ಯಸ್ ಅಂದ ಹಾಗೆ ಈ ಹಿಂದೆಯೇ ಹಾಲ್ ಮಾರ್ಕ್(Hallmark) ಇಲ್ಲದ ಚಿನ್ನಕ್ಕೆ ನಿಷೇಧವನ್ನ ಹೊಡ್ದಿದ್ದು ನಿಮಗೆಲ್ಲ ಗೊತ್ತೇ ಇದೆ.2021ರಲ್ಲೇ ಸರ್ಕಾರ ಈ ಕುರಿತು ಕಡ್ಡಾಯವಾಗಿ ಆದೇಶವನ್ನ ನೀಡಿತ್ತು.ಇದಕ್ಕೆ ಕುರಿತಂತೆ ಎಫ್ರಿಲ್ 1ರಿಂದ ಈ ಆದೇಶವನ್ನ ಪಾಲಿಸಬೇಕಾಗಿ ಸರ್ಕಾರ ಮತ್ತೊಮ್ಮೆ ಹೆಚ್ಚರಿಸುವ ಮೂಲಕ, ವಡವೆ ಅಂಗಡಿಯವರಿಗೆ ಖಡಕ್ ಆದೇಶ ನೀಡಿದೆ.
ಅಕ್ರಮ ಮಾರಾಟ ತಡೆಯಲು ಮತ್ತು ಪ್ರತೀ ಚಿನ್ನದ ಗುಣಮಟ್ಟ ಕಾಪಾಡಲು ಹಾಗು ಒಡವೆಯನ್ನೂ ಟ್ರೇಸ್(Trace) ಮಾಡಲು ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ.ಆದರೆ ಇದರ ಮದ್ಯೆ ಹಳೆಯ ಒಡವೆ ಮಾರಬೇಕೆನ್ನುವ ಜನಸಾಮಾನ್ಯರೂ ಮಾಡಬೇಕಾದದ್ದು ಇಷ್ಟು. ಹಳೆಯ ಒಡವೆಗಳಿಗೆ ಹಾಲ್ ಮಾರ್ಕ್ ಇರುವುದು ತುಂಬಾ ಕಡಿಮೆ,ಆದರೂ ಭಯ ಪಡೋಹಾಗೆ ಇಲ್ಲ ಹಾಲ್ಮಾರ್ಕ್ ಸೆಂಟರ್ (Hallmark Centre) ಗಳಿಗೆ ಹೋಗಿ ಒಡವೆಯ ಶುದ್ಧತೆಯ ಪರೀಕ್ಷೆ ಮಾಡಿಸಿಕೊಂಡು ನಂತರ ಅದನ್ನು ಮಾರಬಹುದು. ಈ ಹಳೆಯ ಒಡವೆಯನ್ನು ಕೊಳ್ಳುವ ಒಡವೆ ಅಂಗಡಿಯವರು ಈ ಚಿನ್ನವನ್ನು ಕರಗಿಸಿ ಹೊಸ ಒಡವೆ ಮಾಡಿ ಅದಕ್ಕೆ ಹಾಲ್ ಮಾರ್ಕ್ ಸರ್ಟಿಫಿಕೇಶನ್ (Certification) ಮಾಡಿಸಬೇಕಾಗುತ್ತದೆ.