ಸರ್ಕಾರ ದೇಶದಲ್ಲಿ ಪ್ರತಿಯೊಬ್ಬರನ್ನೂ ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತರುತ್ತವೆ. ಅದೇ ರೀತಿಯಾಗಿ ಕೇಂದ್ರ ಸರ್ಕಾರ ರೈತರ ಶ್ರೇಯೋಭಿವೃದ್ಧಿಗೂ ಕೂಡ ಬಹುವಾಗಿ ಶ್ರಮಿಸುತ್ತಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸೇರಿದಂತೆ ರೈತರಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರು ಕೇವಲ 55 ರೂಪಾಯಿಗಳನ್ನು ಹೂಡಿಕೆ ಮಾಡಿ ಪ್ರತಿ ತಿಂಗಳು ರೂ. 3000ಗಳ ವರೆಗೆ ಪಿಂಚಣಿ ಪಡೆಯಬಹುದು. ಅದುವೇ ಪಿಎಂ ಕಿಸಾನ್ ಮಂಧನ್ ಯೋಜನೆ (PM Kisan Mandhan Yojana).
ಪಿಎಂ ಕಿಸಾನ್ ಮಂಧನ್ ಯೋಜನೆ:
ಇದು ರೈತರಿಗೆ ಪಿಂಚಣಿ ವ್ಯವಸ್ಥೆಯನ್ನು ಒದಗಿಸುವ ಯೋಜನೆಯಾಗಿದೆ. ರೈತರ ಭದ್ರತೆಗಾಗಿ ಭವಿಷ್ಯಕ್ಕಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ರೈತರು ತಮ್ಮ ವೃದ್ದಾಪ್ಯದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ರೈತರಿಗೆ 60 ವರ್ಷ ವಯಸ್ಸಿನ ನಂತರ ಪಿಂಚಣಿ ಪಡೆಯಲು ಈ ಯೋಜನೆ ಸಹಕಾರಿಯಾಗಲಿದೆ. 18-40 ವರ್ಷದೊಳಗಿನ ರೈತರು ಯೋಜನೆಗೆ ಪ್ರೀಮಿಯಂ ಆರಂಭಿಸಬಹುದು. ಈ ಯೋಜನೆ ಇತರ ಯೋಜನೆಯಂತಲ್ಲ, ಇದರ ಪ್ರೀಮಿಯಂ ದರವು ತುಂಬಾ ಕಡಿಮೆ ಇರುತ್ತದೆ. ತಿಂಗಳಿಗೆ ಕೇವಲ 55 ರೂಪಾಯಿ ಠೇವಣಿ ಇಟ್ಟರೆ ರೈತ ತನ್ನ 60ಮೇ ವರ್ಷಕ್ಕೆ ತಿಂಗಳಿಗೆ 3 ಸಾವಿರ ಪಿಂಚಣಿ ಪಡೆಯಬಹುದು.
ಯೋಜನೆ ಲಾಭ?
ಈ ಯೋಜನೆಯಲ್ಲಿ, ರೈತನಿಗೆ ವಯಸ್ಸು 60 ಆದ ಕೂಡಲೇ ಅವನ ಬ್ಯಾಂಕ್ ಖಾತೆಗೆ ಮೂರು ಸಾವಿರ ರೂಪಾಯಿಗಳು ಬರಲು ಆರಂಭವಾಗುತ್ತದೆ. ಈ ಯೋಜನೆಯಲ್ಲಿ ರೈತನಿಗೆ ವಾರ್ಷಿಕ ಪಿಂಚಣಿಯಾಗಿ 36,000 ರೂ. ಸಿಗುತ್ತದೆ. ಒಂದು ವೇಳೆ ವಿಮಾದಾರ ರೈತ ಸತ್ತರೆ, ಅವನ ನಾಮಿನಿಗೆ ಅರ್ಧದಷ್ಟು ಪಿಂಚಣಿ ಸಿಗುತ್ತದೆ.