ರಿಯಲ್ ಡ್ರೈವಿಂಗ್ ಎಮಿಷನ್ (Real Driving Emissions) ಅಥವಾ ಆರ್‌ಡಿಇ (RDE) ಮಾನದಂಡಗಳು ಎಂದು ಕರೆಯಲಾಗುವ ಬಿಎಸ್”(BS) 6 ಎಮಿಷನ್ ಮಾನದಂಡದಲ್ಲಿ ಸರ್ಕಾರ ಬದಲಾವಣೆಯನ್ನು ತರಲಿದ್ದು, ಏಪ್ರಿಲ್ ಒಂದರಿಂದ ಇದು ದೇಶಾದ್ಯಂತ ಜಾರಿಯಾಗಲಿದೆ. ಈ ಹೊಸ ನಿಯಮದ ಪ್ರಕಾರ, ಕಾರು ತಯಾರಕರು ತಮ್ಮ ವಾಹನಗಳ ರಿಯಲ್ ಟೈಮ್ ಎಮಿಷನ್ ನ್ನು ಬಹಿರಂಗಪಡಿಸಬೇಕು. ಇದಕ್ಕಾಗಿ ಕಾರುಗಳ ಎಂಜಿನ್ ಗಳಲ್ಲಿ ಬದಲಾವಣೆ ಮಾಡುವ ಅನಿವಾರ್ಯತೆ ಇದೆ. ಈ ರೀತಿ ಇಂಜಿನ್ ನವೀಕರಣ ಅಂದ್ರೆ ಕಾರು ತಯಾರಿಕರಿಗೆ ದೊಡ್ಡ ಹೊಡೆತವೇ ಸರಿ. ಹಾಗಾಗಿ ಕೆಲವು ಮೋಟಾರ್ ಕಂಪನಿಗಳು ಡಿಸೇಲ್ ಎಂಜಿನ್ (Diesel Engine) ಮಾದರಿಯ ಕಾರ್ ಗಳ ತಯಾರಿಕೆಯನ್ನು ನಿಲ್ಲಿಸುತ್ತಿವೆ.
ಎಂಜಿನ್ ಬದಲಾವಣೆಯಂತಹ ದುಬಾರಿ ವೆಚ್ಚವನ್ನು ಭರಿಸಲು ಎಲ್ಲಾ ಕಂಪನಿಗಳಿಗೂ ಹೊರೆಯಾಗಬಹುದು. ಹಾಗಾಗಿ ಕೆಲವು ಕಾರ್ ಗಳ ಮಾರಾಟ ಏಪ್ರಿಲ್ 1 ರಿಂದ ರದ್ದುಪಡಿಸಲಾಗುವುದು. ಹಾಗಾಗಿ ಈಗಾಗಲೇ ಇರುವ ಕಾರ್ ಗಳ ಮೇಲೆ ಭಾರಿ ಡಿಸ್ಕೌಂಟ್ (Discount) ಘೋಷಿಸಿವೆ ಮೋಟಾರ್ ಕಂಪನಿಗಳು. ನೀವು ಕಾರ್ ಖರೀದಿಸಲು ಯೋಚನೆ ಮಾಡಿದ್ದರೆ ಇದಕ್ಕಿಂತ ಬೆಸ್ಟ್ ಸಮಯ ಮತ್ತೊಂದಿಲ್ಲ. ಹಾಗಾದರೆ ಯಾವ ಕಾರಿಗೆ ಎಷ್ಟು ಡಿಸ್ಕೌಂಟ್ ಸಿಗುತ್ತಿದೆ ನೋಡೋಣ.
ಹೋಂಡಾ ಕಾರುಗಳ ಮೇಲೆ 1.3 ಲಕ್ಷ ರೂ.ಗಳ ಡಿಸ್ಕೌಂಟ್:
ಹೋಂಡಾ ಮೋಟಾರ್ಸ್(Honda Motors) ತನ್ನ 5 ಕಾರುಗಳ ತಯಾರಿಕೆಯನ್ನು ಈ ತಿಂಗಳ ಕೊನೆಗೆ ನಿಲ್ಲಿಸಲಿದೆ. ಆ ಕಾರುಗಳೆಂದರೆ ಹೋಂಡಾ ಸಿಟಿ (Honda City) (4 ಮತ್ತು 5 ನೇ ತಲೆಮಾರಿನ ಕಾರು), ಅಮೇಜ್ (Amaze)(ಡೀಸೆಲ್ ರೂಪಾಂತರ), ಜಾಝ್ (Jazz)ಮತ್ತು ಡಬ್ಲ್ಯೂ-ವಿ (Wr-v). ಈ ಕಾರುಗಳ ಉತ್ವಾದನೆಯನ್ನು ಕಂಪನಿ ನಿಲ್ಲಿಸಿದೆ. ಹಾಗಾಗಿ ತನ್ನಲ್ಲಿ ಸ್ಟಾಕ್ ಇರುವ ಕಾರ್ ಗಳ ಮೇಲೆ ಬರೋಬ್ಬರಿ ರೂ 1.3 ಲಕ್ಷದವರೆಗೆ ರಿಯಾಯಿತಿ ನೀಡುತ್ತಿದೆ. ಸ್ಟಾಕ್ ಖಾಲಿಯಾಗುವವರೆಗಷ್ಟೇ ಈ ಡಿಸ್ಕೌಂಟ್ ಲಭ್ಯ.
ಹುಂಡೈ ಕಾರುಗಳ ಮೇಲೆ 1.25 ಲಕ್ಷ ರೂ.ಗಳ ಡಿಸ್ಕೌಂಟ್:
ಹುಂಡೈ (Hyundai Motors) ತನ್ನ ಡಿಸೇಲ್ ಮಾದರಿಯ ಕಾರ್ ಗಳಾದ ವೆರ್ನಾ (Verna) ಮತ್ತು ಅಲ್ಕಾಜರ್(Alcazar) ತಯಾರಿಕೆ ನಿಲ್ಲಿಸಿದ್ದು, ನೀವು ಸ್ಟಾಕ್ ಇರುವವರೆಗೆ ಈ ಕಾರ್ ಖರೀದಿ ಮಾಡಬಹುದು. ಮತ್ತು ಗ್ರಾಹಕರಿಗೆ ಈ ಕಾರ್ ಗಳ ಖರೀದಿಗೆ 1.25 ಲಕ್ಷ ರೂಪಾಯಿಗಳ ಪ್ರಯೋಜನ ಸಿಗಲಿದೆ.
ಮಹೀಂದ್ರಾ ಕಾರುಗಳ ಮೇಲೆ 70 ಸಾವಿರ ರೂ.ಗಳ ಡಿಸ್ಕೌಂಟ್:
ಮಹಿಂದ್ರಾ (Mahindra) ತನ್ನ ಮೂರು ವೇರಿಯೆಂಟ್ ಕಾರ್ ಗಳ ತಯಾರಿಕೆ ಸ್ಥಗಿತಗೊಳಿಸಲಿದ್ದು, ಆ ಕಾರ್ ಗಳ ಮೇಲೆ 70 ಸಾವಿರದಷ್ಟು ರಿಯಾಯಿತಿ ನೀಡುತ್ತಿದೆ. ಮರ್ರಾಝೋ (Marazzo), ಅಲ್ಟ್ರಸ್ ಜಿ 4 (Alturas g4) ಹಾಗೂ ಕೆಯುವಿ 100 (Kuv300), ಈ ಮೂರು ಕಾರ್ ಗಳ ಮೇಲೆ ಡಿಸ್ಕೌಂಟ್ ಪ್ರಯೋಜನ ಪಡೆಯಬಹುದು.
ಸ್ಕೋಡಾ ಕಾರ್ ಗಳ ಮೇಲೆ 55 ಸಾವಿರ ರೂಗಳ ಡಿಸ್ಕೌಂಟ್:
ಹೆಸರಾಂತ ಮೋಟಾರ್ ಕಂಪನಿ ಸ್ಕೋಡಾ (Skoda) ಕೂಡ ಆಕ್ಟೇವಿಯಾ (Octavia) ಮತ್ತು ಸೂಪರ್ಬ್ (Superb) ಕಾರುಗಳನ್ನು ತಯಾರಿಕೆ ಕೊನೆಗೊಳಿಸುತ್ತಿದೆ. ಹಾಗಾಗಿ ಈ ಎರಡೂ ಮಾದರಿಗಳ ಕಾರ್ ಮೇಲೆ ಕ್ರಮವಾಗಿ 55 ಸಾವಿರ ರೂ.ಗಳ ರಿಯಾಯಿತಿ ಘೋಷಿಸಿದೆ.
ಮಾರುತಿ (Maruti ) ಪ್ರಮುಖ ಕಾರ್ ಗಳ ಮೇಲೂ ಇದೆ ಡಿಸ್ಕೌಂಟ್ ಮಾರುತಿ ಕೆಲವು ಪ್ರಮುಖ ಕಾರ್ ಗಳ ತಯಾರಿಕೆಯನ್ನು ಸ್ಥಗಿತಗೊಳಿಸುತ್ತಿದೆ. ಅವುಗಳಲ್ಲಿ ಆಲ್ಟೊ 800(Alto 800), ಡಿಸೆಲ್ ರೂಪಾಂತರಿ ಟಾಟಾ ಆಲ್ಟ್ರೋಜ್ (Tata Altroz), ರೆನಾಲ್ಟ್ ಕ್ವಿಡ್ 800 (Renault kwid 800) ಮತ್ತು ನಿಸ್ಸಾನ್ ಕಿಕ್ಸ್ (Nissan Kicks) ಕಾರುಗಳ ತಯಾರಿಕೆ ನಿಲ್ಲಲಿದೆ. ಈ ಕಾರುಗಳ ಖರೀದಿಯ ಮೇಲೆ ಡಿಸ್ಕೌಂಟ್ ನೀಡಲಾಗುತ್ತಿದ್ದು, ಆಲ್ಟೊ 800 ಮೇಲೆ 40,000 ರೂ.ಗಳು, ಟಾಟಾ ಆಲ್ಟ್ರೊಜ್ ಡೀ000ಸೆಲ್ ಮೇಲೆ 28,ರೂ.ಗಳು, ರೆನಾಲ್ಟ್ ಕ್ವಿಡ್ 800 ಮೇಲೆ 52,000 ರೂ.ಗಳು ಹಾಗೂ ನಿಸ್ಸಾನ್ ಕಿಕ್ಸ್ ಮೇಲೆ 82,000ರೂ.ಗಳ ಭರ್ಜರಿ ಡಿಸ್ಕೌಂಟ್ ಪಡೆಯಬಹುದಾಗಿದೆ.
ಈ ಮೇಲಿನ ಎಲ್ಲಾ ಕಾರ್ ಗಳ ಸ್ಟಾಕ್ ಇರುವವರೆಗೂ ಮಾತ್ರ ಈ ಡಿಸ್ಕೌಂಟ್ ಗಳು ಅನ್ವಯವಾಗುತ್ತವೆ ಎಂಬುದನ್ನು ಗಮನಿಸಿ