ಮಾರ್ಚ್ 8 2023ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗಿದೆ. ಈ ಸಮಯದಲ್ಲಿ ಮಹಿಳೆಗೆ ಗೌರವ ನೀಡುವ ಸಲುವಾಗಿ ದೇಶದಲ್ಲಿಯೂ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಜೊತೆಗೆ ಕೆಲವು ಬ್ಯಾಂಕ್ ಗಳು ಕೂಡ ಮಹಿಳಾ ಹೂಡಿಕೆದಾರರಿಗೆ ಅನುಕೂಲವಾಗುವಂಥ ಯೋಜನೆಯನ್ನು ಕೂಡ ಜಾರಿಗೆ ತಂದಿದ್ದಾರೆ.
ಸಾಮಾನ್ಯವಾಗಿ ಯಾವುದೇ ವಿಶೇಷ ಸಂದರ್ಭದಲ್ಲಿ ನಮ್ಮ ಪ್ರೀತಿ ಪಾತ್ರರಿಗೆ ಶುಭಾಶಯವನ್ನು ಕೋರುತ್ತೇವೆ. ಜೊತೆಗೆ ಅವರಿಗೆ ಇಷ್ಟವಾಗುವಂತಹ ಗಿಫ್ಟ್ ಕೂಡ ನೀಡುತ್ತೇವೆ ನೀವು ನಿಮ್ಮ ಮೆಚ್ಚಿನ ಮಹಿಳೆಗೆ ಏನಾದರೂ ಉಡುಗೊರೆ ಕೊಡಲು ಬಯಸಿದ್ದರೆ ಅವರ ಹೆಸರಿನಲ್ಲಿ ಒಂದು ಎಫ್ ಡಿ ಖಾತೆ ತೆರೆಯಬಹುದು. ಯಾಕೆಂದರೆ ಕೆಲವು ಬ್ಯಾಂಕುಗಳು ಮಹಿಳಾ ಹೂಡಿಕೆದಾರರ ಎಫ್ ಡಿ ಖಾತೆ ಮೇಲೆ ಬಡ್ಡಿ ದರವನ್ನು ಹೆಚ್ಚಿಸಿದೆ. ಕೆಲವು ಹಣಕಾಸು ಸಂಸ್ಥೆಗಳು ಹಾಗೂ ಹೌಸಿಂಗ್ ಫೈನಾನ್ಸ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಅವರ ಎಫ್ ಡಿ ಠೇವಣಿಯ ಮೇಲೆ ಹಾಗೂ ಆರ್ ಡಿ ಮೇಲೆ ವಿಶೇಷ ಬಡ್ಡಿದರ ಘೋಷಣೆ ಮಾಡಲಾಗಿದೆ.
ಮಹಿಳಾ ದಿನವನ್ನು ನೀವು ಆಚರಿಸಿದರೆ ನಿಮ್ಮ ಮಹಿಳೆಗೆ ಈ ಒಂದು ಗಿಫ್ಟ್ ನೀಡಿ. ಎಫ್ ಡಿ ಮೂಲಕ ಠೇವಣಿ ಇಟ್ಟು ಅಧಿಕ ಬಡ್ಡಿದರ ಸಿಗುವಂತೆ ಮಾಡಬಹುದು. ಮಹಿಳೆಯರ ಎಫ್ ಡಿ ಮೇಲೆ ಅಧಿಕ ಬಡ್ಡಿದರ ನೀಡುತ್ತಿರುವ ಬ್ಯಾಂಕುಗಳು ಯಾವುವು ನೋಡೋಣ.
ಇಂಡಿಯನ್ ಬ್ಯಾಂಕ್: ಇಂಡ್ ಸೂಪರ್ 400 ಡೇಸ್ ಎಂಬ ವಿನೂತನವಾದ ಎಫ್ ಡಿ ಯೋಜನೆಯನ್ನು ಜಾರಿ ಮಾಡಿದ್ದು 60 ವರ್ಷಕ್ಕಿಂತ ಒಳಗಿನ ಮಹಿಳೆಯರು ಎಫ್ ಡಿ ಠೇವಣಿ ಇಟ್ಟರೆ ಅವರಿಗೆ ಶೇಕಡ 7.15 ರಷ್ಟು ಬಡ್ಡಿ ದರ ನೀಡಲಾಗುತ್ತದೆ. ಅದೇ ರೀತಿಯಾಗಿ ಹಿರಿಯ ನಾಗರಿಕರಿಗೆ 7.60 ಶೇಕಡ ಹಾಗೂ ಅತಿ ಹಿರಿಯ ನಾಗರಿಕರಿಗೆ 7.90% ಬಡ್ಡಿ ದರ ಮೀಸಲಾಗಿದೆ. ಅದೇ ರೀತಿ 400 ದಿನಗಳವರೆಗೆ ಫಿಕ್ಸೆಡ್ ಡೆಪಾಸಿಟ್ ಇದ್ದರೆ ಸಾಮಾನ್ಯ ಜನರಿಗೆ 7.10 ರಷ್ಟು ಶೇಕಡಾ ಬಡ್ಡಿದರ ಸಿಗುತ್ತದೆ.
ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್: ಬಿ ಎ ಬಿ ಬ್ಯಾಂಕ್ ಗೃಹಲಕ್ಷ್ಮಿ ಎಫ್ ಡಿ ಯೋಜನೆಯನ್ನು ಆರಂಭಿಸಿದೆ. ಇದರಲ್ಲಿ 60 ವರ್ಷಕ್ಕಿಂತ ಕೆಳಗಿನ ಮಹಿಳೆಯರಿಗೆ ಆಫ್ ಲೈನ್ ಹೂಡಿಕೆಗೆ 6.65% ಹಾಗೂ ಆನ್ಲೈನ್ ಹೂಡಿಕೆಗೆ 6.90 ಶೇಕಡಾ ಬಡ್ಡಿದರ ಸಿಗುತ್ತದೆ. ಇನ್ನು ಹಿರಿಯ ಮಹಿಳಾ ನಾಗರಿಕರಿಗೆ ಆಫ್ಲೈನ್ ಹೂಡಿಕೆಯ ಮೇಲೆ 7.15% ಹಾಗೂ ಆನ್ಲೈನ್ ಹೂಡಿಕೆ ಮೇಲೆ 7.40 ಶೇಕಡಾ ಬಡ್ಡಿದರ ಕೊಡಲಾಗುತ್ತದೆ. ಇನ್ನು ಈ ಎಫ್ ಡಿ ಯೋಜನೆಯ ಮೆಚುರಿಟಿ ಅವಧಿ 551 ದಿನಗಳು.
ಶ್ರೀರಾಮ್ ಫೈನಾನ್ಸ್ ಸಂಸ್ಥೆ: ಇದರಲ್ಲಿಯೂ ಕೂಡ ಎಫ್ ಡಿ ಹೂಡಿಕೆಯ ಮೇಲೆ ಬಡ್ಡಿದರ ಹೆಚ್ಚಿಸಲಾಗಿದೆ. ಮಹಿಳಾ ಹೂಡಿಕೆದಾರರಿಗೆ ಪುರುಷರಿಗಿಂತ 0.10% ಹೆಚ್ಚಿನ ಬಡ್ಡಿದರ ಮೀಸಲಾಗಿದೆ. ಅದೇ ರೀತಿ ಹಿರಿಯ ನಾಗರಿಕರಿಗೆ ಶೇಕಡಾ 0.60ರಷ್ಟು ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದೆ.
Mahila Samman Savings Certificate:
2023ರ ಬಜೆಟ್ ನಲ್ಲಿ ಹೊಸ ಸಣ್ಣ ಉಳಿತಾಯ ಯೋಜನೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಯೋಜನೆಯಲ್ಲಿ ಮಹಿಳೆಯರು 2 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಿದರೆ 7.50% ರಷ್ಟು ಬಡ್ಡಿಯನ್ನು ಪಡೆದುಕೊಳ್ಳಬಹುದು. ಈ ಯೋಜನೆಯನ್ನು ಅಂಚೆ ಕಛೇರಿಯಲ್ಲಿ ನೀವು ಆರಂಭಿಸಬಹುದು. ಇನ್ನು ಯಾವುದೇ ವಯೋಮಿತಿಯ ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.