ಇಂದು ಜಗತ್ತೇ ನಮ್ಮ ಕೈಯಲ್ಲಿದೆ. ಕೈನಲ್ಲಿ ಸ್ಮಾರ್ಟ್ ಫೊನ್ ಇದ್ರೆ ಸಾಕು ಅದರಲ್ಲಿ ಜಗತ್ತಿನ ಮಾಹಿತಿಯೇಲ್ಲಾ ಸಿಕ್ಕಿಬಿಡುತ್ತದೆ. ಇನ್ನು ಯಾರ ಬಳಿಯೂ ನೇರವಾಗಿ ಮಾತನಾಡುವ ಅಗತ್ಯವೇ ಇಲ್ಲ ಒಂದು ಎಸ್ ಎಂ ಎಸ್ ಕಳುಹಿಸಿದರೆ ಸಾಕು. ಅಂದಹಾಗೆ ನೀವು ಯಾರಿಗಾದರೂ ಸಂದೇಶ ಕಳಿಹಿಸುವಾಗ, ಮೊಬೈಲ್ ಹಿಡಿದು ಎಸ್ ಎಂ ಎಸ್ ಟೈಪ್ ಮಡುವಾಗ ವಿಶ್ವದ ಮೊದಲ ಟೆಕ್ಸ್ಟ್ ಮೆಸೇಜ್ ಯಾವುದಿರಬಹುದು ಅಂತ ಯೋಚಿಸಿದ್ದೀರಾ? ನಿಮಗೆ ಉತ್ತರ ಗೊತ್ತಿಲ್ಲದೇ ಇದ್ರೆ ನಾವು ಹೇಳ್ತೀವಿ ಕೇಳಿ.
ಸುಮಾರು 31 ವರ್ಷಗಳ ಹಿಂದೆ, ಅಂದರೆ 3ನೇ ಡಿಸೆಂಬರ್ 1992 ರಂದು ‘ಮೆರ್ರಿ ಕ್ರಿಸ್ಮಸ್’ ಎಂದು ಬರೆದ ಮೆಸೇಜ್ ವಿಶ್ವದ ಮೊದಲ ಮೆಸೇಜ್ ಆಗಿತ್ತು. 15 ಅಕ್ಷರಗಳ ಈ ಸಂದೇಶವನ್ನು ನೀಲ್ ಪ್ಯಾಪ್‌ವರ್ತ್ ಎನ್ನುವವರು ವೊಡಾಫೋನ್‌ನ ನೆಟ್‌ವರ್ಕ್ ಮೂಲಕ ಈ ಸಂದೇಶವನ್ನು ಸ್ವೀಕರಿಸುತ್ತಾರೆ. ಅವರಿಗೆ ಈ ಸಂದೇಶ ಕಳುಹಿಸಿದ್ದು ವೊಡಾಫೋನ್ ಉದ್ಯೋಗಿ ರಿಚರ್ಡ್ ಜಾರ್ವಿಸ್.
ಬ್ರಿಟಿಷ್ ಪ್ರೋಗ್ರಾಮರ್ ನಿಂದ ಮೊದಲ SMS:
22 ವರ್ಷದ ಬ್ರಿಟಿಷ್ ಪ್ರೋಗ್ರಾಮರ್ ನೀಲ್ ಪ್ಯಾಪ್ ವರ್ತ್ ಕಂಪ್ಯೂಟರ್ ನಿಂದ ಮೊದಲ ಕಿರು ಸಂದೇಶವನ್ನು ಕಳುಹಿಸುತ್ತಾರೆ. ಅಲ್ಲಿಂದ ಆಧುನಿಕ ಸಂದೇಶ ಕಳುಹಿಸುವಿಕೆ ಆರಂಭವಾಗುತ್ತದೆ., 2017 ರಲ್ಲಿ, ನೀಲ್ ಪ್ಯಾಪ್‌ವರ್ತ್, ‘1992 ರಲ್ಲಿ, ಈ ಟೆಕ್ಸ್ಟ್ ಮೆಸೇಜ್ ಗಳು ಇಷ್ಟು ಜನಪ್ರಿಯವಾಗುತ್ತವೆ ಹಾಗೂ ಲಕ್ಷಾಂತರ ಜನ ಬಳಸುವ ಎಮೋಜಿ ಮತ್ತು ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳಿಗೆ ಇದು ಮುನ್ನುಡಿಯಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ’. ಎಂದಿದ್ದರು.
ಎನ್‌ಎಫ್‌ಟಿ ಮೂಲಕ ಮಾರಾಟವಾದ World’s First SMS:
ಬ್ರಿಟಿಷ್ ಟೆಲಿಕಾಂ ಕಂಪನಿ ವೊಡಾಫೋನ್ ಕಳೆದ ವರ್ಷ ಮೊದಲ ಎಸ್‌ಎಂಎಸ್ ಅನ್ನು ಎನ್‌ಎಫ್‌ಟಿಯಾಗಿ ಹರಾಜು ಹಾಕಿತ್ತು. ಈ ಐತಿಹಾಸಿಕ ಎಸ್ ಎಂ ಎಸ್ ನ್ನು ಡಿಜಿಟಲ್ ರಸೀದಿ ಎನ್ ಎಫ್ ಟಿಯಾಗಿ ಮರುಸೃಷ್ಟಿಸಲಾಗಿದೆ. ಸಾಂಪ್ರದಾಯಿಕ ಟೆಕ್ಸ್ಟ್ ಸಂದೇಶವನ್ನು ಪ್ಯಾರಿಸ್‌ನಲ್ಲಿರುವ ಅಗುಟ್ಸ್ ನ ಹರಾಜು ಮನೆ (Auction House) ಮೂಲಕ ಹರಾಜು ಮಾಡಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಪಠ್ಯ ಸಂದೇಶದವನ್ನು ಈಥರ್ ಕ್ರಿಪ್ಟೋಕರೆನ್ಸಿ ಮೂಲಕ ಖರೀದಿಸಿದ್ದಾರೆ.