನ್ನು ತಿಳಿಸುವಂತಹ ದಾಖಲೆಗಳಾಗಿವೆ. ಇನ್ನು ಈ ದಾಖಲೆಗಳಲ್ಲಿ ಯಾವುದಾದರು ಬದಲಾವಣೆಗಳು ಆಗಬೇಕು ಅಥವಾ ಈ ಹಿಂದೆ ಆಗಿರುವ ಯಾವುದಾದರೂ ತಪ್ಪನ್ನು ಸರಿಪಡಿಸಬೇಕು ಅಂದರೆ ಅದು ಬಹಳ ಕಷ್ಟ. ಎಷ್ಟೋ ಬಾರಿ ಆಯಾ ಕಚೇರಿಗೆ ಅಲೆದು ಅಲೆದು ಸಾಕಾಗುತ್ತದೆ ದಾಖಲೆಗಳ ಸರಿಪಡಿಸಿಕೊಳ್ಳುವುದಕ್ಕೆ ಇನ್ನೊಂದಿಷ್ಟು ವಿವರಗಳನ್ನು ಕೊಡಬೇಕು ಅದು ಮತ್ತು ಕಷ್ಟದ ಕೆಲಸ. ಹಾಗಾಗಿ ಒಮ್ಮೆ ದಾಖಲೆ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಸಿದ್ಧವಾದರೆ ಅದರಲ್ಲಿರುವ ವಿವರಗಳನ್ನು ನವೀಕರಿಸುವುದು ಬಹಳ ಕಷ್ಟ.
ಇನ್ನು ಮುಂದೆ ಆ ಚಿಂತೆ ಇಲ್ಲ. ಮೋದಿ ಸರ್ಕಾರ ಜನರಿಗೆ ಆಗುವ ಈ ಅನಾನುಕೂಲವನ್ನು ತಪ್ಪಿಸಲು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಕೇಂದ್ರ ಸರ್ಕಾರ ಹೊಸದೊಂದು ಸೇವೆ ಆರಂಭಿಸಲಿದ್ದು ಇದರಿಂದ ಜನರಿಗೆ ತಮ್ಮ ದಾಖಲೆಗಳಲ್ಲಿ ಇರುವ ವಿವರಗಳನ್ನು ಸರಿಪಡಿಸಿಕೊಳ್ಳುವುದು ಸುಲಭವಾಗಲಿದೆ. ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಹೊಸ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದ್ದು ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆಗಳು ಇದ್ದರೂ ನೀವಾಗಿಯೇ ಅದನ್ನ ನವೀಕರಿಸಿಕೊಳ್ಳಬಹುದು.
Advertisement
ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದೇ ವಿವರಗಳನ್ನು ನವೀಕರಿಸಿದರೆ ಆ ವಿವರಗಳು ನಿಮ್ಮ ಮತದಾರರ ಐಡಿ ಡ್ರೈವಿಂಗ್ ಲೈಸೆನ್ಸ್ ಪಡಿತರ ಚೀಟಿಯಲ್ಲಿಯೂ ನವೀಕರಿಸಲಾಗುತ್ತದೆ. ಅಂದರೆ ನಿಮ್ಮ ಎಲ್ಲಾ ದಾಖಲೆಗಳಲ್ಲಿಯೂ ಒಂದೇ ತರನಾದ ವಿವರ ಸಿಗುತ್ತದೆ.
ಈ ಹೊಸ ಸೇವೆಯನ್ನು ಆರಂಭಿಸಲು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ಭಾರತದ ಚುನಾವಣಾ ಆಯೋಗ ಸಾರಿಗೆ ಮೊದಲಾದ ಆಯೋಗದೊಂದಿಗೆ ಚರ್ಚೆ ನಡೆಸಿದೆ. ಜೊತೆಗೆ ಈ ಎಲ್ಲಾ ದಾಖಲೆಗಳನ್ನು ನೀಡುವ ಐಟಿ ಇಲಾಖೆಯ ಜೊತೆಗೂ ಚರ್ಚೆ ನಡೆಸಲಾಗಿದೆ. ಈ ಹೊಸ ಸೇವೆ ಆರಂಭವಾದರೆ ಪಾಸ್ಪೋರ್ಟ್ ನಂತರ ದಾಖಲೆಗಳನ್ನು ಪಡೆಯುವಲ್ಲಿಯೂ ಕೂಡ ಸಹಾಯಕವಾಗಲಿದೆ. ಸರ್ಕಾರ ಈ ಸೇವೆಯನ್ನು ಆರಂಭಿಸಿದರೆ ಜನರಿಗೆ ಒಂದು ದಾಖಲೆ ಸರಿಪಡಿಸಿಕೊಳ್ಳುವುದಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವುದು ವಾರಾನುಗಟ್ಟಲೆ ಕಾಯುವುದು ಎಲ್ಲವೂ ತಪ್ಪುತ್ತದೆ.
Advertisement