ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುವಂತಹ ಕೆಲವೊಂದು ವಿಡಿಯೋಗಳು ನಿಜಕ್ಕೂ ಕೂಡ ನಮ್ಮ ಮನಸ್ಸನ್ನು ತಾಕುವ ರೀತಿ ಇರುತ್ತದೆ. ನಿಜಕ್ಕೂ ಹೇಳಬೇಕೆಂದರೆ ಸೋಶಿಯಲ್ ಮೀಡಿಯಾ (Social Media) ದಲ್ಲಿ ನಮ್ಮ ಕಣ್ಣನ್ನು ತರಿಸುವಂತಹ ಕೆಲವೊಂದು ಪ್ರಕರಣಗಳು ಕೂಡ ಕಂಡುಬರುತ್ತವೆ. ಅವುಗಳಲ್ಲಿ ಈಗ ವೈರಲ್ ಆಗಿರುವಂತಹ ಒಂದು ವಿಡಿಯೋದ (Viral Video) ಬಗ್ಗೆ ಈ ಆರ್ಟಿಕಲ್ ನಲ್ಲಿ ನಾವು ನಿಮಗೆ ತಿಳಿಸಲು ಹೊರಟಿದ್ದೇವೆ ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.
ಹೌದು ಸಾಮಾನ್ಯವಾಗಿ ನೀವು ಗಮನಿಸಿರಬಹುದು ರೈಲು ಪ್ರಯಾಣ ಮಾಡುವಂತಹ ಜನಸಂಖ್ಯೆ ಇಡಿ ಜಾಗತಿಕ ಮಟ್ಟದಲ್ಲಿ ನೋಡಿದರೆ ನಮ್ಮ ಭಾರತ ದೇಶದಲ್ಲಿ ಹೆಚ್ಚಾಗಿ ಸಿಗಬಹುದು ಎಂದು ಹೇಳಬಹುದು. ದಿನನಿತ್ಯ ಕೋಟ್ಯಾಂತರ ಸಂಖ್ಯೆಯಲ್ಲಿ ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ರೈಲ್ವೆ ನೆಟ್ವರ್ಕ್ (Indian Railway Network) ನಲ್ಲಿ ನಮ್ಮ ಭಾರತೀಯರು ಪ್ರಯಾಣಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಬಡ ಹಾಗೂ ಮಾಧ್ಯಮ ವರ್ಗದ ಜನರಿಗೆ ದೂರ ಪ್ರಯಾಣಕ್ಕಾಗಿ ನಿಜಕ್ಕೂ ಕೂಡ ಬಜೆಟ್ ನಲ್ಲಿ ಬರುವಂತಹ ಹಾಗೂ ಸುರಕ್ಷಿತ ಪ್ರಯಾಣ ಎಂದರೆ ಅದು ರೈಲ್ವೆ ಪ್ರಯಾಣ (Railway Travel) ಎಂದು ಹೇಳಬಹುದಾಗಿದೆ.
ಭಾರತೀಯ ಜನಸಂಖ್ಯೆ ಬಹುತೇಕವಾಗಿ ರೈಲ್ವೆ ಪ್ರಯಾಣವನ್ನು ನಂಬಿಕೊಂಡಿರುವ ಕಾರಣದಿಂದಾಗಿ ನಮ್ಮ ಭಾರತ ದೇಶದ ರೈಲ್ವೆ ನೆಟ್ವರ್ಕ್ ಎನ್ನುವುದು ಜಾಗತಿಕ ಮಟ್ಟದಲ್ಲಿ ಟಾಪ್ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಇದೇ ರೈಲ್ವೆ ಪ್ರಯಾಣದಲ್ಲಿ ನಡೆದಿರುವಂತಹ ಒಂದು ಘಟನೆಯ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಟ್ವಿಟರ್ (Twitter) ನಲ್ಲಿ ಮಾಡಿರುವಂತಹ ಒಂದು ಪೋಸ್ಟ್ ನಲ್ಲಿ ವೈರಲ್ ಆಗಿರುವ ವಿಡಿಯೋದ (Viral Video) ಪ್ರಕಾರ ಒಬ್ಬ ವಯಸ್ಸಾಗಿರುವ ಮಹಿಳೆ ತನ್ನ ಆಡಿನ ಜೊತೆಗೆ ರೈಲು ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಟಿಕೆಟ್ ಕೇಳಲು TTE ಅಲ್ಲಿಗೆ ಬಂದಿದ್ದಾರೆ.
ಆ ಸಂದರ್ಭದಲ್ಲಿ ಆ ವಯಸ್ಸಾದ ಮಹಿಳೆಯ ಬಳಿ ಟಿಕೆಟ್ ಕೇಳಿದಾಗ TTE ಗೆ ಅವರು ಕೇವಲ ತನ್ನ ಟಿಕೆಟ್ ಮಾತ್ರವಲ್ಲದೆ ತನ್ನ ಆಡಿಗಾಗಿ ಕೂಡ ಮಾಡಿರುವ ಟಿಕೆಟ್ ಅನ್ನು ತೋರಿಸುತ್ತಾರೆ. ಈ ಕಾಲದಲ್ಲಿ ಮನುಷ್ಯರೇ ತಮ್ಮ ಟಿಕೆಟ್ ಅನ್ನು ತೆಗೆದುಕೊಳ್ಳದೆ ಇರುವ ಸಂದರ್ಭದಲ್ಲಿ ಆ ವೃದ್ಧ ಮಹಿಳೆ ತನ್ನ ಆಡಿಗಾಗಿ ಕೂಡ ರೈಲ್ವೆ ಟಿಕೆಟ್ (Railway Ticket) ಅನ್ನು ತೆಗೆದುಕೊಂಡಿರುವುದು ನಿಜಕ್ಕೂ ಕೂಡ ಅವರ ಪ್ರಾಮಾಣಿಕತೆ ಹಾಗೂ ಮುಗ್ಧತೆಯನ್ನು ಸಾಬೀತು ಪಡಿಸುತ್ತದೆ. ಈ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದ್ದು ಆ ಮಹಿಳೆಗೆ ವ್ಯಾಪಕವಾಗಿ ಪ್ರಶಂಸೆ ಸಿಗುತ್ತಿದೆ.
She bought train ticket for her goat as well and proudly tells this to the TTE.
Look at her smile. Awesome.❤️ pic.twitter.com/gqFqOAdheq
— Awanish Sharan 🇮🇳 (@AwanishSharan) September 6, 2023