Bisleri Company: ಈ ಮೂರು IPL ತಂಡಗಳ ಜೊತೆ ಒಪ್ಪಂದ ಮಾಡಿಕೊಂಡ ಬಿಸ್ಲೇರಿ ಕಂಪನಿ.

Advertisement
ಪ್ಯಾಕೇಜ್ಡ್ ಕುಡಿಯುವ ನೀರನ್ನು ಸಪ್ಲೈ ಮಾಡುವ ಕಂಪನಿ ಬಿಸ್ಲರಿ(Bisleri) ಇದೀಗ ಅಧಿಕೃತವಾಗಿ ಐಪಿಎಲ್ ಡೆಲ್ಲಿ ಕ್ಯಾಪಿಟಲ್(Delhi Capitals) ತಂಡವನ್ನು ಸೇರಿದೆ. ಮೂರು ವರ್ಷಗಳ ಒಪ್ಪಂದ ಪೋಷಿಸಿಕೊಂಡಿದ್ದು ಅಧಿಕೃತ ಪಾಲುದಾರಿಕೆ ಪಡೆದುಕೊಂಡಿದೆ. ಈ ವರ್ಷದಿಂದ ಪ್ರಾರಂಭವಾಗುವ ಐಪಿಎಲ್ ಪಂದ್ಯಗಳ ಮೂಲಕ ಈ ಒಪ್ಪಂದ ಆರಂಭವಾಗಲಿದೆ.
“ಐಪಿಎಲ್ ನ(IPL) ಅತ್ಯುತ್ತಮ ತಂಡಗಳಲ್ಲಿ ದೆಹಲಿ ಕ್ಯಾಪಿಟಲ್ಸ್ ಕೂಡ ಒಂದು. ಇದು ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳನ್ನ ರಂಜಿಸುತ್ತಿದೆ. ನಮ್ಮ ಹೈಡ್ರೇಶನ್(Hydration) ಹಾಗೂ ಆರೋಗ್ಯವಾಗಿ ಇರಿ ಎನ್ನುವ ಉದ್ದೇಶವನ್ನು ಈ ತಂಡದ ಜೊತೆಗಿನ ಪಾಲುದಾರಿಕೆಯಿಂದ ನಮ್ಮ ಉದ್ದೇಶ ಇನ್ನಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಬಿಸ್ಲರಿ ದೇಶದ ಮೂರು ಪ್ರಮುಖ ಕ್ರೀಡಾ ಪ್ರಾಂಚೈಸಿಗಳೊಂದಿಗೆ ಪಾಲುದಾರಿಕೆ ಹೊಂದಿದೆ” ಎಂದು ಬಿಸ್ಲೆರಿ ಇಂಟರ್ನ್ಯಾಷನಲ್ ಉಪಾಧ್ಯಕ್ಷ ಜಯಂತಿ ಚೌಹಾಣ್ (Jayanti Chauhan)ತಿಳಿಸಿದ್ದಾರೆ.
Advertisement
ದೆಹಲಿ ಕ್ಯಾಪಿಟಲ್ಸ್ ತಂಡದ ಸಿ ಇ ಓ(CEO) ಧೀರಜ್ ಮಲ್ಹೋತ್ರಾ(Diraj Malhotra) ಮಾತನಾಡಿ, “ಮುಂದಿನ ಮೂರು ಐಪಿಎಲ್ ಸೀಸನ್ ನಲ್ಲಿ ಬಿಸ್ಲರಿ ಜೊತೆಗೆ ಪಾಲುದಾರಿಕೆ ಹೊಂದಲು ನಮಗೆ ಸಂತೋಷವಾಗುತ್ತಿದೆ. ಪ್ಯಾಕೇಜ್ ಕುಡಿಯುವ ನೀರಿನ ಉದ್ಯಮದಲ್ಲಿ ಬಿಸ್ಲರಿ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ ಗಳಲ್ಲಿ ಒಂದಾಗಿದೆ” ಎಂದು ಅವರು ಹೇಳಿದ್ದಾರೆ.
ಬಿಸ್ಲರಿ, ಪಾಲುದಾರಿಕೆಯಲ್ಲಿ 50 ವರ್ಷಗಳ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದು ಭಾರತದ ಅತಿ ಹೆಚ್ಚು ಲೀಗ್ ನೊಂದಿಗೆ ಗುರುತಿಸಿಕೊಂಡಿದೆ ಎಂದು ವೇವ್ ಮೇಕರ್ ಇಂಡಿಯಾದ ವೆಸ್ಟ್ ನ ಮುಖ್ಯ ಆಫೀಸರ್ ಹಾಗೂ ಹೆಡ್ ಆಗಿರುವ ಶೇಖರ್ ಬ್ಯಾನರ್ಜಿ ತಿಳಿಸಿದ್ದಾರೆ.
ದೆಹಲಿ ಕ್ಯಾಪಿಟಲ್ ಮಾತ್ರವಲ್ಲದೇ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್(Gujarath Titans) ಜೊತೆಗೆ ಬಿಸ್ಲರಿ ಸಂಪರ್ಕ ಹೊಂದಿದೆ. ಅಲ್ಲದೇ ದೇಶದ ಹಲವಾರು ಮ್ಯಾರಥಾನ್ ಈವೆಂಟ್ ಗಳ ಸಹಭಾಗಿತ್ವ ಕೂಡ ಹೊಂದಿದೆ. ಬಿಸ್ಲರಿ ದೇಶದ ಅತಿ ಹೆಚ್ಚು ಮಾರಾಟವಾಗುವ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರಾಂಡ್(Brand) ಆಗಿದೆ.
Advertisement