ದೇಶದಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಇದು ಖುಷಿಯ ವಿಚಾರ. ಪಡಿತರ ಚೀಟಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹೊಸ ಸೌಲಭ್ಯವನ್ನು ನೀಡುವ ಭರವಸೆ ಸಿಕ್ಕಿದೆ. ಇನ್ನು ಮುಂದೆ ಉಚಿತ ರೇಶನ್ ಜೊತೆಗೆ ಪಡಿತರ ಚೀಟಿದಾರರಿಗೆ ಆರ್ಥಿಕ ನೆರವು ಕೂಡ ನೀಡಲಿದೆ ಸರ್ಕಾರ. ಪಡಿತರ ಚೀಟಿದಾರರಿಗೆ ಉಚಿತ ರೇಶನ್ ಜೊತೆಗೆ 1000 ರೂಪಾಯಿಗಳನ್ನೂ ಒದಗಿಸಲಿದೆ ಸರ್ಕಾರ.
ಮಹಿಳಾ ದಿನಾಚರಣೆಯಂದೇ ಘೋಷಣೆ:
ರಾಜ್ಯ ಸರ್ಕಾರ ಈ ಘೋಷಣೆಯನ್ನು ಮಾಡಿದೆ. ಹೌದು, ತಮಿಳುನಾಡು ಮುಖ್ಯಮಂತ್ರಿ ಈ ಘೋಷಣೆಯನ್ನು ಇಲೆಕ್ಷನ್ ಪ್ರಚಾರದ ವೇಳೆ ತಿಳಿಸಿದ್ದಾರೆ. ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರನ್ನು ಗೌರವಿಸಲು ರಾಜ್ಯದ ಮಹಿಳೆಯರಿಗೆ 1000 ರೂ. ನೀಡುವುದಾಗಿ ತಿಳಿಸಿದ್ದಾರೆ.
ಜೂನ್ ತಿಂಗಳಿನಿಂದ ಸಿಗಲಿ ಸಾವಿರ ರೂಪಾಯಿ:
ಅಧಿಕೃತ ಮಾಹಿತಿ ಪ್ರಕಾರ, ಜೂನ್ 3 ರಿಂದ ಪಡಿತರ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಪಡಿತರ ಸೌಲಭ್ಯದ ಜೊತೆಗೆ ಸಾವಿರ ರೂ. ಗಳೂ ಕೂಡ ಸಿಗಲಿದೆ. ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಜನ್ಮದಿನದಿಂದಲೇ ಈ ಯೋಜನೆಗೆ ನಾಂದಿ ಹಾಡಲಿದೆ ಸರ್ಕಾರ. ಈ ಸೌಲಭ್ಯವು 35 ಕೆಜಿ ಅಕ್ಕಿ ಪಡೆಯುತ್ತಿರುವ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಿಗುತ್ತದೆ.
ಹರಿಯಾಣದಲ್ಲೂ ಜಾರಿ:
ಪಡಿತರ ಚೀಟಿದಾರರಿಗೆ ಕೇಂದ್ರ ಹಾಗೂ ಹಲವು ರಾಜ್ಯ ಸರ್ಕಾರಗಳಿಂದ ಹಲವು ಸೌಲಭ್ಯಗಳನ್ನು ಈಗಾಗಲೇ ನೀಡಲಾಗುತ್ತಿದೆ. ಬಿಪಿಎಲ್ ಪಡಿತರ ಚೀಟಿದಾರರು ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 2 ಲೀಟರ್ ಸಾಸಿವೆ ಎಣ್ಣೆಯನ್ನು ಉಚಿತವಾಗಿ ನೀಡುವುದಾಗಿ ಹರಿಯಾಣ ಸರ್ಕಾರ ಘೋಷಿಸಿತ್ತು. ಅಲ್ಲದೇ ಸಾರ್ವಜನಿಕರಿಗೆ 250 ರೂಪಾಯಿ ಆರ್ಥಿಕ ನೆರವು ಕೂಡ ಸರ್ಕಾರ ನೀಡಿತ್ತು. ಈ ಹಣವನ್ನು ಈಗ ರೂ.300ಕ್ಕೆ ಏರಿಸಲು ಹರಿಯಾಣ ಸರ್ಕಾರ ನಿರ್ಧರಿಸಿದೆ.