S. S. Rajamouli: RRR ಚಿತ್ರದ ರಾಜಮೌಳಿ ಬಗ್ಗೆ ಕೇಳಿಬಂತು ಹೊಸ ಆರೋಪ, ಚಿತ್ರರಂಗ ತಲ್ಲಣ.

Advertisement
ಇತ್ತೀಚೆಗಷ್ಟೆ ರವೀಂದ್ರ ಭಾರತಿಯಲ್ಲಿ (Raveendra Bharati) ನಡೆದಂತಹ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಹಿರಿಯ ಸಿನಿಮಾ ನಿರ್ದೇಶಕ (Movie Director) ಮತ್ತು ನಿರ್ಮಾಪಕ (Producer) ತಮ್ಮಾರೆಡ್ಡಿ ಭಾರದ್ವಾಜ (Tamma Reddy Bharadhwaj) ಅವರಿಗೆ ಸಿನಿಮಾ ನಿರ್ಮಾಣವು ಹೇಗೆ ಬದಲಾಗಿದೆ ಎಂಬ ಪ್ರಶ್ನೆ ಎದುರಾಯಿತು. ಇನ್ನು ಇದಕ್ಕೆ ಉತ್ತರಿಸಿದ ಅವರು ರಾಜಮೌಳಿಯವರ (S. S. Rajamouli) ಆರ್‌ಆರ್‌ಆರ್ (RRR) ಸಿನಿಮಾದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಹೌದು ಆಸ್ಕರ್ ಕ್ಯಾಂಪೇನ್‌ಗಾಗಿ ತ್ರಿಬಲ್ ಆರ್ ಸಿನಿಮಾ ತಂಡವು ಬರೋಬ್ಬರಿ 80 ಕೋಟಿ ರೂ. ಖರ್ಚು ಮಾಡಿದೆ. ಆ 80 ಕೋಟಿ ರೂ.ಗಳನ್ನು ಕೊಟ್ಟರೆ 8 ಸಿನಿಮಾ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಸದ್ಯ ತಮ್ಮಾರೆಡ್ಡಿ ಯವರ ಈ ಹೇಳಿಕೆ ದೇಶಾದ್ಯಂತ ಭಾರಿ ವೈರಲ್ ಆಗುತ್ತಿದ್ದು ಇದರ ಬಗ್ಗೆ ಪರ-ವಿರೋಧ ಚರ್ಚೆಗಳು ಕೂಡ ಆರಂಭವಾಗಿವೆ.
ಇನ್ನು ತಮ್ಮಾರೆಡ್ಡಿ ಅವರು 90ರ ದಶಕದಲ್ಲಿ ನಿರ್ದೇಶಕರಾಗಿ ಹಲವು ಚಿತ್ರಗಳನ್ನು ಮಾಡಿದ್ದು ಶಿವ ಶಕ್ತಿ ಪಚನಿ ಸಂಸಾರಂ ಊರ್ಮಿಳಾ ವೇಟಗಾಡು ಸ್ವರ್ಣಮುಖಿ ಎಂಥಾ ಬಾಗುಂದೋ ಪೋತೆ ಪೋನಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪ್ರತಿಘಟನ ಅವರು ನಿರ್ದೇಶನದ ಕೊನೇ ಸಿನಿಮಾವಾಗಿದೆ. ಇನ್ನು ತ್ರಿಬಲ್ ಆರ್ ಚಿತ್ರ ಸುಮಾರು 500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು ಸುಮಾರು 1200 ಕೋಟಿ ರೂ.ಗಳವರೆಗೂ ಕೂಡ ಕಲೆಕ್ಷನ್ ಮಾಡಿದೆ. ಈಗ ಆಸ್ಕರ್ ಅಂಗಳಕ್ಕೂ ಕೂಡ ಎಂಟ್ರಿ ಕೊಟ್ಟಿದ್ದು ಅಂದಹಾಗೆ ಭಾರತ ಸರ್ಕಾರ (Indian Govt) ಆರ್‌ಆರ್‌ಆರ್ ಸಿನಿಮಾವನ್ನು ಅನ್ನು ಆಸ್ಕರ್‌ಗೆ (Oscar) ಕಳುಹಿಸಿರಲಿಲ್ಲ.
Advertisement
ಹೌದು ಬದಲಿಗೆ ರಾಜಮೌಳಿ ಮತ್ತು ಅವರ ತಂಡ ಭಾರಿ ಕ್ಯಾಂಪೇನ್‌ಗಳನ್ನು ಮಾಡಿ ಸಾಕಷ್ಟು ಹಣವನ್ನು ಖರ್ಚು ಮಾಡಿ ಅಮೆರಿಕದ (America) ವಿತರಕರ ಮೂಲಕ ಆಸ್ಕರ್ ನಾಮನಿರ್ದೇಶನಕ್ಕೆ ಆರ್‌ಆರ್‌ಆರ್ ಸಿನಿಮಾವನ್ನು ಕಳುಹಿಸಲಾಗಿದೆ. ಇನ್ನು ಇತ್ರೀಚಿಗಷ್ಟೇ ಹಾಲಿವುಡ್‌ನ (Hollywood) ಕ್ರಿಟಿಕ್ಸ್ ಅಸೋಸಿಯೇಷನ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಆರ್‌ಆರ್‌ಆರ್ ಪಡೆದಿದ್ದಯ ನಾಟು ನಾಟು ಹಾಡಿಗಾಗಿ ಸಂಗೀತ ನಿರ್ದೇಶಕದ ಎಂ ಎಂ ಕೀರವಾಣಿ (M M Keeravani) ಅವರಿಗೆ ಪ್ರಶಸ್ತಿ ಸಿಕ್ಕಿದೆ.
ಇನ್ನು ಕೊಮುರಮ್ ಭೀಮ್ ಪಾತ್ರದಲ್ಲಿ ಯಂಗ್ ಟೈಗರ್ ಜೂ. ಎನ್‌ಟಿಆರ್ (J.NTR) ಅಭಿನಯಿಸಿದ್ದರೆ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan ) ಬಣ್ಣಹಚ್ಚಿದ್ದರು. ಉಳಿದಂತೆ ಆಲಿಯಾ ಭಟ್ (Alia Bhatt) ಅಜಯ್ ದೇವ್‌ಗನ್ (Ajay Devgan) ಶ್ರೀಯಾ ಶರಣ್ (Shreya Sharan) ಒಲಿವಿಯಾ ಮೋರಿಸ್ ರಾಜೀವ್ ಕನಕಾಲ ಮಕರಂದ್ ದೇಶಪಾಂಡೆ ರಾಹುಲ್ ರಾಮಕೃಷ್ಣ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಸೆಂಥಿಲ್ ಕುಮಾರ್ ಇದರ ಛಾಯಾಗ್ರಾಹಕರು.
Advertisement