ಟಾಲಿವುಡ್ ನ ಹಿರಿಯ ನಟ ನರೇಶ್ (Naresh) ರವರು ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟಿ ಪವಿತ್ರಾ ಲೋಕೇಶ್ (Pavitra Lokesh) ರವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಈ ಮದುವೆಗೆ (Marriage) ಆಪ್ತರು ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಿದ್ದರು. ಇನ್ನು ಮದುವೆಯ ವಿಡಿಯೋವನ್ನು ಸ್ವತಃ ನರೇಶ್ ರವರೇ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಹೌದು ಅಂದಹಾಗೆ ನರೇಶ್ ಅವರಿಗೆ ಇದು ನಾಲ್ಕನೇ ವಿವಾಹವಾಗಿದೆ. ಇನ್ನು ವಿವಾಹದ ವಿಡಿಯೋವನ್ನು ಹಂಚಿಕೊಂಡಿರುವ ನರೇಶ್ ರವರು ಒಂದು ಪವಿತ್ರ ಬಂಧ ಎರಡು ಮನಸ್ಸು ಮೂರು ಗಂಟು ಏಳು ಹೆಜ್ಜೆ ನಿಮ್ಮೆಲ್ಲರ ಆಶೀರ್ವಾದವನ್ನು ಬಯಸುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಹೌದು ಈ ಮೂಲಕ ತಾವಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಅಂದಹಾಗೆ ನಟ ನರೇಶ್ ಅವರಿಗೆ ಇದು ನಾಲ್ಕನೇ ವಿವಾಹವಾಗಿದ್ದು ಈ ವರ್ಷದ ಆರಂಭದಲ್ಲೇ ನಾವಿಬ್ಬರು ಹೊಸ ಜೀವನಕ್ಕೆ ಶೀಘ್ರದಲ್ಲೇ ಕಾಲಿಡಲಿದ್ದೇವೆ ಎಂದು ಘೋಷಿಸಿದ್ದರು ಪವಿತ್ರಾ ಮತ್ತು ನರೇಶ್. ಸದ್ಯ ಅದರಂತೆಯೇ ಇದೀಗ ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಇನ್ನು ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ವಿವಾಹವಾಗುತ್ತಾರೆ ಎಂಬ ಮಾತುಗಳು ಹಲವು ತಿಂಗಳಿನಿಂದ ಕೇಳಿಬರುತ್ತಿದ್ದವು. ಹೌದು ತಮ್ಮ ಬಗ್ಗೆ ಹಬ್ಬಿದ್ದ ಗಾಸಿಪ್ ಅನ್ನು ನರೇಶ್ ಆಗಲಿ ಅಥವಾ ಪವಿತ್ರಾ ಲೋಕೇಶ್ ಅವರಗಾಗಲಿ ನಿರಾಕರಣೆ ಮಾಡಿರಲಿಲ್ಲ. ಪವಿತ್ರಾ ಹಾಗೂ ನರೇಶ್ ಅವರ ಪ್ರೀತಿ ವಿಚಾರದ ಕುರಿತು ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಜಗಳವಾಡಿದ್ದರು. ಈ ವಿವಾದ ಕಳೆದ ವರ್ಷ ಮಾಧ್ಯಮಗಳಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿತ್ತು.
ಸದ್ಯ ಅಸಲಿ ವಿವಾರವೇನೆಂದರೆ ಮೂರನೇ ಪತ್ನಿಗೆ ವಿಚ್ಛೇದನ ಕೊಡದೆ ನಾಲ್ಕನೇ ಮದುವೆ ಆದ ನರೇಶ್ ರವರಿಗೆ ಇರುವ ಕಾನೂನು ತೊಡಕುಗಳೇನು ಗೊತ್ತಾ?
ರಮ್ಯಾ ರಘುಪತಿ ಮತ್ತು ನರೇಶ್ ಪ್ರೀತಿಸಿ ಮದುವೆ ಆದವರಾಗಿದ್ದು ಈ ದಂಪತಿಗೆ ಓರ್ವ ಮಗನಿದ್ದಾನೆ. ಇನ್ನು ಮಗನಿಗೆ ತಂದೆ-ತಾಯಿ ಬೇರೆ ಆಗೋದು ಇಷ್ಟವಿಲ್ಲ. ಈ ವಿಚಾರವಾಗಿ ರಮ್ಯಾ ರಘುಪತಿ ಕೆಲ ತಿಂಗಳ ಹಿಂದೆ ಮಾತನಾಡಿದ್ದು ಮಗನಿಗೋಸ್ಕರ ನಾನು ಎಲ್ಲವನ್ನೂ ಸಹಿಸಿಕೊಂಡಿದ್ದೀನಿ. ಪತಿ ಜೊತೆ ಇರ್ತೀನಿ. ನಾನು ಏನೇ ಮಾಡಿದರೂ ಅವರಿಗೆ ವಿಚ್ಛೇದನ ಕೊಡಲ್ಲ ಎಂದು ಹೇಳಿದ್ದರು. ಸದ್ಯ ನರೇಶ್ ವಿಚ್ಛೇದನ ನೀಡದೇ ಮದುವೆಯಾಗಿದ್ದು ಮದುವೆ ಆಗಿ ಅದನ್ನು ನೋಂದಣಿ ಮಾಡಿಸಿದ ಬಳಿಕ ಹೆಣ್ಣು/ಗಂಡು ಬೇರೆ ಮದುವೆ ಆಗಬೇಕು ಎಂದರೆ ವಿಚ್ಛೇದನ ನೀಡಲೇಬೇಕು.
ಹೌದು ಕಾನೂನಾತ್ಮಕವಾಗಿ ಬೇರೆ ಆದ ಬಳಿಕವೇ ಗಂಡು/ಹೆಣ್ಣು ಬೇರೆ ಮದುವೆ ಆಗಬಹುದು. ಇನ್ನು ವಿಚ್ಛೇದನ ಪಡೆಯದೇ ಬೇರೆ ಮದುವೆ ಆದರೆ ಅದನ್ನು ಮದುವೆ ಎಂದು ಪರಿಗಣಿಸಲು ಕಾನೂನಿಂದ ಸಾಧ್ಯವಿಲ್ಲ. ಹೌದು ನರೇಶ್ ಅವರು ಮೂರನೇ ಪತ್ನಿಯಿಂದ ವಿಚ್ಛೇದನ ಪಡೆದಿಲ್ಲ ಎನ್ನಲಾಗಿದ್ದು ಹೀಗಿರುವಾಗಲೇ ನಾಲ್ಕನೇ ಮದುವೆ ಆಗಿದ್ದರಿಂದ ಇದನ್ನು ವಿವಾಹ ಎಂದು ಕಾನೂನಿನಲ್ಲಿ ಪರಿಗಣಿಸಲು ಸಾಧ್ಯವಿಲ್ಲ. ಪವಿತ್ರಾ ಲೋಕೇಶ್ ಜೊತೆಗಿನ ವಿವಾಹದ ವಿಚಾರದಲ್ಲಿ ರಮ್ಯಾ ಅವರು ನರೇಶ್ ವಿರುದ್ಧ ಕೇಸ್ (Case) ದಾಖಲಿಸಬಹುದು. ಹೌದು ಈ ಸಂಬಂಧ ಬೇರೆ ಯಾರೂ ಕೇಸ್ ದಾಖಲು ಮಾಡಲು ಬರುವುದಿಲ್ಲ.