ಹಲವಾರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಹಾಗೂ ನಿರಂತರ ವಿದ್ಯುತ್ ಪೂರೈಕೆಯನ್ನು ನೀಡುತ್ತಾ ಬಂದಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು, ತನ್ನ ಗ್ರಾಹಕಸ್ನೇಹಿ ಸೇವೆಯಲ್ಲಿ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿದೆ ಹಾಗೂ ಗ್ರಾಹಕರು ಮೆಚ್ಚುವಂತಹ ಸೇವೆಗೆ ಹೆಸರಾಗಿದೆ.
ವಿದ್ಯುತ್ ಸಮಸ್ಯೆಗಳ ತ್ವರಿತ ಉಪಶಮನಕ್ಕಾಗಿ ತನ್ನ 24×7 ಸಹಾಯವಾಣಿಯನ್ನೂ ಹೊಂದಿರುವ ಬೆಸ್ಕಾಂ, ಉತ್ತಮ ತಂಡದೊಂದಿಗೆ ಗ್ರಾಹಕರ ಸಮಸ್ಯೆಗಳಿಗೆ ಅತ್ಯಂತ ತ್ವರಿತವಾಗಿ ಸ್ಪಂದಿಸಿ, ಅತಿ ಕಡಿಮೆ ಅವಧಿಯಲ್ಲಿ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿ, ವ್ಯತ್ಯಯರಹಿತ ವಿದ್ಯುತ್ ಪೂರೈಕೆಯನ್ನು ನೀಡುತ್ತಿದೆ.
ಗ್ರಾಹಕರಿಗೆ ಕೇವಲ ಉಪವಿಭಾಗಗಳಲ್ಲಲ್ಲದೇ, ವಿದ್ಯುತ್ ಸಂಬಂಧಿತ ಸೇವೆಗಳನ್ನು ಬೆರಳ ತುದಿಯಲ್ಲೇ ಒದಗಿಸುವ ಉದ್ದೇಶದಿಂದ, ತನ್ನ ಅಧಿಕೃತ ವೆಬ್’ಸೈಟ್ ಅನ್ನು ಬೆಸ್ಕಾಂ ಹೊಂದಿದ್ದು, ಗ್ರಾಹಕರಿಗೆ ಬಹುತೇಕ ಸೌಲಭ್ಯಗಳನ್ನು ಹಾಗೂ ವಿವರಗಳನ್ನು ವೆಬ್’ಸೈಟ್ ಮೂಲಕವೇ ತಲುಪಿಸುತ್ತಿದೆ.
https://bescom.karnataka.gov.in/ ವೆಬ್’ಸೈಟ್, ಬೆಸ್ಕಾಂನ ಅಧಿಕೃತ ವೆಬ್’ಸೈಟ್ ಆಗಿದ್ದು,
ಬೆಸ್ಕಾಂ ವೆಬ್’ಸೈಟ್’ನ ವಿಶೇಷತೆಗಳು:
- ಗ್ರಾಹಕರಿಗೆ ಸುಲಭವಾಗಿ ಅರ್ಥವಾಗಬಹುದಾದ ಅತ್ಯುತ್ತಮ ವಿವರಣಾತ್ಮಕ ವಿನ್ಯಾಸ.
- ಬೆಸ್ಕಾಂನ ಪ್ರತಿ ಯೋಜನೆಗಳ ಬಗೆಗಿನ ಸವಿವರ ಮಾಹಿತಿ.
- ಯೋಜನೆಗಳ ಪ್ರಗತಿಯ ಕುರಿತಾದ ವಿವರಗಳು.
- ಆನ್’ಲೈನ್ ವಿದ್ಯುತ್ ಬಿಲ್ ಪಾವತಿ ಸೌಲಭ್ಯ.
- ಬೆಸ್ಕಾಂನ ಎಲ್ಲಾ ಉಪವಿಭಾಗಗಳ ಸಂಪರ್ಕ ವಿವರ ಮತ್ತು ವಿಳಾಸ.
- ದೂರು ದಾಖಲಾತಿ ಮತ್ತು ನೋಂದಣಿಗೆ ಅವಕಾಶ.
ಇಂದೇ ಬೆಸ್ಕಾಂನ ಅಧಿಕೃತ ವೆಬ್’ಸೈಟ್ https://bescom.karnataka.gov.in/ ಗೆ ಭೇಟಿ ನೀಡಿ ಹಾಗೂ ನಿಮ್ಮ ಎಲ್ಲಾ ವಿದ್ಯುತ್ ಸಂಬಂಧಿತ ಸೇವೆಗಳನ್ನು ತ್ವರಿತವಾಗಿ ಪಡೆಯಿರಿ.