FD Interest Rate: ಈ ಬ್ಯಾಂಕುಗಳಲ್ಲಿ ಹಣ ಇಟ್ಟವರ FD ದರ ಹೆಚ್ಚಳ

Advertisement
ಕಳೆದ ತಿಂಗಳಷ್ಟೆ ಖಾಸಗಿ ವಲಯದ ಬ್ಯಾಂಕ್ (Bank) ಐಸಿಐಸಿಐ (ICICI) ಬೃಹತ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿತ್ತು. ಹೌದು ಬ್ಯಾಂಕ್ 2 ಕೋಟಿ ರೂ ನಿಂದ 5 ಕೋಟಿ ರೂವರೆಗಿನ ಎಫ್‌ಡಿ (FD) ಮೇಲಿನ ಬಡ್ಡಿಯನ್ನು ಹೆಚ್ಚಳ ಮಾಡಿದ್ದು ಫೆಬ್ರವರಿ 7 ರಂದು ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿತ್ತು. ನಂತೆ ತಿಂಗಳ ಅಂತ್ಯದಲ್ಲಿ ಮತ್ತೆ ಬಡ್ಡಿ ಏರಿಕೆ ಮಾಡಿರುವ ಐಸಿಐಸಿಐ ಬ್ಯಾಂಕ್ ಬಲ್ಕ್ ಎಫ್‌ಡಿಗಳ (Bulk FD) ಮೇಲಿನ ಬಡ್ಡಿಯನ್ನು ಗರಿಷ್ಠ ಶೇ.0.25 ರವರೆಗೆ ಹೆಚ್ಚಿಸಿದೆ. ಹೌದು ಪರಿಷ್ಕೃತ ಬಡ್ಡಿದರಗಳ ಅನ್ವಯ ಐಸಿಐಸಿಐ ಬ್ಯಾಂಕ್‌ನಲ್ಲಿ 7 ದಿನಗಳಿಂದ 10 ವರ್ಷಗಳವರೆಗೆ FDಗಳ ಮೇಲೆ ಶೇ. 4.75 ರಿಂದ 7.15 ರಷ್ಟು ಬಡ್ಡಿಯನ್ನು ನೀಡುತ್ತಿದ್ದು ಮೊದಲು ಬ್ಯಾಂಕಿನ ಆರಂಭಿಕ ಬಡ್ಡಿ ಶೇ. 4.50 ಆಗಿತ್ತು. ಸದ್ಯ ಇದೀಗ ಶೇ.0.25ರಷ್ಟು ಹೆಚ್ಚಿಸಲಾಗಿದೆ. ಬ್ಯಾಂಕ್ 15 ತಿಂಗಳ FD ಯಲ್ಲಿ ಶೇ.7.15 ರಷ್ಟು ಹೆಚ್ಚಿನ ಬಡ್ಡಿ ದರ ನೀಡುತ್ತಿದೆ.
Advertisement
ಈ ಬೆನ್ನಲ್ಲೇ ಇದೀಗ ಎಚ್‌ಡಿಎಫ್‌ಸಿ (HDFC) ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahendra Bank) ತನ್ನ ಫಿಕ್ಸಿಡ್ ಡೆಪಾಸಿಟ್ (FD) ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದ್ದು ಎಚ್‌ಡಿಎಫ್‌ಸಿ ಬ್ಯಾಂಕ್ ಸುಮಾರು 2 ರಿಂದ 5 ಕೋಟಿ ರೂಪಾಯಿ ಎಫ್‌ಡಿ ಮೇಲಿನ ಬಡ್ಡಿದರ ಏರಿಸಿದೆ.
ಇದರಿಂದಾಗಿಬಸಾಮಾನ್ಯ ನಾಗರಿಕರಿಗೆ ವಾರ್ಷಿಕ ಎಫ್‌ಡಿ ಬಡ್ಡಿದರವು ಶೇಕಡ 4.75ರಿಂದ ಶೇಕಡ 7.00ರ ನಡುವೆ ಇರುವುದು ವಿಶೇಷ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರಿಗೆ ಶೇಕಡ 5.25ರಿಂದ ಶೇಕಡ 7.75ರ ನಡುವೆ ಎಫ್‌ಡಿ ಬಡ್ಡಿದರವಿದ್ದುನ ಕೋಟಕ್ ಮಹೀಂದ್ರಾ ಬ್ಯಾಂಕ್ ಸಹ ಎಫ್‌ಡಿ ಬಡ್ಡಿದರ ಹೆಚ್ಚಿಸಿದೆ. 180 ದಿನಗಳ ಸ್ಥಳೀಯ ಟರ್ಮ್ ಡೆಪಾಸಿಟ್ (Tearm Deposit) ಬಡ್ಡಿದರ 50 ಮೂಲಾಂಕ ಅಥವಾ ಶೇಕಡ 6ರಿಂದ ಶೇಕಡ 6.50ಕ್ಕೆ ಏರಿಸಿದೆ. ಅಲ್ಲದೇ ಹಿರಿಯ ನಾಗರಿಕರು ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಹೆಚ್ಚುವರಿ 50 ಬಿಪಿಎಸ್ ಪಡೆಯಬಹುದಾಗಿದ್ದು ಶೇ.7ರವರೆಗೆ ಬಡ್ಡಿದರ ಇರಲಿದೆ.
ಸದ್ಯ ಈಗಾಗಲೇ ಐಸಿಐಸಿಐ ಬ್ಯಾಂಕ್ ಸೇರಿದಂತೆ ಆಕ್ಸಿಸ್ ಬ್ಯಾಂಕ್ (Axis Bank) ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಫ್‌ಡಿ ಬಡ್ಡಿದರ ಹೆಚ್ಚಿಸಿದೆ. ಇನ್ನು ಮುಂದಿನ ಎಂಪಿಸಿ (MPC9 ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣದುಬ್ಬರವನ್ನು ಇನ್ನಷ್ಟು ನಿಯಂತ್ರಣಕ್ಕೆ ತರುವ ಪ್ರಯತ್ನದಲ್ಲಿ ರೆಪೋ ದರವನ್ನು ಕೂಡ ಮತ್ತೆ 25 ಮೂಲಾಂಕ ಹೆಚ್ಚಿಸುವ ಸಾಧ್ಯತೆಯಿದ್ದು ಇದಾದ ನಂತರವೂ ಕೂಡ ಹಲವಾರು ಬ್ಯಾಂಕ್‌ಗಳು ಬಡ್ಡಿದರ ಏರಿಸಬಹುದು. ಆದುದರಿಂದಾಗಿ ಹೂಡಿಕೆದಾರರು ಪ್ರಸ್ತುತ ದೀರ್ಘಾವಧಿಯ ಎಫ್‌ಡಿ ಹೂಡಿಕೆಯನ್ನು ಆಯ್ಕೆಮಾಡಿಕೊಳ್ಳುವುದು ಬಹಳ ಉತ್ತಮ ಎಂದು ತಜ್ಞರ ಅಭಿಪ್ರಾಯ.
Advertisement